ETV Bharat / state

ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ..ಆರೋಪಿ ಬಂಧನ - ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಬಳಿ ಬಂದಿದ್ದ ಆರೋಪಿ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

author img

By

Published : Mar 24, 2021, 10:56 AM IST

ಬೆಂಗಳೂರು: ಪೋಷಕರ ಜೊತೆ ಪಬ್​ಗೆ ಹೋದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮುಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ಚೆಲ್ಲಾರಾಮ್ ಬಂಧಿತ ಆರೋಪಿ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ರೋಡ್​ನಲ್ಲಿರುವ ಮೀರಾಜ್ ಬಾರ್ ಅಂಡ್ ರೆಸ್ಟೊರೆಂಟ್​ನಲ್ಲಿ ಘಟನೆ ನಡೆದಿತ್ತು. ಶರತ್ ರೈ ಎಂಬುವರಿಗೆ ಸೇರಿದ ಪಬ್​ನಲ್ಲಿ ಇದೇ ತಿಂಗಳ 21ರ ರಾತ್ರಿ 9.30ಕ್ಕೆ ತಾಯಿ ಹಾಗೂ ಸ್ನೇಹಿತರ ಜೊತೆ ಯುವತಿಯು ಪಬ್​ಗೆ ಹೋಗಿದ್ದಳು. ಈ ವೇಳೆ ಮಧುಸೂದನ್ ಸ್ನೇಹಿತೆಯ ಕಡೆಯಿಂದ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ.

ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಬಳಿ ಬಂದಿದ್ದ ಮಧುಸೂದನ್ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ‌‌. ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ: ತಡರಾತ್ರಿ ಕಿಡಿಗೇಡಿಗಳ ದಾಂಧಲೆ: 20 ಕಾರಿನ ಗಾಜು ಪೀಸ್ ಪೀಸ್

ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೊಂದ ಯುವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.