ಬೆಂಗಳೂರು : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿದ್ದ ಸೆಕ್ಯುರಿಟಿ ಗಾರ್ಡ್‌ನನ್ನು ಕೆಂಗೇರಿ ಗೇಟ್ ಉಪ ವಿಭಾಗದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ರಸ್ತೆಯ ಯಲಚೇನಹಳ್ಳಿಯಲ್ಲಿ ವಾಸವಾಗಿದ್ದ ನೇಪಾಳಿ ಮೂಲದ ಭೀಮ್ ಬಹುದ್ದೂರ್ ತಾಪ (35) ಬಂಧಿತ ಸೆಕ್ಯುರಿಟಿ ಗಾರ್ಡ್. ಆರೋಪಿಯಿಂದ 9 ಲಕ್ಷ ರೂ. ಬೆಲೆಯ 200 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
![9 ಲಕ್ಷ ಮೌಲ್ಯದ ಚಿನ್ನಾಭರಣ ವಶ](https://etvbharatimages.akamaized.net/etvbharat/prod-images/kn-bng-06-security-guard-arrested-on-charges-of-jewellary-theft-worth-9lakhs-ka10032_11122021164115_1112f_1639221075_471.jpg)
ಅಕ್ಟೋಬರ್ 8ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ವಿಮಾನದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಪತ್ನಿಯನ್ನು ಕರೆದುಕೊಂಡು ಬರಲು ಪತಿ ಹಾಗೂ ಮಕ್ಕಳು ಕಾರಿನಲ್ಲಿ ಹೋಗಿದ್ದರು. ವಾಪಸ್ ತಡ ರಾತ್ರಿ 12.10ರ ಸುಮಾರಿಗೆ ಮನೆಗೆ ಬಂದು ರೂಮಿಗೆ ಹೋಗಿ ನೋಡಿದಾಗ 200 ಗ್ರಾಂ ತೂಕದ ಆಭರಣ ಹಾಗೂ ನಗದು ಕಳ್ಳತನವಾಗಿತ್ತು.
ಕಳ್ಳ ತೆರೆದ ಬಾಗಿಲಿನ ಮೂಲಕ ಮನೆಯೊಳಗೆ ನುಗ್ಗಿರುವ ಕುರಿತು ಸುಳಿವು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಟಿ ಕೋದಂಡರಾವ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಪೂಜಾರಿಯ ಬೆತ್ತದೇಟಿಗೆ ಮಹಿಳೆ ಮೃತಪಟ್ಟ ಆರೋಪ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!