ETV Bharat / state

Server Hack: ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ; ಓರ್ವನ ಬಂಧನ

author img

By

Published : Aug 17, 2023, 9:50 PM IST

ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಅಮೆಜಾನ್ ಕಂಪೆನಿ ಸರ್ವರ್ ಹ್ಯಾಕ್
ಅಮೆಜಾನ್ ಕಂಪೆನಿ ಸರ್ವರ್ ಹ್ಯಾಕ್
ಅಮೆಜಾನ್ ಕಂಪೆನಿ ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ವಂಚನೆ

ಬೆಂಗಳೂರು : ಇ-ಕಾರ್ಮಸ್ ಕಂಪನಿಗಳಲ್ಲೊದಾದ ಅಮೆಜಾನ್‌ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೋಸ ಮಾಡುತ್ತಿದ್ದ ಜಾಲವನ್ನು ಯಶವಂತಪುರ ಪೊಲೀಸರು ಬಯಲಿಗೆಳೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಚಿರಾಗ್ ಬಂಧಿತ ಆರೋಪಿ.

ಚಿರಾಗ್​ ಎಂಬಾತ ನಗರ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ನೀಡಿದ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ. ಆನ್‌ಲೈನ್ ಮುಖಾಂತರ ಐಫೋನ್, ವಿವಿಧ‌ ಕಂಪನಿಗಳ ಮೊಬೈಲ್​ಗಳು ಹಾಗೂ ಎಲೆಕ್ಟ್ರಾನಿಕ್ ಡಿವೈಸ್​ಗಳನ್ನು ಬುಕ್ ಮಾಡುತ್ತಿದ್ದ. ಡೆಲಿವರಿ ಆದ ನಂತರ ಡ್ಯಾಮೇಜ್ ಆಗಿದೆ ಎಂದು ವಸ್ತುಗಳನ್ನು ವಾಪಸ್ ನೀಡುವ ಹಾಗೆಯೇ ಕಂಪನಿಯ ಅಪ್ಲಿಕೇಶನ್​ನಲ್ಲಿ ತೋರಿಸಿ ಪಾವತಿಸಿದ್ದ ಹಣವನ್ನು ರಿಫಂಡ್ ಮಾಡಿಸಿಕೊಳ್ಳುತ್ತಿದ್ದ. ಹೀಗೆ ಖರೀದಿಸಿದ ವಸ್ತುಗಳನ್ನು ತನ್ನಲ್ಲೇ ಇಟ್ಟುಕೊಂಡು ಕಂಪನಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ.

ನಷ್ಟವಾಗುತ್ತಿರುವ ಬಗ್ಗೆ ಇತ್ತೀಚಿಗೆ ಕಂಪನಿ ಪ್ರತಿನಿಧಿಗಳು, ಒಂದೇ ವಿಳಾಸದಿಂದ ನಾಲ್ಕು ಬಾರಿ ಆನ್‌ಲೈನ್‌ನಲ್ಲಿ ವಿವಿಧ ಕಂಪನಿಗಳ ಮೊಬೈಲ್​ಗಳನ್ನು ಬುಕ್ ಮಾಡಿದ್ದ ಚಿರಾಗ್ ಮನೆಗೆ ಬಂದು ನೋಡಿದ್ದಾರೆ. ಅನುಮಾನಗೊಂಡು ಚಿರಾಗ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಪನಿಯ ಡೇಟಾ ಹಾಗೂ ಬುಕ್ ಮಾಡಿದ ಆರ್ಡರ್ ಪರಿಶೀಲಿಸಿದಾಗ ಆರೋಪಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Bengaluru crime: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚನೆ; ನಾಲ್ವರ ಬಂಧನ

ಹೆಚ್ಚಿನ ವಿಚಾರಣೆಗೆ ಆರೋಪಿ ಚಿರಾಗ್‌ನನ್ನು ಒಳಪಡಿಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾನೆ‌‌. ಹ್ಯಾಕರ್‌ವೋರ್ವನ ಸೂಚನೆಯ ಮೇರೆಗೆ ಗ್ರಾಹಕನ ರೂಪದಲ್ಲಿ ವಂಚಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಟೆಲಿಗ್ರಾಮ್ ಆ್ಯಪ್ ಮುಖಾಂತರ ಪ್ರಮುಖ ಆರೋಪಿ ಪರಿಚಯಿಸಿಕೊಂಡು ಆತ ಹೇಳಿದಂತೆ‌ ಹೇಳುತ್ತಿದ್ದೆ. ಆನ್‌ಲೈನ್‌ನಲ್ಲಿ ಬುಕ್‌ಮಾಡಿ ಹಣ ಪಾವತಿಸಿ ಡೆಲಿವರಿ ಆದ ಬಳಿಕ ಆತನಿಗೆ ತಿಳಿಸುತ್ತಿದ್ದೆ. ಆತ ಅಮೆಜಾನ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ವಸ್ತುಗಳನ್ನು ವಾಪಸ್ ಮಾಡಿದಂತೆ ತೋರಿಸುತ್ತಿದ್ದ. ಕ್ರಿಪ್ಟೊ ಕರೆನ್ಸಿ ಮೂಲಕ ಕಮಿಷನ್ ಪಡೆಯುತ್ತಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಬಂಧಿತನಿಂದ 20.34 ಲಕ್ಷ ಮೌಲ್ಯದ ಐಫೋನ್ ಸೇರಿ ವಿವಿಧ ಕಂಪನಿಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಆತನ ಖಾತೆಯಲ್ಲಿದ್ದ 30 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಿಷನ್ ಆಸೆ ತೋರಿಸಿ ಬೆಂಗಳೂರು ಸೇರಿ ಭಾರತದಲ್ಲಿ ಯುವಕರ ಮುಖಾಂತರ ವಂಚನೆ ಮಾಡುತ್ತಿದ್ದ. ಬೆಂಗಳೂರಿನಲ್ಲಿ 1 ಕೋಟಿ ಸೇರಿದಂತೆ ದೇಶದಲ್ಲೇ ಸುಮಾರು 13 ಕೋಟಿವರೆಗೂ ಮೋಸ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.‌ ನಾಪತ್ತೆಯಾಗಿರುವ ಆರೋಪಿಯ ಬಂಧನಕ್ಕಾಗಿ‌ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Bengaluru crime: 1,500 ಎಳನೀರು ಕಳ್ಳತನ! UPI ಪಾವತಿಯಲ್ಲಿ ಸಿಕ್ಕಿಬಿದ್ದ 'ಎಳನೀರು ಕಳ್ಳರು'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.