ETV Bharat / state

ಬಿಬಿಎಂಪಿ ಕಸದ ಲಾರಿಗಳಿಂದ ಸರಣಿ ಅಪಘಾತ : ಕಡ್ಡಾಯ ನಿಯಮಗಳನ್ನು ಜಾರಿಗೆ ತಂದ ಪಾಲಿಕೆ

ಇನ್ಮುಂದೆ ಕಾಂಪ್ಯಾಕ್ಟರ್​ಗಳು ರಸ್ತೆಗಿಳಿಯುವ ಮುನ್ನ ಕೆಲ ಕಡ್ಡಾಯ ನಿಯಮ ಪಾಲಿಸಬೇಕಿದೆ. ಎಲ್ಲ ಕಾಂಪ್ಯಾಕ್ಟರ್‌ಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ತಪಾಸಣೆ ಆಗಿರಬೇಕು. ಇದನ್ನು ಮಾರ್ಷಲ್ಸ್ ಪರಿಶೀಲಿಸಬೇಕು. ಅನುಭವಿ ಚಾಲಕರಿರಬೇಕು ಎಂಬುದು ಸೇರಿಂದತೆ ಎಲ್ಲಾ ಕಾಂಪ್ಯಾಕ್ಟರ್-ಟಿಪ್ಪರ್​ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ಪಾಲಿಕೆ ನಿಯಮ ಹೊರಡಿಸಿದೆ..

author img

By

Published : Apr 19, 2022, 7:11 PM IST

Series of Accidents from BBMP trash truck: enforce compliance with mandatory rules
ಬಿಬಿಎಂಪಿ

ಬೆಂಗಳೂರು : ಪಾಲಿಕೆ ಕಸದ ಲಾರಿಯಿಂದಾಗಿ ಮೂರು ಸರಣಿ ಅಪಘಾತಗಳಾಗಿವೆ. ಹಾಗಾಗಿ, ಬಿಬಿಎಂಪಿ ಇದನ್ನು ತಡೆಯಲು ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಕಾಂಪ್ಯಾಕ್ಟರ್​ಗಳು ರಸ್ತೆಗಿಳಿಯುವ ಮುನ್ನ ಕೆಲ ಕಡ್ಡಾಯ ನಿಯಮ ಪಾಲಿಸಬೇಕಿದೆ. ನಿನ್ನೆ ನಾಯಂಡಹಳ್ಳಿ ರೈಲ್ವೆ ಅಂಡರ್ ಪಾಸ್ ಬಳಿ ನಡೆದ ಅಪಘಾತಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಮೃತಪಟ್ಟ ಹಿನ್ನೆಲೆ ನಿಯಮಗಳ‌ನ್ನು ಜಾರಿಗೆ ತರಲಾಗಿದೆ ಎಂದು ಪಾಲಿಕೆ ಹೇಳಿದೆ.

ಎಲ್ಲ ಕಾಂಪ್ಯಾಕ್ಟರ್​​ಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ತಪಾಸಣೆ ಆಗಿರಬೇಕು. ಇದನ್ನು ಮಾರ್ಷಲ್ಸ್ ಪರಿಶೀಲಿಸಬೇಕು. ಅನುಭವಿ ಚಾಲಕರಿರಬೇಕು ಎಂಬುದು ಸೇರಿದಂತೆ ಎಲ್ಲಾ ಕಾಂಪ್ಯಾಕ್ಟರ್-ಟಿಪ್ಪರ್​ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ಪಾಲಿಕೆ ನಿಯಮ ಹೊರಡಿಸಿದೆ. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಚೆಕ್ಕಿಂಗ್ ಕೈಗೊಂಡು ವಾಹನ ಸಂಚಾರ ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಹೆಂಡತಿ ಹೋಲಿಕೆ ಇರುವ 'ನೀಲಿ ಚಿತ್ರ' ನೋಡಿದ ಗಂಡ: ಆಕೆ ತನ್ನ ಹೆಂಡತಿಯೇ ಎಂದು ಇರಿದು ಕೊಂದ!

ಮೇಲ್ಸೇತುವೆಗಳ ಅಕ್ಕಪಕ್ಕದಲ್ಲಿ ಬಹಳ ವೇಗವಾಗಿ ವಾಹನಗಳು ಓಡಾಡುತ್ತವೆ. ಇಂತಹ ಜಾಗದಲ್ಲಿ ಮಾರ್ಗಮಧ್ಯೆಯ ರಸ್ತೆ ವಿಭಜಕದ ಎತ್ತರ ಏರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಾದಾಚಾರಿಗಳಿಗೆ ರಸ್ತೆದಾಟಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಗುತ್ತಿಗೆದಾರರಿಗೆ ಪ್ರತು ತಿಂಗಳು ವಾಹನಗಳ ನಿರ್ವಹಣೆಗೆ ಪಾಲಿಕೆ ಹಣ ನೀಡುತ್ತಿದೆ.

ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಸುವುದು ಗುತ್ತಿಗೆದಾರರ ಜವಾಬ್ದಾರಿ. ಈ ಬಗ್ಗೆ ಈಗಾಗಲೇ ಗುತ್ತಿಗೆದಾರರ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ವೇಳೆ ಹೊಸ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಮೃತಪಟ್ಟ ಪದ್ಮಿನಿ ಕುಟುಂಬಕ್ಕೆ ಪರಿಹಾರ : ನಿನ್ನೆ ಅಪಘಾತದಲ್ಲಿ ಮೃತಪಟ್ಟ ಆರ್‌ಆರ್‌ನಗರದ ನಿವಾಸಿ ಪದ್ಮಿನಿ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಅಪಘಾತಗಳಾದ ಇನ್ಶೂರೆನ್ಸ್ ಇರುತ್ತವೆ. ಮಾನವೀಯತೆ ದೃಷ್ಟಿಯಿಂದ ಪಾಲಿಕೆ ವತಿಯಿಂದ ಪರಿಹಾರ ಕೊಡಲಾಗುವುದು. ಘಟನೆಯ ಸಂಪೂರ್ಣ ವರದಿ ಬಂದ ಮೇಲೆ ಪರಿಹಾರ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.