ಬೆಂಗಳೂರು : ಸುಮಾರು 12 ವರ್ಷಗಳ ಹಿಂದೆ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನ ಖೆಡ್ಡಾಕೆ ಕೆಡವಲಾಗಿದೆ. ರೆಡ್ ಕಾರ್ನರ್ ನೋಟಿಸ್ ಮೂಲಕ ಗಾಯಬ್ ಆಗಿದ್ದ ಶೋಯೆಬ್ ನನ್ನ ಅರೆಸ್ಟ್ ಮಾಡಿ ಸದ್ಯ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಶಕ್ಕೆ ಪಡೆಯಲಾಗಿದೆ.
2008ರ ಸರಣಿ ಬಾಂಬ್ ಬ್ಲಾಸ್ಟ್ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶೋಯೆಬ್ ಕೇರಳಕ್ಕೆ ಬರುವ ಮಾಹಿತಿ ಎಟಿಎಸ್ ತಂಡಕ್ಕೆ ಲಭ್ಯವಾಗಿತ್ತು. ಹೀಗಾಗಿ, ಬ್ಲಾಸ್ಟ್ ನಂತರ ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದ ಸಿಸಿಬಿ ಎಟಿಎಸ್ ನಿರಂತರವಾಗಿ ತೀವ್ರ ತನಿಖೆ ನಡೆಸುತ್ತಿದ್ದರು. ಇದೀಗ ಸತತ 12 ವರ್ಷದ ಬಳಿಕ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಎಟಿಎಸ್ ಶೋಯಬ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಅಂದಹಾಗೆ ಬೆಂಗಳೂರಿನ ಕೋರಮಂಗಲ, ಲಾಂಗ್ ಫೋರ್ಡ್ ರಸ್ತೆ, ಮಡಿವಾಳ ಹೀಗೆ 9 ಕಡೆ ಸ್ಫೋಟವಾಗಿತ್ತು.
ಒಟ್ಟು 9 ಕೇಸ್ ದಾಖಲಿಸಿ 32 ಜನ ಆರೋಪಿಗಳನ್ನ ಬಂಧಿಸಿದ್ದರು. ಶೋಯಬ್ ಫೈಜಲ್ ಪ್ರಕರಣದ 32ನೇ ಆರೋಪಿ. ಕೇರಳದ ಕಣ್ಣೂರು ಮೂಲದ ಶೋಯಬ್ ಬಡ ಕುಟುಂಬದವನಾಗಿದ್ದಾನೆ. ಈತ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮೇಜರ್ ಪಾತ್ರ ಹೊಂದಿದ್ದ. ಈ ಶೋಯಬ್ ಬಾಂಬ್ ಎಲ್ಲಿ ಇಡಬೇಕು, ಯಾವ ಜಾಗದಲ್ಲಿ ಇಡಬೇಕು, ಬಾಂಬ್ಗೆ ಬೇಕಾದ ಕಚ್ಚಾ ವಸ್ತುಗಳನ್ನು ಕೂಡ ತಂದಿದ್ದ. ಬಾಂಬ್ ಸ್ಫೋಟವಾದ ಐದು ದಿನಗಳ ನಂತರ ಕೇರಳಗೆ ಎಸ್ಕೇಪ್ ಆಗಿದ್ದ. ನಂತರ ಅಲ್ಲಿಂದ ದುಬೈಗೆ ಹೋಗಿ ಸೆಟಲ್ ಆಗಿದ್ದ. ದುಬೈನಲ್ಲಿ ಖಾಸಗಿ ಶಾಲೆಯಲ್ಲಿ ಅಕೌಂಟೆಂಟ್ ಕೆಲಸ ಮಾಡ್ತಿದ್ದ.
ಸುಮಾರು 12 ವರ್ಷ ದುಬೈನಲ್ಲಿ ನೆಲಸಿದ್ದ. ತದನಂತರ ಅಲ್ಲಿಂದ ಕೇರಳಕ್ಕೆ ಪಲಾಯನ ಮಾಡಲು ಫ್ಲಾನ್ ಮಾಡಿದ್ದ .ಇದೇ ಮಾಹಿತಿಯಾಧಾರದ ಮೇರೆಗೆ ಖೆಡ್ಡಾಕ್ಕೆ ಕೆಡವಿದ್ದಾರೆ. ಹಾಗೆ ಕೇರಳ ಮೂಲದ ಅಬ್ದುಲ್ ನಾಸಿರ್ ಮದನಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತನ ಬಲಗೈ ಬಂಟನಂನಂತೆ ಇದ್ದು, ಲಸ್ಕರ್ತೊಯ್ಬ ಮತ್ತು ಸಿಮಿ ಸಂಘಟನೆಗಳ ಜೊತೆ ತನ್ನನ್ನ ಗುರುತಿಸಿಕೊಂಡಿದ್ದ. ಇನ್ನೂ ಮಡಿವಾಳ, ಬ್ಯಾಟರಾಯನಪುರದಲ್ಲಿ ಎರಡು ಪ್ರಕರಣ ಈತನ ಮೇಲಿದ್ರೆ, ಆಶೋಕನಗರದಲ್ಲಿ ಎರಡು ಪ್ರಕರಣ, ಕೋರಮಂಗಲ, ಕೆಂಗೇರಿ, ಸಂಪಂಗಿರಾಮನಗರ ಹಾಗೂ ಆಡುಗೋಡಿಯಲ್ಲಿ ಪ್ರಕರಣ ದಾಖಲಾಗಿದ್ದವು. ಇದರ ಬಗ್ಗೆ ನಿರಂತರ ಕಾರ್ಯಾಚರಣೆಯಲ್ಲಿದ್ದ ಎಟಿಸಿಯ ಎಸಿಪಿ ವೇಣುಗೋಪಾಲ್ & ಟೀಂ ತ್ರಿವೇಂಡ್ರಮ್ ಏರ್ಪೋರ್ಟ್ನಲ್ಲಿ ಬಂಧಿಸಿದ್ದಾರೆ.
ಬಂಧಿಸಿ ನೇರವಾಗಿ ಬೆಂಗಳೂರು ಏರ್ಪೋರ್ಟ್ನಿಂದ ಮಡಿವಾಳದ ಎಫ್ಎಸ್ಎಲ್ ಕಚೇರಿಗೆ ಕರೆದೊಯ್ದ ಸಿಸಿಬಿ ಅಧಿಕಾರಿಗಳು ಆತ ಎಲ್ಲಿ ವಸ್ತುಗಳನ್ನ ತಯಾರು ಮಾಡುತ್ತಿದ್ದ? ಆತನ ಸಪೋರ್ಟ್ ಲ್ಲಿ ಯಾರಿದ್ದರು? ಯಾರು ರೆಡಿ ಮಾಡಲು ತಿಳಿಸಿದ್ದರು? ಯಾವ ಭಯೋತ್ಪಾದಕ ಸಂಘಟನೆ ಅನ್ನೋದ್ರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಬಂಧಿಸಿದ್ದ ಶಂಕಿತ ಉಗ್ರರ ಹೇಳಿಕೆ ಮೇರೆಗೆ ಶೋಯೆಬ್ ವಿಚಾರಣೆಯನ್ನ ಖುದ್ದಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ನಡೆಸುತ್ತಿದ್ದಾರೆ.