ಬೆಂಗಳೂರು: ಐಪಿಎಸ್ ಅಧಿಕಾರಿಯೋರ್ವರ ಸಹೋದರ ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ಅವರ ಹೆಂಡತಿ ರೋಜಾ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ.
'2016ರಲ್ಲಿ ರಾಘವೇಂದ್ರ ಡಿ.ಚನ್ನಣ್ಣನವರ್ ನನ್ನ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಅಕ್ರಮ ಸಂಬಂಧ ಇರಿಸಿಕೊಂಡಿದ್ದರು' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ
'ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಹಲವು ಬಾರಿ ಹಣ ಪಡೆದು ಬೆದರಿಕೆ ಹಾಕಲಾಗಿದೆ' ಎಂದು ರೋಜಾರ ತಂದೆ ಲೋಕೇಶ್ ದೂರಿದರು. 'ಈ ಅನ್ಯಾಯದ ವಿರುದ್ಧ ಈಗ ಸಿಟಿ ಸಿವಿಲ್ ಕೋರ್ಟ್ಗೆ ಹೋಗಿ ಪ್ರಕರಣ ದಾಖಲಿಸಿದ್ದೇವೆ. ಇದೇ ತಿಂಗಳ 30ರಂದು ವಿಚಾರಣೆ ನಡೆಸುವುದಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ತಿಳಿಸಿದೆ' ಎಂದು ಅವರು ಹೇಳಿದರು.