ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿಯವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಷಡಕ್ಷರಿ ಸ್ವಾಮಿಯವರನ್ನು ಕೆಪಿಎಸ್ಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಹಿಂದಿನ ಮೈತ್ರಿ ಸರ್ಕಾರ ನೇಮಿಸಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ಕೂಡ ಅವರನ್ನೇ ಪೂರ್ಣಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿದೆ. ಷಡಕ್ಷರಿ ಅವರು ಸುತ್ತೂರು ಮಠದ ಸ್ವಾಮೀಜಿಗಳ ತಮ್ಮನಾಗಿದ್ದು, 2017ರಲ್ಲಿ ಕೆಪಿಎಸ್ಸಿ ಸದಸ್ಯರಾಗಿ ನೇಮಕಗೊಂಡಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಸಂಪುಟ ಸಭೆಯಲ್ಲಿ ಜ.2019ರಲ್ಲಿ ಷಡಕ್ಷರಿ ಸ್ವಾಮಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿ ತೀರ್ಮಾನ ಕೈಗೊಂಡಿತ್ತು. ಇದೀಗ ಯಡಿಯೂರಪ್ಪ ಅವರ ಹೊಸ ಸರ್ಕಾರ ಷಡಕ್ಷರಿಯವರನ್ನೇ ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.