ಬೆಂಗಳೂರು: ಬೀದರ್‌ನಲ್ಲಿ ಜನರು ಮದರಸಾಗೆ ನುಗ್ಗಿಲ್ಲ, ಆ ಜಾಗ ಪುರಾತತ್ವ ಇಲಾಖೆಗೆ ಸೇರಿದ್ದಾಗಿದ್ದು, ಘಟನೆ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೇಡಂ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಆಗ್ರಹ ಮಾಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್‌ನಲ್ಲಿ ಮದರಾಸಾಗೆ ನುಗ್ಗಿದ ಜನ ಅನ್ನೋ ವರದಿ ಬಗ್ಗೆ ಸ್ಪಷ್ಟನೆ ನೀಡಿದರು. ಬೀದರ್‌ನಲ್ಲಿ ನಡೆದ ಘಟನೆ ಜಾಗಕ್ಕೂ ಮದರಸಾಗೂ ಸಂಬಂಧ ಇಲ್ಲ. ಅಲ್ಲಿ ಯಾವುದೇ ಮದರಸಾ ನಡೆಯುತ್ತಿಲ್ಲ. ಅದು ಯಾವುದೇ ರೀತಿಯ ಜನ ಸಮುದಾಯದ ಪ್ರದೇಶಕ್ಕೆ ಒಳಪಟ್ಟಿಲ್ಲ. ಅಲ್ಲಿ ಎಲ್ಲ ಸಮುದಾಯದ ಜನ ಭೇಟಿ ಕೊಡುತ್ತಾರೆ ಎಂದರು. ನೂರಾರು ವರ್ಷಗಳ ಇತಿಹಾಸ ಇರಿವ ಜಾಗ ಅದು, ಅಲ್ಲಿಗೆ ಪವಿತ್ರ ದೇವರು ತೆರಳುತ್ತದೆ.
ಅಲ್ಲಿರುವ ಕಲ್ಲಿನ ಪ್ರತಿಮೆಯನ್ನ ಲಕ್ಷ್ಮಿ ದೇವರು ಎಂದು ಪೂಜೆ ಮಾಡಲಾಗುತ್ತದೆ. ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಬರಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡ್ತಾರೆ. ಅಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಅಂತಲ್ಲ. ಅದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಅಲ್ಲಿ ಎಲ್ಲ ಸಮುದಾಯದವರು ಹೋಗಿ ಪೂಜೆ ಮಾಡಿ ಬರುತ್ತಾರೆ.
ದಸರಾ ಹಿನ್ನೆಲೆ ಪೂರ್ವ ಬಾವಿಯಾಗಿ ಯಾಕೆ ಅಷ್ಟು ಜನ ಸೇರಿದರು. ಅದರ ಹಿಂದೆ ಯಾರಿದ್ದಾರೆ, ಯಾಕೆ ಸೇರಿದರು ಅನ್ನುವುದರ ಬಗ್ಗೆ ತನಿಖೆ ಆಗಬೇಕು. ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ. ಅದು ಯಾವುದೇ ಮದರಸಾಗೆ ಸೇರಿದ ಜಾಗ ಅಲ್ಲ. ಸರ್ಕಾರದ ಪುರಾತತ್ವ ಇಲಾಖೆಗೆ ಸೇರಿದ ಜಾಗ ಅಂತ ಮತ್ತೊಮ್ಮೆ ಸ್ಪಷ್ಟಪಡಿಸ್ತೇನೆ ಎಂದರು.
ಇದನ್ನೂ ಓದಿ: ಬೀದರ್ ಮದರಸಾಗೆ ನುಗ್ಗಿ ಪೂಜೆ ನೆರವೇರಿಸಿದ ಆರೋಪ : 9 ಮಂದಿ ವಿರುದ್ಧ ಪ್ರಕರಣ