ಬೆಂಗಳೂರು: ಹಾಡಹಗಲೇ ಮಚ್ಚು ಹಿಡಿದು ಅಂಗಡಿ ಮುಂದೆ ದಾಂಧಲೆ ಮಾಡಿ ಅಂಗಡಿಯವನನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಘಟನೆ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಮಚ್ಚು ಹಿಡಿದು ಬಂದ ಕಿರಾತಕನೊಬ್ಬ ಮಳೆ ಹಿನ್ನೆಲೆ ಅಂಗಡಿ ಮುಂದೆ ನಿಂತಿದ್ದ ಜನರಿಗೆ ಮಚ್ಚು ತೋರಿಸಿ ಬೆದರಿಸಿದ್ದಾನೆ. ಆತನ ಕೈಯಲ್ಲಿ ಮಚ್ಚು ನೋಡಿದ ತಕ್ಷಣ ಜನ ಜೀವಭಯದಲ್ಲಿ ಚೆಲ್ಲಾಪಿಲ್ಲಿಯಾಗಿದ್ದಾರೆ. ಬಳಿಕ ಮಚ್ಚು ಬೀಸಿ ಅಂಗಡಿಯ ಮಾಲೀಕನನ್ನು ಬೆದರಿಸಿ ಹಣ ನೀಡುವಂತೆ ಕೇಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಪೊಲೀಸರು ಆರೋಪಿಯ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಆತ ಮಾದಕ ವಸ್ತು ಸೇವನೆ ಮಾಡಿರಬಹುದು ಎನ್ನಲಾಗಿದೆ.