ETV Bharat / state

ಟಿಕೆಟ್ ಹಂಚಿಕೆ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ: ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಮಾಲೋಚನೆ - ಮೋಹನ್ ಪ್ರಕಾಶ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ - 40% ಕಮಿಷನ್ ಬಗ್ಗೆ ಅಮಿತ್​ ಶಾ ಮಾತಾಡ್ತಿಲ್ಲ, ಅಬ್ಬಕ್ಕ ಟಿಪ್ಪು ಬಗ್ಗೆ ಮಾತನಾಡ್ತಾರೆ - ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ

Screening Committee Meeting
ಸ್ಕ್ರೀನಿಂಗ್ ಕಮಿಟಿ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಸಭೆ
author img

By

Published : Feb 12, 2023, 3:50 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್​ ಹಂಚಿಕೆಗೆ ಭಾರೀ ಕಸರತ್ತು ಆರಂಭವಾಗಿದ್ದು, ಸ್ಕ್ರೀನಿಂಗ್ ಕಮಿಟಿ ಅಖಾಡಕ್ಕಿಳಿದಿದೆ. ಸ್ಕ್ರೀನಿಂಗ್ ಕಮಿಟಿ ನೇತೃತ್ವ ವಹಿಸಿರುವ ಮೋಹನ್ ಪ್ರಕಾಶ್ ಅವರು ಭಾನುವಾರ ನಗರದಲ್ಲಿ ಸಮಿತಿಯ ಮೊದಲ ಸಭೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ಅಭಿಪ್ರಾಯಗಳಿಗೆ ಮೊದಲ ಮಣೆ ಹಾಕಿರುವ ಅವರು, ಕೆಪಿಸಿಸಿ ಕಚೇರಿಯಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ ಒನ್ ಟು ಒನ್ ಮಾತುಕತೆ ನಡೆಸಿದ್ದು, ರಾಜ್ಯವ್ಯಾಪಿ ಸಭೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕಿರುವುದಾಗಿ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಕಾರ್ಯಾಧ್ಯಕ್ಷರಿಂದ ಪ್ರತಿ ಅಭ್ಯರ್ಥಿಗಳ ಮಾಹಿತಿ ಪಡೆದುಕೊಳ್ಳುತ್ತಿರುವ ಮೋಹನ್ ಪ್ರಕಾಶ್ ಅವರು, ಬೇರೆ ಯಾರಿಗೂ ಪ್ರವೇಶಾವಕಾಶ ಇರಲಿಲ್ಲ. ಗೌಪ್ಯವಾಗಿ ಕಾರ್ಯಾಧ್ಯಕ್ಷರಿಂದ ಮಾಹಿತಿ ಪಡೆಯುತ್ತಿರುವ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರು ಸುದೀರ್ಘ ಮಾಹಿತಿ ಕಲೆಹಾಕಿದ್ದಾರೆ.

ಸರಣಿ ಸಭೆ ಬಳಿಕ ಟಿಕೆಟ್​ ಫೈನಲ್​: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಈ ಕುರಿತು ಮಾತನಾಡಿ, ಇವತ್ತು ಸ್ಕ್ರೀನಿಂಗ್ ಕಮಿಟಿ‌ ಸಭೆ ನಡೀತಾ ಇದೆ. ಮೋಹನ್ ಪ್ರಕಾಶ್ ಸಭೆ ಮಾಡ್ತಾ ಇದ್ದಾರೆ. ಮೊದಲು ಕಾರ್ಯಾಧ್ಯಕ್ಷರ ಸಭೆ ಇದೆ. ಸಂಜೆ ಹಿರಿಯ ನಾಯಕರೊಂದಿಗೆ ಸಭೆ ನಡೆಸ್ತಾರೆ. ನಾಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಜೊತೆ ಸಭೆ ಮಾಡ್ತಾರೆ. ಬಳಿಕ ಆಕಾಂಕ್ಷಿಗಳ ಸಭೆ ಮಾಡಿ ಟಿಕೆಟ್ ಫೈನಲ್ ಮಾಡ್ತಾರೆ ಎಂದು ಹೇಳಿದರು.

ಕುಸಿದ ಕಾನೂನು ಸುವ್ಯವಸ್ಥೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಂತರವಾಗಿ ರಾಜ್ಯಕ್ಕೆ ಬರ್ತಾ ಇದ್ದಾರೆ. ಸರ್ವೆ ಪ್ರಕಾರ ಬಿಜೆಪಿಗೆ 65 ಸೀಟ್ ಮಾತ್ರ ಬರುತ್ತವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಇದರ ಬಗ್ಗೆ ಅಮಿತ್ ಶಾ ಮಾತನಾಡಲ್ಲ. ಈಗ ರಾಣಿ ಅಬ್ಬಕ್ಕ, ಟಿಪ್ಪು ಸುಲ್ತಾನ್​ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಕುಟುಕಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ: ಯಾವ ನೈತಿಕತೆ ಇದೆ ಮಾತನಾಡಲು. ಅಮಿತ್​ ಶಾ ನೂರು ಬಾರಿ ರಾಜ್ಯಕ್ಕೆ ಬರಲಿ. ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಸಿದ್ದಾಂತದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರದ ಆಯುಷ್ಯ ಮುಗಿದಿದೆ. ಬಜೆಟ್ ಇಂದ್ರ ಚಂದ್ರ ಅಂತ ಅಷ್ಟೇ ಆಗುತ್ತೆ. ನಮ್ಮ ಘೋಷಣೆ ನೋಡಿ ದಿಗ್ಬ್ರಮೆಯಾಗಿದೆ. ಹಾಗಾಗಿ ಜಾತಿ ರಾಜಕೀಯ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ಸಲೀಂ ಅಹಮದ್​ ಅಭಿಪ್ರಾಯಪಟ್ಟರು.

40% ಕಮಿಷನ್ ಬಗ್ಗೆ ಶಾ ಮಾತಾಡ್ತಿಲ್ಲ: ನರೇಂದ್ರ ಮೋದಿ ಅವರಿಗೆ ರಿಪೋರ್ಟ್​ ಬಂದಿದೆ. ರಾಜ್ಯದಲ್ಲಿ ಕೇವಲ 65 ಸೀಟ್ ಬರುತ್ತವೆ ಅಂತಾ. ಅಮಿತ್ ಶಾ ಅವರಿಗೆ ನೈತಿಕತೆ ಇದ್ರೆ 40% ಕಮಿಷನ್ ಬಗ್ಗೆ ಮಾತಾಡಿ ಅಂತಾ ಹೇಳಿ. ಅಮಿತ್ ಶಾ ನೂರು ಬಾರಿ ಕರ್ನಾಟಕಕ್ಕೆ ಬರಲಿ. ರಾಜ್ಯದಲ್ಲಿ ಎಷ್ಟೇ ಏನೇ ಮಾಡಿದರು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಭವಿಷ್ಯ ನುಡಿದರು.

ಟಿಪ್ಪು ಒಬ್ಬ ದೇಶ ಭಕ್ತ : ಬಿಜೆಪಿಯವರು ಟಿಪ್ಟು ವಿಚಾರ ಮುಂದಿಟ್ಟುಕೊಂಡು ಚುನಾವಣೆ ಹೋಗುತ್ತಿದ್ದಾರೆ ಎಂಬ ವಿಚಾರ ಮಾತನಾಡಿ, ನಮ್ಮ ಹೇಳಿಕೆ ಗಳಲ್ಲಿ ಬದಲಾವಣೆ ಮಾಡುವುದಿಲ್ಲ. ಟಿಪ್ಪು ಒಬ್ಬ ದೇಶ ಭಕ್ತ ನಾವು ಬದ್ಧರಾಗಿದ್ದೇವೆ. ಯಡಿಯೂರಪ್ಪ ಚುನಾವಣೆ ಗಿಮಿಕ್ ಗೆ ಟೋಪಿ ಹಾಕಿಕೊಳ್ತಾರೆ. ಇವರ ಹಲಾಲ್ ಕಟ್ ಇಂತಹ ನೀತಿಯಿಂದ ಜನ ಬೇಸತ್ತಿದ್ದಾರೆ. ನಾವು ಭರವಸೆಗಳನ್ನ ಕೊಟ್ಟ ಮೇಲೆ ಬಿಜೆಪಿ ಅವರಿಗೆ ಏನ್ ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಕರಾವಳಿ ಭಾಗದಲ್ಲಿ 10 ಸೀಟ್ ಗೆಲ್ಲುತ್ತೀವಿ. ಸಿಟಿ ರವಿ ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದು ಒತ್ತಾಯಿಸಿದರು.

ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಬರ್ತಿದ್ದಾರೆ: ರಾಜ್ಯದ ಜನರಿಗೆ ಅಬ್ಬಕ್ಕನ ಬೆಂಬಲಿಗರು ಬೇಕಾ ಅಥವಾ ಟಿಪ್ಪು ಬೆಂಬಲಿಗರು ಬೇಕಾ ಅನ್ನೊ ಅಮಿತ್ ಶಾ ಹೇಳಿಕೆ ವಿಚಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಇದು ಚುನಾವಣೆ ವರ್ಷ. 90 ದಿನಗಳಲ್ಲಿ ಚುನಾವಣೆ ಮುಗಿಯುತ್ತೆ. ಕರ್ನಾಟಕದಲ್ಲಿ ಪ್ರವಾಹ ಆದಾಗ ರಾಜ್ಯಕ್ಕೆ ಪ್ರಧಾನಿ ಮೋದಿ ಬರಲಿಲ್ಲ. ಕೋವಿಡ್ ಟೈಮ್‌ ನಲ್ಲಿ ಮೋದಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ರಾಜ್ಯವನ್ನು ಕೇಂದ್ರ ಸಂಪೂರ್ಣ ಕಡೆಗಣಿಸಿದೆ. ಇಷ್ಟೊಂದು ಅನ್ಯಾಯ ಮಾಡಿ. ಮತ್ತೆ ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಬರ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಎಷ್ಟು ಬಾರಿ ಬಂದ್ರೂ ಕಾಂಗ್ರೆಸ್​​ಗೆ ಪ್ರಾಬ್ಲಂ ಇಲ್ಲ: ರಾಜ್ಯದ ಹಣ ಬೇಕು ಮೋದಿಗೆ ಬಟ್ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬರ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಅನ್ನೊದು ಪ್ರಧಾನಿ ಮೋದಿ ತೋರಿಸುತಿದ್ದಾರೆ. ರಾಜ್ಯ ಬಿಜೆಪಿ ನಾಯಕರ ನಾಯಕತ್ವದದಿಂದ ಜನರು ಇವರಿಗೆ ಮತ ಹಾಕುವುದಿಲ್ಲ. ಆ ಕಾರಣಕ್ಕಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ ಪದೇ ಪದೆ ಬರ್ತಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಎಷ್ಟು ಬಾರಿ ಬಂದ್ರು ಕಾಂಗ್ರೆಸ್ ಯಾವುದೇ ಪ್ರಾಬ್ಲಮ್ ಇಲ್ಲ ಎಂದರು.

ಲಿಂಗಾಯತ ಸಮುದಾಯಕ್ಕೆ ಹೆಚ್ಚು ಟಿಕೆಟ್​: ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಸೀಟು ಬೇಡಿಕೆ ವಿಚಾರ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಸಮುದಾಯ ಪ್ರತಿ ಬಾರಿ ಬೆನ್ನೆಲುಬಾಗಿ ನಿಂತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಲಿಂಗಾಯತ ಸಮುದಾಯದ ನಾಯಕರಿಗೆ ಟಿಕೆಟ್ ಕೊಡಬೇಕು. ಲಿಂಗಾಯತ ಸಮುದಾಯದಲ್ಲಿ ಯಾರು ಅರ್ಹರಿದ್ದಾರೆ ಅವ್ರಿಗೆ ಟಿಕೆಟ್ ಕೊಡುವುದು ಸೂಕ್ತ ಎಂದರು.

ಪಕ್ಷಕ್ಕೆ ಬಿಟ್ಟ ವಿಚಾರ: ಸಿಎಂ ಬೊಮ್ಮಾಯಿ ಕೈ ಬಲಪಡಿಸಿ ಎಂಬ ಕೇಂದ್ರ ಗೃಹ ಸಚಿವ ಅಮೀತ್ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಹಿಂದೆ ಅಮಿತ್ ಶಾ ಅವರು ಬೊಮ್ಮಾಯಿ ನಾಯಕತ್ವ ಎಂದು ಹೇಳಿದ್ರು. ಆದಾದ ಮೇಲೆ‌ ಮೋದಿಗೆ ವೋಟ್ ಕೊಡಿ ಎಂದು ಕೇಳ್ತಾರೆ.

ಅದು ಅವರ ಪಾರ್ಟಿಗೆ ಬಿಟ್ಟ ವಿಚಾರ, ಆದರೆ ಅವರು ಯಾಕೆ ಆ ರೀತಿ ಮಾಡುತ್ತಿದ್ದಾರೆಂದರೆ, ಅವರಲ್ಲಿ ಭಿನ್ನಾಭಿಪ್ರಾಯವಿದೆ. ಭಿನ್ನಾಭಿಪ್ರಾಯಕ್ಕೆ ತೇಪೆ ಹಚ್ಚಲು ಹೇಳ್ತಾರೆ. ಟಿಪ್ಪು ಬೆಂಬಲಿಗರೂ ಬೇಕೊ, ಅಬ್ಬಕ್ಕನ ಬೆಂಬಲಿಗರೋ ಬೇಕೋ ಎಂದು ಅಮಿತ್ ಶಾ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರ ಪ್ರಶ್ನೆಗೆ ನಾ ಉತ್ತರ ಕೊಡಲ್ಲ. ಜನ ಉತ್ತರ ಕೊಡ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಸೂಚಿಸಿದ ಬಿ.ಎಸ್.ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.