ಉಡುಪಿ: ಶಿವಮೊಗ್ಗದಲ್ಲಿ ಫೆಬ್ರವರಿ 20 ರಂದು ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ರಘುಪತಿ ಭಟ್, ಶರಿಯತ್ ಕಾನೂನನ್ನು ಪಾಲಿಸಲು ತಯಾರು ಇರುವವರು, ಹರ್ಷನನ್ನು ಕೊಂದ ಆರೋಪಿಗಳನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು. ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡುತ್ತೀರಾ? ಶರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಾಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ, ತರಗತಿಯಲ್ಲಿ ಹಿಜಾಬ್ ಬೇಕು ಎಂದರೆ ಅದು ಆಗೋದಿಲ್ಲ. ನಿಮ್ಮ ನಿಲುವು ಸ್ಪಷ್ಟಪಡಿಸಿ, ಹಿಜಾಬ್ ವಿಚಾರದಲ್ಲಿ ನಿಲುವೇನು? ಹರ್ಷ ಕೊಲೆಯಲ್ಲಿ ನಿಲುವೇನು? ದುಬೈ, ಸೌದಿಗಳಲ್ಲಿ ಶರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ ಎಂದರು.
ಹಿಂದೂಗಳ ಕೆಲ ಪದ್ಧತಿಗಳು ಕಾಲ ಕಾಲಕ್ಕೆ ಬದಲಾವಣೆಯಾಗಿವೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದು ಹಾಕಿದ್ದಾರೆ. ಶರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲಿಮರಿಗೆ ಕಡ್ಡಾಯ ಮಾಡಿ. ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲಿಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಮ್ನಲ್ಲಿ ಹಿಜಾಬ್ ಬೇಕು ಅನ್ನುವವರಿಗೆ ಶರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ, ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೈಕ್ ಕೊಡಿಸಲಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ ಪತಿ : ದೂರು ದಾಖಲಿಸಿದ ಗರ್ಭಿಣಿ