ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರ ಬೆಂಬಲಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಚೇತನ ಹೆಸರಿನ ಹೊಸ ಉಪಕ್ರಮಕ್ಕೆ ಚಾಲನೆ ನೀಡಿದೆ.
ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ಲ್ಲಿರುವ ಇತರೆ ಕಾರ್ಪೋರೇಟ್ ಸಂಸ್ಥೆಗಳಾದ ಎಚ್ಎಂಎಸ್ ಹೋಸ್ಟ್, ಸತೀಸ್ ಡೈನಿಂಗ್, ತಾಜ್ ಬೆಂಗಳೂರು, ಟ್ರಾವಲ್ ಫುಡ್ ಸರ್ವೀಸಸ್(ಟಿಎಫ್ಎಸ್) ಗಳೊಂದಿಗೆ ಕೈಗೂಡಿಸಿ ಜಂಟಿ ಕಾರ್ಯವನ್ನು ಆರಂಭಿಸಿದೆ. ಇದರಡಿಯಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪ್ರತಿದಿನ 3,500 ಆಹಾರದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ.
ಜಿಲ್ಲಾಡಳಿತದ ಬೆಂಬಲದ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನಲ್ಲಿ ಅಗತ್ಯವಿರುವವರಿಗೆ ಈ ಆಹಾರವನ್ನು ತಲುಪಿಸಲಾಗುತ್ತದೆ. ಸುಮಾರು 3,500 ದೈನಂದಿನ ಊಟದ ಪೊಟ್ಟಣಗಳಲ್ಲಿ ಮಧ್ಯಾಹ್ನದ ಭೋಜನಕ್ಕಾಗಿ 2,000 ಪೊಟ್ಟಣಗಳು ಮತ್ತು ರಾತ್ರಿಯ ಭೋಜನಕ್ಕಾಗಿ 1,500 ಭೋಜನದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ.
ನಮ್ಮ ಚೇತನ’ ಎಂಬ ಯೊಜನಾ ಕ್ರಮವನ್ನು ನಾವು ಆರಂಭಿಸಿದ್ದೇವೆ. ಈ ಮುಖಾಂತರ ಪ್ರಸ್ತುತ ಸನ್ನಿವೇಶದಲ್ಲಿ ಬಳಲುತ್ತಿರುವ ನಮ್ಮಿಂದಾದ ಸಹಕಾರ ಮಾಡುತ್ತಿದ್ದೇವೆ ಎಂದು ಎಂದು ಬಿಐಎಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರರ್ ಹೇಳಿದ್ದಾರೆ.