ETV Bharat / state

ಕರ್ನಾಟಕದ‌‌ ಲೇಡಿ ಸಿಂಗಂ ಡಿ. ರೂಪಾ: ಐಪಿಎಸ್​ ಅಧಿಕಾರಿಯ ಸಾಧನೆಯ ಹಾದಿ..! - Senior IPS officer D. Roopa life story

ಪ್ರಾಮಾಣಿಕತೆ ಹಾಗೂ ಧೈರ್ಯಕ್ಕೆ ಹೆಸರುವಾಸಿಯಾಗಿರುವ ಹಿರಿಯ ಐಪಿಎಸ್​ ಅಧಿಕಾರಿ ಡಿ. ರೂಪಾ ಅವರು, ಕರ್ನಾಟಕದ‌‌ ಮೊದಲ ಲೇಡಿ ಸಿಂಗಂ ಎಂದು ಹೆಸರು ಪಡೆದಿದ್ದಾರೆ. 'ಈಟಿವಿ ಭಾರತ'ದ ಜೊತೆ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಅವರ ಒಂದು ಸಾಧನೆಯ ಹಾದಿ ಇಲ್ಲಿದೆ.

Senior IPS officer D. Roopa life story
ಡಿ. ರೂಪಾ ಅವರ ಸಾಧನೆಯ ಹಾದಿ
author img

By

Published : Sep 7, 2020, 11:20 PM IST

ಬೆಂಗಳೂರು: ಡಿ. ರೂಪಾ ಮೌದ್ಗಿಲ್... ಈ ಹೆಸರು ಕೇಳಿದರೆ ಸಾಕು, ಭ್ರಷ್ಟರ ಎದೆಯಲ್ಲಿ ನಡುಕ ಉಂಟಾಗುತ್ತದೆ. ಅಪರಾಧಿಗಳ ಎದೆ ಝಲ್​ ಅನ್ನುತ್ತೆ. ಈ ಖಡಕ್ ಐಪಿಎಸ್​ ಅಧಿಕಾರಿ ಕರ್ನಾಟಕದಲ್ಲಿ ಮನೆ ಮಾತಾದವರು. ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಿ. ರೂಪಾ ಅವರು, ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಿರಣ್ ಬೇಡಿಯವರ ಮಾತುಗಳಿಂದ ತಾವು ಒಬ್ಬ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನ ಹೊತ್ತಿದ್ದ ರೂಪಾ, ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 43 ನೇ ರ್ಯಾಂಕ್​​ನಲ್ಲಿ ಪಾಸ್​ ಆಗಿದ್ದರು. ಸದ್ಯ ಗೃಹ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಅದೆಷ್ಟೋ ಯುವಕರಿಗೆ ಮಾದರಿಯಾಗಿದ್ದಾರೆ.

ಡಿ. ರೂಪಾ ಅವರು ದಾವಣಗೆರೆ ಜಿಲ್ಲೆಯವರಾಗಿದ್ದು, ಜೆ.ಹೆಚ್. ದಿವಾಕರ್ ಹಾಗೂ ಹೇಮಾವತಿ ದಂಪತಿಯ ಪುತ್ರಿ. ತಂದೆ-ತಾಯಿಯ ಪ್ರೋತ್ಸಾಹ ವೃತ್ತಿ ಆಯ್ಕೆಯಲ್ಲಿ ಸಾಧನೆಯತ್ತ ಸಾಗಲು ಸಹಕಾರಿ ಆಗಿದೆ ಎನ್ನುವುದು ರೂಪಾ ಅವರ ಮಾತಾಗಿದೆ.

ಡಿ. ರೂಪಾ ಅವರ ಸಾಧನೆಯ ಹಾದಿ

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿ ಬಿಎಯಲ್ಲಿ ಗೋಲ್ಡ್ ಮೆಡಲ್ ಪಡೆದ ಅವರು, ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ್ದರು. ಮಾಡಲಿಂಗ್​ ಕ್ಷೇತ್ರದಲ್ಲೂ ಮಿಂಚಿದ್ದ ರೂಪಾ ಮಿಸ್​ ದಾವಣಗೆರೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಬೆಂಗಳೂರಲ್ಲಿ ಎಂಎ ಸೈಕಾಲಜಿ ವಿಷಯದಲ್ಲಿ 3ನೇ ಱಂಕ್ ಪಡೆದರು. ಇದರ ಜೊತೆ ಜೊತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ತಾನು ಐಪಿಎಸ್ ಅಧಿಕಾರಿಯಾಗಲೇಬೇಕೆಂಬ ಛಲ ತೊಟ್ಟಿದ್ದ ಅವರು, ಮೊದಲ ಬಾರಿಗೆ ಆಯ್ಕೆಯಾಗದೆ ಇದ್ದಾಗ ಬೇಸರವಾಗಿದ್ದರು. ಬಳಿಕ ಎರಡನೇ ಬಾರಿ ಮರಳಿ ಯತ್ನವ ಮಾಡು ಅನ್ನುವ ಹಾಗೆ 2000ನೇ ಇಸವಿ ತಂಡದ ಯುಪಿಎಸ್ಸಿ ಪರೀಕ್ಷೆಯಲ್ಲಿ 43ನೇ ಱಂಕ್ ಮುಡಿಗೇರಿಸಿಕೊಂಡು ಐಪಿಎಸ್ ಸೇವೆಗೆ ಸೇರ್ಪಡೆಯಾದರು.

ರೂಪಾ ಅವರು ಐಪಿಎಸ್ ಟ್ರೈನಿಂಗ್​​​​ನ್ನು ಬಹಳ ಕಠಿಣವಾಗಿ ಆತ್ಮಸ್ಥೈರ್ಯದಿಂದ ಎದುರಿಸಿದ್ದರು. ಅಲ್ಲಿಂದಲೇ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡು, 2002 ರಲ್ಲಿ ಉಡುಪಿಯಲ್ಲಿ ಎಎಸ್​​​ಪಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಎಸ್​​​​ಪಿಯಾಗಿ ಧಾರವಾಡದಲ್ಲಿ ಅಧಿಕಾರ ಸ್ವೀಕಾರ ಮಾಡಿದರು.‌‌

ಆರಂಭಿಕವಾಗಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ 10 ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ, ಅಂದಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದ ಉಮಾಭಾರತಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಪ್ರಕರಣದಲ್ಲಿ ಬಂಧಿಸುವ ಮೂಲಕ ರೂಪ ದಿಟ್ಟತನ ತೋರಿದ್ದರು ಹಾಗೂ ಯಾದಗಿರಿ ಮೊದಲ ಬಾರಿಗೆ ಜಿಲ್ಲೆಯಾದಾಗ ಮೊದಲ ಎಸ್​ಪಿ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಇನ್ನು ವೃತ್ತಿ ಜೀವನದಲ್ಲಿ ಇಲ್ಲಿಯವರೆಗೆ ರೂಪಾ ಅವರು, ನಲವತ್ತಕ್ಕೂ‌ ಹೆಚ್ಚು ಬಾರಿ ವರ್ಗಾವಣೆಗೊಂಡಿದ್ದು, ನಾನು ಯಾವ ರಾಜಕಾರಣಿಗಳಿಗೂ ಬಗ್ಗಲ್ಲ. ನಾನು ಎಲ್ಲಿಗೆ ಬೇಕಾದರೂ ಹೋಗಲು ರೆಡಿ ಎನ್ನುತ್ತಾರೆ ಈ ಲೇಡಿ ಸಿಂಗಂ.

ರೂಪಾ ಅವರು 2003 ರಲ್ಲಿ ಐಎಎಸ್ ಅಧಿಕಾರಿಯಾದ ಮನೀಷ್ ಮೌದ್ಗಿಲ್ ಅವರನ್ನು ಒಡಿಶಾದಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ದಿನದಿಂದಲೂ ಅವರ ಗಂಡ ಬೆಂಬಲವಾಗಿ ನಿಂತಿದ್ದು, ಪ್ರತಿ ಹಂತದಲ್ಲಿ ಮಾನಸಿಕ ಸ್ಥೈರ್ಯ ತುಂಬುತ್ತಾ ಬಂದಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ನಡೆದ ಅವ್ಯಹಾರವನ್ನ ಬಯಲಿಗೆಳೆದಿದ್ದರು ಡಿ ರೂಪಾ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಮತ್ತು ಸಹಚರರಿಗೆ ಕಾರಾಗೃಹದಲ್ಲಿ‌ ಐಷಾರಾಮಿ ವ್ಯವಸ್ಥೆ ಮಾಡಲಾಗ್ತಿದೆ ಎಂದು ಅವರು ನೇರವಾಗಿಯೇ ಹಿರಿಯ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಇದರ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅವರ ಬಗ್ಗೆಯೇ ಇಲಾಖೆಯ ಕೆಲವರು ಮುನಿಸಿಕೊಂಡಿದ್ದರು. ಆದ್ರೆ ಅವರ ಬೆಂಬಲಕ್ಕೂ ಅನೇಕ ಜನರಿದ್ದರು.

ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಈ ಸೇವೆಯಲ್ಲಿದ್ದು, ಯುವಕರು ಮುಂದೆ ಬರಬೇಕಾದರೆ ಕಠಿಣ ಶ್ರಮ ಬಹಳ ಅಗತ್ಯವಾಗಿದ್ದು, ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ ಎಂಬುದು ಅವರ ಮಾತಾಗಿದೆ. ಇನ್ನು ಖಾಕಿ ಬಿಟ್ಟು ರೂಪಾ ಅವರು ಸಿನಿಮಾದಲ್ಲಿಯೂ ಕೂಡ ಹಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇನ್ನು ಬೆಂಕಿ ಚೆಂಡು ಎಂದೇ ಹೆಸರಾಗಿರುವ ಅವರು ಉನ್ನತ ಸ್ಥಾನಕ್ಕೇರಿ ಪೊಲೀಸ್​ ಇಲಾಖೆ ಮತ್ತು ರಾಜ್ಯಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಲಿ ಎಂಬುದೇ ನಮ್ಮ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.