ಬೆಂಗಳೂರು: ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದ ಅಕ್ಷರ ಮಾಂತ್ರಿಕ ರವಿ ಬೆಳೆಗೆರೆಯ ಅಂತ್ಯಸಂಸ್ಕಾರ ಇಂದು ಸಂಜೆ ಜರುಗಿತು. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರೆವೇರಿಸಲಾಯಿತು.
ಜೇಷ್ಠ ಪುತ್ರ ಕರ್ಣ ಹಾಗೂ ಹಿಮವಂತ್ ತಂದೆಯ ಅಂತ್ಯ ಸಂಸ್ಕಾರದ ಕಾರ್ಯ ನೆರವೇರಿಸಿದ್ದು, ತೇಗ, ಮಾವು ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಸಲಾಗಿತ್ತು. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಪ್ರಾರ್ಥನಾ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಬೆಳಗೆರೆ ಪ್ರಾರ್ಥಿವ ಶರೀರದ ದರ್ಶನ ಪಡೆಯಲು ಹಲವು ನಟ-ನಟಿಯರು ಸೇರಿದಂತೆ ಗಣ್ಯರು ಆಗಮಿಸಿದ್ದು, ಹಿರಿಯ ನಟಿ ಲೀಲಾವತಿ, ಸಚಿವ ಆರ್.ಅಶೋಕ್, ನಟ ವಿನೋದ್ ರಾಜ್, ಹೆಚ್.ವಿಶ್ವನಾಥ್, ಸಾರಾ ಗೋವಿಂದು, ಯೋಗರಾಜ್ ಭಟ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.