ETV Bharat / state

ಸಾರ್ವಜನಿಕ ಸಾರಿಗೆಗೆ ಗುಡ್​​ ಬೈ: ಸೆಕೆಂಡ್‌ ಹ್ಯಾಂಡ್‌ ಕಾರುಗಳತ್ತ ಜನರ ಚಿತ್ತ‌! - Second hand car sales in hubli

ಕಳೆದ ಕೆಲವು ತಿಂಗಳುಗಳಲ್ಲಿ ಹಳೆಯ ಕಾರುಗಳ ಖರೀದಿ ಹೆಚ್ಚಾಗಿದ್ದು, ಸುರಕ್ಷತೆ ಹಾಗೂ ಹಣ ಉಳಿತಾಯಕ್ಕಾಗಿ ಜನರು ಸೆಕೆಂಡ್‌ ಹ್ಯಾಂಡ್‌ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.

Second hand car sales
ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಸಖತ್‌ ಡಿಮ್ಯಾಂಡ್‌
author img

By

Published : Oct 27, 2020, 3:41 PM IST

ಬೆಂಗಳೂರು: ಕೊರೊನಾ ನಂತರ ಪ್ರಪಂಚದಾದ್ಯಂತ ಹಲವು ಬದಲಾವಣೆಗಳು ಕಂಡು ಬರುತ್ತಿದ್ದು, ಸಾಂಕ್ರಾಮಿಕ ಸಮಯದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಕೊರೊನಾ ಗಾಳಿ ಅಥವಾ ಇತರ ಮೂಲಗಳಿಂದ ತಗುಲಬಹುದು ಎಂಬ ಕಾರಣಕ್ಕೆ, ಸಾರ್ವಜನಿಕ ಸಾರಿಗೆಯಿಂದ ಜನರು ದೂರ ಉಳಿಯುತ್ತಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲವು ತಿಂಗಳುಗಳಲ್ಲಿ, ಹಳೆಯ ಕಾರುಗಳ ಖರೀದಿಯೂ ಹೆಚ್ಚಾಗಿದೆ. ಸುರಕ್ಷತೆ ಹಾಗೂ ಹಣ ಉಳಿತಾಯಕ್ಕಾಗಿ, ತಮ್ಮ ಅನುಕೂಲಕ್ಕೆ ಬೇಕಾದಂತೆ ಸೆಕೆಂಡ್‌ ಹ್ಯಾಂಡ್‌ ಕಾರುಗಳತ್ತ ಜನರು ಮುಖಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ 1 ರಿಂದ 5 ಲಕ್ಷ ರೂ.ವರೆಗಿನ ಹಳೆ ಕಾರುಗಳ ಖರೀದಿ ಜೋರಾಗಿದ್ದು, ಹೊಸ ಕಾರುಗಳನ್ನು ಖರೀದಿಸುವ ಮನಸ್ಸಿದ್ದ ಗ್ರಾಹಕರು ಕೂಡ, ಮಿತವ್ಯಯ ದೃಷ್ಟಿಯಿಂದ ತಮ್ಮ ಆರ್ಥಿಕತೆಗೆ ಹೊಂದುವ ಹಳೆ ಕಾರುಗಳನ್ನು ಖರೀದಿಸುತ್ತಿದ್ದಾರೆ. ಮೊದಲು ಪ್ರತಿ ತಿಂಗಳು 10 ರಿಂದ 15 ಕಾರುಗಳು ಮಾತ್ರ ಮಾರಾಟವಾಗುತ್ತಿದ್ದವು. ಈಗ 25 ರಿಂದ 30 ಕಾರುಗಳು ಬಿಕರಿ ಆಗುತ್ತಿವೆ.

ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಸಖತ್‌ ಡಿಮ್ಯಾಂಡ್‌

ಇನ್ನು ಮಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷದ ಬೆಲೆಯ, ಹಳೆ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಮೊದಲು ಶೇ.25 ರಷ್ಟು ಮಾರಾಟವಾಗುತ್ತಿದ್ದ ಕಾರುಗಳು, ಇದೀಗ ತಿಂಗಳಿಗೆ ಶೇ. 35 ರಷ್ಟು ಮಾರಾಟವಾಗುತ್ತಿದೆ.

ಇನ್ನು ಮೈಸೂರಿನಲ್ಲಿ ಸಾಲ ಮಾಡಿಯಾದ್ರೂ, ಹಳೆ ಕಾರುಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಲಾಕ್​​ಡೌನ್ ನಂತರ ಹಳೆ ಕಾರುಗಳ ಬೇಡಿಕೆ ಹೆಚ್ಚಾಗಿದ್ದು, ಸಾಲ ಮಾಡಿ ಅಥವಾ ಚಿನ್ನಾಭರಣವನ್ನಾದರೂ ಮಾರಿ ಹಳೆ ಕಾರುಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

ಮೈಸೂರು ನಗರದಲ್ಲಿ 150 ಸೆಕೆಂಡ್‌ ಹ್ಯಾಂಡ್‌ ಕಾರು ಶೋರೂಂಗಳಿದ್ದು, ಕೊರೊನಾ ಪೂರ್ವದಲ್ಲಿ ಪ್ರತಿ ತಿಂಗಳು 10ರಿಂದ 15 ಕಾರುಗಳು ಮಾತ್ರ ಮಾರಾಟವಾಗುತ್ತಿದ್ದವು. ಈಗ ಲಾಕ್‌ಡೌನ್‌ ಸಡಿಲಿಕೆ ಬಳಿಕ 25ರಿಂದ 30 ಕಾರುಗಳು ಮಾರಾಟವಾಗುತ್ತಿವೆ.

ಸದ್ಯ ಆಲ್ಟೋ, ಪೋಲೋ, ಸ್ವಿಫ್ಟ್‌, ಐ 10 ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಇನ್ನೂ ಸ್ವಲ್ವ ಹೆಚ್ಚಿನ ಹಣ ಹೂಡಿಕೆ ಮಾಡುವವರು, ಐ 20, ಹೋಂಡಾ ಸಿಟಿ, ಎಸ್‌.ಕ್ರಾಸ್‌, ಸ್ವಿಫ್ಟ್‌ ಡಿಸೈರ್‌ ಹಳೆಯ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ.

ಇನ್ನು ಅನ್‌ಲಾಕ್ ಬಳಿಕ ಮಧ್ಯಮ ವರ್ಗದ ಬಜೆಟ್ ಕಾರುಗಳಿಗೆ ಬೇಡಿಕೆ ಇದೆ. ಆದರೆ ಪ್ರೀಮಿಯಂ ಕಾರು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹೈ ಎಂಡ್ ಕಾರುಗಳ ಖರೀದಿ ಸದ್ಯ ಇಲ್ಲವೇ ಇಲ್ಲ. ಉಳಿದಂತೆ ಬೇರೆ ಕಾರುಗಳನ್ನ ಕೇಳುವವರೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ಕೊರೊನಾದಿಂದ ಜನರು ಸ್ವಂತ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.