ETV Bharat / state

ಶಂಕರಿ ಬಿದರಿ ಇ-ಮೇಲ್ ಐಡಿ ಹ್ಯಾಕ್​: ಸ್ನೇಹಿತರಿಗೆ ಸಂದೇಶ ಕಳುಹಿಸಿ 25 ಸಾವಿರ ರೂ. ವಂಚನೆ - Shankari Bidari news

ಸಂದೇಶದ ಜೊತೆಗೆ ಖಾಸಗಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಕಳಿಸಿದ್ದಾರೆ. ಶಂಕರ್ ಬಿದರಿಯವರೇ ಇ-ಮೇಲ್ ಮಾಡಿದ್ದಾರೆಂದು ಭಾವಿಸಿ ಅವರ ಸ್ನೇಹಿತರೊಬ್ಬರು ಆ ಬ್ಯಾಂಕ್​ ಖಾತೆಗೆ 25 ಸಾವಿರ ಹಣವನ್ನು ಹಾಕಿದ್ದಾರೆ. ಬಿದರಿ ಇ-ಮೇಲ್​ ಐಡಿ ಹ್ಯಾಕ್​ ಆಗಿರುವುದು ಬೆಳಕಿಗೆ ಬಂದಿದೆ.

ಶಂಕರ್ ಬಿದರಿ
ಶಂಕರ್ ಬಿದರಿ
author img

By

Published : Feb 28, 2021, 10:43 AM IST

ಬೆಂಗಳೂರು: ನಿವೃತ್ತ ಡಿಜಿ & ಐಜಿಪಿ ಶಂಕರಿ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಅವರ ಸ್ನೇಹಿತರಿಗೆ ಇ-ಮೇಲ್ ಮೂಲಕ ಹಣ ಪೀಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇ-ಮೇಲ್​ ಸಂದೇಶದ ಜೊತೆಗೆ ಖಾಸಗಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಕಳಿಸಿದ್ದಾರೆ. ಶಂಕರ್ ಬಿದರಿಯವರೇ ಇ-ಮೇಲ್ ಮಾಡಿದ್ದಾರೆಂದು ಭಾವಿಸಿ ಅವರ ಸ್ನೇಹಿತರೊಬ್ಬರು ಆ ಬ್ಯಾಂಕ್​ ಖಾತೆಗೆ 25 ಸಾವಿರ ಹಣವನ್ನು ಹಾಕಿದ್ದಾರೆ.

ಸ್ನೇಹಿತರು 25 ಸಾವಿರ ಹಣ ಜಮೆ ಮಾಡಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಇ-ಮೇಲ್ ಐಡಿ ಹ್ಯಾಕ್ ಆಗಿರುವುದು ಗೊತ್ತಾಗಿದ್ದು, ಶಂಕರ್ ಬಿದರಿಯವರು ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇ-ಮೇಲ್ ಐಡಿ ಹ್ಯಾಕ್ ಮಾಡಿದವರನ್ನ ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಬಿದರಿ ಕೋರಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.