ETV Bharat / state

ಬಿಜೆಪಿಗೆ ಮುಳುವಾದ ಹಿರಿಯರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಿದ ಹೊಸ ಪ್ರಯೋಗ!

ಈ ಬಾರಿ ಹಿರಿಯರಿಗೆ ಕೊಕ್ ನೀಡಿ ಹೊಸ ಪ್ರಯೋಗವು ಮಾಡಿರುವುದು ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದೆ.

setback-for-bjp-in-karnataka-assembly-elactions
ಬಿಜೆಪಿಗೆ ಮುಳುವಾದ ಹಿರಿಯರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಿದ ಹೊಸ ಪ್ರಯೋಗ
author img

By

Published : May 13, 2023, 11:45 AM IST

Updated : May 14, 2023, 8:44 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿಗೆ ಹಿನ್ನಡೆ ಆಗುತ್ತಿದೆ. ಬಿಜೆಪಿ ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲಿ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಿತ್ತು. ಆ ನಿಮಿತ್ತ ಹಿರಿಯರಿಗೆ ಕೊಕ್ ನೀಡಿ ಹೊಸ ಪ್ರಯೋಗ ಮಾಡಿತ್ತು. ಆದರೆ ಹೊಸ ಮುಖ, ಹಿರಿಯರನ್ನು ಕೈ ಬಿಟ್ಟ ಪ್ರಯೋಗ ಬಿಜೆಪಿ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಈ ಬಾರಿ ಜನಾಶೀರ್ವಾದ ಕಾಂಗ್ರೆಸ್ ಪರ ವಾಲಿದೆ. ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುವ ಕಮಲದ ಕನಸು ಕಮರಿದೆ. ಬಹುಮತಗಳಿಸುವ ವಿಶ್ವಾಸದಲ್ಲಿದ್ದ ಬಿಜೆಪಿ ಪಡೆಗೆ ಮತಪ್ರಭುಗಳು ಆಘಾತ ನೀಡಿದ್ದಾರೆ. ಈ‌ ಬಾರಿ ಬಿಜೆಪಿ ಹೈ ಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕಿ ಹಿರಿಯರಿಗೆ ಟಿಕೆಟ್ ನೀಡದೇ ಹೊಸ ಪ್ರಯೋಗ ಮಾಡಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಗುಜರಾತ್ ಚುನಾವಣೆ ವೇಳೆ ಅನುಕರಿಸಿದ ಮಾದರಿಯನ್ನೇ ಬಿಜೆಪಿ ರಾಜ್ಯದಲ್ಲಿ ಅಳವಡಿಸಿತ್ತು.

ಅದರಂತೆ ಕೆಲ ಹಿರಿಯರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಿದೆ. ಆದರೆ ಫಲಿತಾಂಶ ನೋಡಿದರೆ ರಾಜ್ಯದಲ್ಲಿ ಗುಜರಾತ್ ಮಾಡೆಲ್ ನಂತೆ ಹೊಸ ಮುಖಗಳಿಗೆ ಟಿಕೆಟ್ ನೀಡಿದ ನಿರ್ಧಾರ ಫಲ ನೀಡಿಲ್ಲ. ಬಹುತೇಕ ಕಡೆ ಹೊಸ ಮುಖಗಳು ಗೆಲುವು ಸಾಧಿಸಲು ವಿಫಲವಾಗಿದ್ದಾರೆ. ಹೊಸ ಮುಖದ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಮಾಡಿದ ಕಸರತ್ತು ಕೈ ಕೊಟ್ಟಿದೆ.

75 ಹೊಸ ಮುಖ, 24 ಹಾಲಿಗಳಿಗೆ ಕೊಕ್: ಬಿಜೆಪಿ ಗುಜರಾತ್ ಮಾಡೆಲ್ ನಂತೆ ಕರ್ನಾಟಕದಲ್ಲೂ ಒಟ್ಟು 75 ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಈ ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ ಒಟ್ಟು 24 ಹಾಲಿ ಶಾಸಕರಿಗೆ ಕೊಕ್ ನೀಡಿತ್ತು. ಆ ಮೂಲಕ ಯುವ ಅಭ್ಯರ್ಥಿಗಳ ಜೊತೆಗೆ ಪಕ್ಷಕ್ಕೆ ಹೊಸ ಶಕ್ತಿ ನೀಡುವ ಕಸರತ್ತು ನಡೆಸಿತ್ತು. ಆದರೆ ಹೊಸ ಮುಖಗಳಿಗೆ ಮಣೆ ಹಾಕುವ ಭರದಲ್ಲಿ ಹಿರಿಯರನ್ನು ಕಡೆಗಣಿಸಿರುವ ಚುನಾವಣಾ ತಂತ್ರ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿತು.

ಬಿಜೆಪಿ ಈ ಬಾರಿ ಒಟ್ಟು 24 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅದರಲ್ಲಿ ಪ್ರಮುಖವಾಗಿ ಶಿಕಾರಿಪುರ ಹಾಲಿ ಶಾಸಕ ಬಿ.ಎಸ್.ಯಡಿಯೂರಪ್ಪ, ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದ ಹಾಲಿ ಶಾಸಕ ಜಗದೀಶ್ ಶೆಟ್ಟರ್, ಶಿವಮೊಗ್ಗ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ, ಎಂಎಲ್ ಸಿ ಲಕ್ಷ್ಮಣ್ ಸವದಿ, ಮಹದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್, ಚನ್ನಗಿರಿ ಶಾಸಕ ಮಾಡಾಲ್ ವಿರೂಪಾಕ್ಷಪ್ಪ, ವಿಜಯನಗರದ ಶಾಸಕ ಆನಂದ್ ಸಿಂಗ್, ಸುಳ್ಯ ಕ್ಷೇತ್ರದ ಹಾಲಿ ಶಾಸಕ ಎಸ್.ಅಂಗಾರ, ಉಡುಪಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಹಾಲಡಿ ಶ್ರೀನಿವಾಸ್ ಶೆಟ್ಟಿ, ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್, ಕಾಪು ಕ್ಷೇತ್ರದ ಲಾಲಜಿ ಮೆಂಡನ್ ಪ್ರಮುಖರಾಗಿದ್ದಾರೆ.

ಇವರ ಸ್ಥಾನದಲ್ಲಿ ಬಿಜೆಪಿ ಹೈ ಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕಿದೆ. ಯುವ ನಾಯಕರ ಪಡೆ ನಿರ್ಮಿಸುವ ಸದುದ್ದೇಶದಿಂದ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡಿದೆ. ಆದರೆ ಮತಪ್ರಭುಗಳು ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿಲ್ಲ. ಹಲವೆಡೆ ಬಿಜೆಪಿಯ ಹೊಸ ಮುಖಗಳು ಸೋಲಿನ ರುಚಿ ಕಾಣಬೇಕಾಯಿತು. ಇದರಿಂದ ಪಕ್ಷದ ಬಹುಮತ ಪಡೆಯುವ ಕನಸು ಭಗ್ನವಾಗಿದೆ.

ಯಡಿಯೂರಪ್ಪ ನಿವೃತ್ತಿ ಎಫೆಕ್ಟ್: ಲಿಂಗಾಯತ ನಾಯಕ ಹಿರಿಯ ಮುಖಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲ ಪರಿಣಾಮ‌ ಬೀರಿದಂತೆ ಕಂಡು ಬರುತ್ತಿದೆ. ತಮ್ಮ ಮಗನಿಗೆ ಶಿಕಾರಿಪುರ ಸ್ಥಾನವನ್ನು ತೆರವುಗೊಳಿಸಿದರೂ, ಲಿಂಗಾಯತ ಪ್ರಬಲ ನಾಯಕ ಚುನಾವಣಾ ರಾಜಕೀಯದಿಂದ ನೇಪತ್ಯಕ್ಕೆ ಸರಿದಿರುವುದು ರಾಜ್ಯ ವ್ಯಾಪಿ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ. ಒಂದಷ್ಟು ಲಿಂಗಾಯತ ಸಮುದಾಯದವರು ಯಡಿಯೂರಪ್ಪ ಕಡೆಗಣನೆಯ ಸಿಟ್ಟಿನಿಂದ ಬಿಜೆಪಿಗೆ ಏಟು ನೀಡಿದೆ.

ಜಗದೀಶ್ ಶೆಟ್ಟರ್, ಸವದಿ ಬಂಡಾಯ: ಇತ್ತ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡದೇ ಇರುವುದು ಬಿಜೆಪಿಗೆ ದುಬಾರಿಯಾಗಿದೆ. ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡದೇ ಹೊಸಬರಿಗೆ ಟಿಕೆಟ್ ನೀಡಿರುವುದು ಲಿಂಗಾಯತ ನಾಯಕನಿಗೆ ಮೋಸ ಮಾಡಿದ್ದಾರೆ ಎಂಬ ಆಕ್ರೋಶ ಸಮುದಾಯದಲ್ಲಿ ಮೂಡಿದೆ. ಇದರ ಪ್ರತಿಕೂಲ ಪರಿಣಾಮ ಸುತ್ತಮುತ್ತ ಕ್ಷೇತ್ರದತ್ತ ಬೀರಿದೆ ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಬಿಜೆಪಿಗೆ ಠಕ್ಕರ್ ನೀಡಿದ್ದಾರೆ.

ಇತ್ತ ಅಥಣಿಯಲ್ಲಿ ಮಹೇಶ್ ಕುಮ್ಟಹಳ್ಳಿಗೆ ಅವಕಾಶ ನೀಡುವ ಸಲುವಾಗಿ ಹಿರಿಯ ಬಿಜೆಪಿ ಮುಖಂಡ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡಿಲ್ಲ. ಬಂಡಾಯವೆದ್ದ ಸವದಿ ಕಾಂಗ್ರೆಸ್ ನಿಂದ‌ ಕಣಕ್ಕಿಳಿದಿದ್ದಾರೆ. ಇದರಿಂದಲೂ ಸುತ್ತಮುತ್ತ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು ಬಿಜೆಪಿಯ ಹಿರಿಯ ಮುಖಗಳನ್ನು ಕಡೆಗಣಿಸಿ ಹೊಸಬರಿಗೆ ಟಿಕೆಟ್ ನೀಡಿರುವುದನ್ನು ಕ್ಷೇತ್ರದ ಜನರು ಒಪ್ಪಿಕೊಂಡಿಲ್ಲ. ಬಿಜೆಪಿ ಹಿರಿಯರನ್ನು ಕಡೆಗಣಿಸಿದೆ ಅದರ ಜೊತೆಗೆ ಸಮುದಾಯದ ನಾಯರನ್ನು ನೇಪತ್ಯಕ್ಕೆ ತಳ್ಳಿದೆ ಎಂಬ ಆಯಾ ಸಮಾಜದಲ್ಲಿ ಉಂಟಾದ ಬಲವಾದ ಭಾವನೆಯೂ ಬಿಜೆಪಿ ವಿರುದ್ಧ ಮತ ಹಾಕುವಂತೆ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಶುರುವಾಯಿತು ಸಿಎಂ ಆಯ್ಕೆ ಕಸರತ್ತು; ಯಾರಿಗೆ ಸಿಗಲಿದೆ ಪಟ್ಟ!

Last Updated : May 14, 2023, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.