ETV Bharat / state

ರಾಜ್ಯದಲ್ಲಿ ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭ - 6 ರಿಂದ 8ನೇ ತರಗತಿಗಳು ಆರಂಭ

ರಾಜ್ಯದಲ್ಲಿ ಈಗಾಗಲೇ ಮೊದಲ ಹಂತವಾಗಿ 9 ರಿಂದ 12ನೇ ತರಗತಿಗಳನ್ನು ಯಶಸ್ವಿಯಾಗಿ ಆರಂಭಿಸಿರುವ ಶಿಕ್ಷಣ ಇಲಾಖೆ, 6 ರಿಂದ 8ನೇ ತರಗತಿ ಮಕ್ಕಳ ಮನೆವಾಸ ಅಂತ್ಯಗೊಳಿಸಿದೆ. ಸರ್ಕಾರ ನಿರ್ಧರಿಸಿರುವಂತೆ ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಲಿವೆ.

schools-for-classes-6-to-8-set-to-reopen-across-state-today
ರಾಜ್ಯದಲ್ಲಿ ಇಂದಿನಿಂದ ಪ್ರಾಥಮಿಕ ಶಾಲಾ 6 ರಿಂದ 8ನೇ ತರಗತಿಗಳು ಆರಂಭ
author img

By

Published : Sep 6, 2021, 7:52 AM IST

ಬೆಂಗಳೂರು : ದಿನದ ಬಹುತೇಕ ಸಮಯವನ್ನು ಶಾಲೆಯಲ್ಲೇ ಕಳೆಯುತ್ತಿದ್ದ ಶಾಲಾ ಮಕ್ಕಳು ಕೊರೊನಾ ಕಾರಣಕ್ಕೆ ಮನೆಯಲ್ಲೇ ಉಳಿಯುವಂತಾಗಿತ್ತು. ರಾಜ್ಯದಲ್ಲಿ ಬರೋಬ್ಬರಿ 2 ವರ್ಷಗಳ ಬಳಿಕ ಇಂದಿನಿಂದ ಶೇ.2ಕ್ಕಿಂತ ಪಾಸಿಟಿವ್ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಯ 6ರಿಂದ 8ನೇ ತರಗತಿಗಳು ಆರಂಭವಾಗುತ್ತಿವೆ.

ಈಗಾಗಲೇ ಮೊದಲ ಹಂತವಾಗಿ 9ರಿಂದ 12ನೇ ತರಗತಿಗಳನ್ನು ಯಶಸ್ವಿಯಾಗಿ ಆರಂಭಿಸಿರುವ ಇಲಾಖೆ, 6ರಿಂದ 8ನೇ ತರಗತಿ ಮಕ್ಕಳ ಮನೆವಾಸ ಅಂತ್ಯಗೊಳಿಸಿದೆ. ಸರ್ಕಾರ ನಿರ್ಧರಿಸಿರುವಂತೆ ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಲಿವೆ.

ದಿನ ಬಿಟ್ಟು ದಿನ ಬ್ಯಾಚ್​ಗಳಲ್ಲಿ ತರಗತಿ ಆರಂಭಿಸಲು ಸೂಚನೆ ಹೊರಡಿಸಲಾಗಿದೆ. ಶೇ.2ಕ್ಕಿಂತ ಪಾಸಿಟಿವ್ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲಾರಂಭವಾಗಲಿದೆ‌. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶನಿವಾರ, ಭಾನುವಾರ ಎರಡು ದಿನ ಶಾಲೆಗೆ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ.

6 ರಿಂದ 7ನೇ ತರಗತಿ ಮಕ್ಕಳಿಗೆ ಬೆಳಗ್ಗೆ 10: 30ರಿಂದ ಮಧ್ಯಾಹ್ನ 1:30ರವರೆಗೆ ತರಗತಿ ನಡೆಸಲಾಗುತ್ತಿದೆ. 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 4:30ರ ತರಗತಿ ನಡೆಸಲು ಸೂಚಿಸಲಾಗಿದೆ‌. ಇನ್ನುಳಿದಂತೆ ಈಗಾಗಲೇ 9ರಿಂದ ಪಿಯುಸಿಗೆ ಕೊಟ್ಟ ಎಲ್ಲ ಮಾರ್ಗಸೂಚಿಗಳು ಇಲ್ಲಿಯೂ ಅನ್ವಯವಾಗಲಿವೆ.

ಶಾಲೆ ಆರಂಭಕ್ಕೆ ನೀಡಿರುವ ಮಾರ್ಗಸೂಚಿಗಳೇನು?

* ಈಗಾಗಲೇ ಬಿಡುಗಡೆ ಮಾಡಲಾಗಿರುವ SOP ಪಾಲಿಸುವುದು

* ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

* ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೇ ಇರುವುದನ್ನು ಪೋಷಕರು ಧೃಢೀಕರಿಸಬೇಕು

* ಕುಡಿಯುವ ‌ನೀರು ಹಾಗೂ ಆಹಾರ ಮನೆಯಿಂದಲೇ ತರಬೇಕು

* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು

* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.. ಆನ್​ಲೈನ್ ತರಗತಿಗೂ ಅವಕಾಶ

* ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಬೇಕು

* ಉಳಿದ ಎರಡು ದಿನಗಳಲ್ಲಿ ಶಾಲೆಯ ಸ್ವಚ್ಛತೆ ಮಾಡಿಕೊಳ್ಳಬೇಕು

ಸ್ಯಾನಿಟೈಸೇಷನ್ ಕಾರ್ಯ:

ಈಗಾಗಲೇ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು, ಶಾಲೆಗಳು ಸಿದ್ಧಗೊಂಡಿದ್ದು, ಸ್ಯಾನಿಟೈಸೇಷನ್ ಕಾರ್ಯ ನಡೆದಿದೆ. ಶಾಲಾ ಕೊಠಡಿಗಳು, ಹೊರಾಂಗಣ, ಗ್ರಂಥಾಲಯ ಸೇರಿ ಆವರಣದ ಪ್ರತಿ ಭಾಗವನ್ನೂ ಸ್ವಚ್ಛ ಮಾಡಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಇಲಾಖೆಯ ಮಾರ್ಗಸೂಚಿ ಪ್ರಕಾರ ತಯಾರಿ ನಡೆದಿದೆ. ಈಗಾಗಲೇ ಎಲ್ಲ ಸಿಬ್ಬಂದಿಗೂ ಲಸಿಕಾಕರಣ ಆಗಿದೆ. ಇಷ್ಟು ದಿನ ಆನ್​ಲೈನ್​ನಲ್ಲೇ ಇದ್ದ ಮಕ್ಕಳ ಶಿಕ್ಷಣಕ್ಕೆ ಮತ್ತೆ ಇಂದಿನಿಂದ ಭೌತಿಕ ಚಾಲನೆ ಸಿಗಲಿದೆ. ಮುಂದಿನ ಹಂತದಲ್ಲಿ ಇನ್ನುಳಿದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಧರ್ಮಪತ್ನಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.