ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲ ಹಿರಿಯ ಕಾನ್ಸ್ಟೇಬಲ್ಗಳು ತಮ್ಮ ನೋವನ್ನು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಹೊರ ಹಾಕಿದ್ದಾರೆ.

2017ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ನಿಂದ ಮುಖ್ಯ ಕಾನ್ಸ್ಟೇಬಲ್ಗೆ ಮುಂಬಡ್ತಿ ನೀಡಲಾಗಿತ್ತು. ಆ ಸಮಯದಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗಳಲ್ಲಿಯೇ ಮುಂಬಡ್ತಿ ಹೊಂದಿದ ನಂತರ ಅದೇ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಕೆಲವರು ಇಷ್ಟವಿಲ್ಲದಿದ್ದರೂ ಹಿರಿಯ ಅಧಿಕಾರಿಗಳ ಆದೇಶಕ್ಕೆ ಬೆಲೆ ಕೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
5 ವರ್ಷಗಳಿಂದ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಕಾರಣ ಬೇರೆ ಪೊಲೀಸ್ ಠಾಣೆಗೆ ಅವರನ್ನು ವರ್ಗಾವಣೆ ಮಾಡಬೇಕು. ಕೆಲವರು ಹಣಬಲ, ರಾಜಕೀಯ ಬಲ ಹೊಂದಿರುವವರು ಕರ್ತವ್ಯ ನಿರ್ವಹಣೆ ಮಾಡುವ ಠಾಣೆಯಿಂದ ಬೇರೆ ಠಾಣೆಗೆ ವರ್ಗಾವಣೆಯಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ನಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ನಗರದ ಹಲವು ಠಾಣಾ ಮಂದಿ ನಗರ ಆಯುಕ್ತ ಕಮಲ್ ಪಂಥ್ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದೂ ಈಗ ಈ ಪತ್ರ ವೈರಲ್ ಆಗ್ತಿದೆ.