ETV Bharat / state

ಎರಡನೇ ಸುತ್ತಿನ ವ್ಯಾಕ್ಸಿನ್ ಡ್ರೈ ರನ್; ಮುಕ್ಕಾಲು ಗಂಟೆಯಲ್ಲಿ ಪೂರ್ಣ - bangalore latest news

9 ರಿಂದ 11 ಗಂಟೆಯವರೆಗೆ 25 ಜನರಿಗೆ ವ್ಯಾಕ್ಸಿನ್ ತಾಲೀಮು ನಡೆಸಬೇಕಿತ್ತು. ಆದರೆ 10 ಕ್ಕೆ ಆರಂಭವಾಗಿ 10-45ಕ್ಕೆ ವ್ಯಾಕ್ಸಿನ್ ಡ್ರೈ ರನ್​​​ ಮುಗಿಸಲಾಗಿದೆ.

Second round covid Vaccine Dry Run completed at bangalore
ಎರಡನೇ ಸುತ್ತಿನ ಕೋವಿಡ್ ವ್ಯಾಕ್ಸಿನ್ ಡ್ರೈ ರನ್- ಮುಕ್ಕಾಲು ಗಂಟೆಯಲ್ಲಿ ಪೂರ್ಣ
author img

By

Published : Jan 8, 2021, 11:39 AM IST

Updated : Jan 8, 2021, 12:00 PM IST

ಬೆಂಗಳೂರು: ನಗರದ ಹಲಸೂರು ರೆಫರಲ್ ಆಸ್ಪತ್ರೆಯಲ್ಲಿ ನೆಪಮಾತ್ರಕ್ಕೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. 9 ರಿಂದ 11 ಗಂಟೆಯವರೆಗೆ 25 ಜನರಿಗೆ ವ್ಯಾಕ್ಸಿನ್ ತಾಲೀಮು ನಡೆಸಬೇಕಿತ್ತು. ಆದರೆ 10 ಕ್ಕೆ ಆರಂಭವಾಗಿ 10-45ಕ್ಕೆ ವ್ಯಾಕ್ಸಿನ್ ಡ್ರೈ ರನ್​​​ಅನ್ನು ಮುಗಿಸಲಾಗಿದೆ.

ಕೋವಿನ್ ಪೋರ್ಟಲ್​ನಲ್ಲಿ ಟೆಕ್ನಿಕಲ್ ಸಮಸ್ಯೆ ಎದುರಾಗಿತ್ತು. ಜೊತೆಗೆ ಹೆರಿಗೆ ಆಸ್ಪತ್ರೆಯಲ್ಲೇ ಡ್ರೈ ರನ್ ವ್ಯವಸ್ಥೆ ಇಟ್ಟಿದ್ದರಿಂದ ಸ್ಕ್ಯಾನಿಂಗ್​​ಗೆ ಬಂದ ಸಾಕಷ್ಟು ಗರ್ಭಿಣಿಯರು ಕಾದು ಕುಳಿತುಕೊಳ್ಳಬೇಕಾಯಿತು.

ಎರಡನೇ ಸುತ್ತಿನ ವ್ಯಾಕ್ಸಿನ್ ಡ್ರೈ ರನ್ ಪೂರ್ಣ

ಈ ಸುದ್ದಿಯನ್ನೂ ಓದಿ: ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ 13 ಲಕ್ಷದ 90 ಸಾವಿರ ಕೊರೊನಾ ಲಸಿಕೆ: ಸುಧಾಕರ್

ಇನ್ನು ಡ್ರೈ ರನ್ ಬಳಿಕ ಮಾತನಾಡಿದ ವಾರ್ ರೂಂ ನೋಡಲ್ ಆಫೀಸರ್ ಡಾ. ಭಾಸ್ಕರ್, ಮೊದಲ ಡ್ರೈ ರನ್ ಮೂರು ಕಡೆ ಮಾತ್ರ ಮಾಡಲಾಯ್ತು. ಇದೀಗ ಎಂಟು ಕಡೆಗಳಲ್ಲಿ ಡ್ರೈ ರನ್ ಮಾಡಲಾಗಿದೆ. 8 ವಲಯಗಳಲ್ಲೂ ಡ್ರೈ ರನ್ ನಡೆದಿದೆ. ಈಗ 25 ಜನರ ಡ್ರೈ ರನ್ ಪೂರ್ಣ ಆಗಿದೆ ಎಂದು ತಿಳಿಸಿದರು.

ಹೆಲ್ತ್ ಕೇರ್ ವರ್ಕರ್ಸ್ ಮಾತ್ರ ಲಸಿಕೆ ಪಡೆಯುತ್ತಿದ್ದಾರೆ. ಗುರುತಿನ‌ ಚೀಟಿ ಇದ್ದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈವರೆಗೂ ಲಸಿಕೆ ನೀಡಿಕೆ ಯಾವುದೇ ಆತಂಕವಿಲ್ಲದೇ ನಡೆದಿದೆ. ಹೆಚ್ಚು ಜನರು ಬಂದಾಗ ಟೆಕ್ನಿಕಲ್ ಸಮಸ್ಯೆ ಆಗಬಹುದು, ಅದಕ್ಕೆ ಮೊದಲೇ ಸಜ್ಜಾಗಿರುವುದಾಗಿ ತಿಳಿಸಿದರು.

Last Updated : Jan 8, 2021, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.