ETV Bharat / state

ಅಸಮಾನತೆ ಹೋಗಲಾಡಿಸಲು ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ:CJI ಡಿ ವೈ ಚಂದ್ರಚೂಡ್​ - etv bharat kannada

ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಲು ದೃಢ ನಿರ್ಧಾರಗಳು ಹಾಗೂ ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಹೇಳಿದರು.

sc-chief-justice-dy-chandrachud-speech-in-36th-la-asia-convention
ಅಸಮಾನತೆ ಹೋಗಲಾಡಿಸಲು ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ: ಡಿ ವೈ ಚಂದ್ರಚೂಡ್​
author img

By ETV Bharat Karnataka Team

Published : Nov 25, 2023, 3:22 PM IST

ಬೆಂಗಳೂರು: "ದೇಶದಲ್ಲಿನ ಜಾತಿ ವ್ಯವಸ್ಥೆಗೆ ಇತಿಹಾಸವಿದ್ದು, ಪ್ರಸ್ತುತದಲ್ಲಿಯೂ ಮುಂದುವರೆಯುತ್ತಿದೆ" ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಹೇಳಿದರು. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಲಾ ಏಷ್ಯಾದ 36ನೇ ಸಮಾವೇಶದಲ್ಲಿ ಗುರುತು, ವ್ಯಕ್ತಿ, ಮತ್ತು ರಾಜ್ಯ ಸ್ವಾತಂತ್ರ್ಯದ ಹೊಸ ಮುಖಗಳು ವಿಷಯದ ಕುರಿತು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

"ಪ್ರಸ್ತುತದ ದಿನಗಳಲ್ಲಿಯೂ ಜಾತಿ ವ್ಯವಸ್ಥೆ ಮುಂದುವರೆಯುತ್ತಿದ್ದು, ವಿಭಿನ್ನ ಜಾತಿಯ ಗುಂಪುಗಳಿಗೆ ಆರ್ಥಿಕ ಅವಕಾಶಗಳನ್ನು ವಿಸ್ತರಿಸುತ್ತಿವೆ. ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಲು ದೃಢ ನಿರ್ಧಾರಗಳು ಹಾಗೂ ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ" ಎಂದು ಸಿಜೆಐ ಚಂದ್ರಚೂಡ್​ ಹೇಳಿದರು.

"ಅಸಮಾನತೆಯನ್ನು ಶಾಶ್ವತವಾಗಿ ಕಾನೂನಿನ ಅಂತರ್ಗತ ಸಂಕೀರ್ಣತೆಗಳಾಗಿ ಒಪ್ಪಿಕೊಳ್ಳಬೇಕಾಗಿದೆ. ಕಾನೂನಿನಲ್ಲಿ ಅಂತರ್ಗತವಾಗಿರುವ ಕೆಲವು ಸಂಕೀರ್ಣ ವ್ಯವಸ್ಥೆಗಳು ಸಮಾಜವನ್ನು ವಿಭಜನೆಗೊಳಿಸುತ್ತಿವೆ. ಈ ವಿಚಾರದಲ್ಲಿ ನಮ್ಮ ದೃಷ್ಟಿಕೋನವನ್ನು ವಿಸ್ತರಣೆ ಮಾಡಬೇಕು. ಸಾರ್ವಭೌಮತ್ವದ ಕಲ್ಪನೆಯ ಮಧ್ಯದಲ್ಲಿ ಬಹುತ್ವ ಒಳಗೊಂಡಿರುವಂತೆ ಮಾಡಬೇಕಾಗಿದೆ. ಸಕಾರಾತ್ಮ ಕ್ರಿಯೆಯು ಪರಿವರ್ತನೆಯಿಂದ ಹೊರಹೊಮ್ಮುತ್ತದೆ. ಇದು ಹಳೆ ಜಾತಿಯ ಅಸಮಾನತೆಗಳನ್ನು ಹೋಗಲಾಡಿಸುವ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ತಿಳಿಸಿದರು.

"ಸೈದ್ಧಾಂತಿಕ ವಿಚಾರದಲ್ಲಿ ಜ್ಞಾನ ಎಂಬುದು ತಟಸ್ಥವಾಗಿರುವ ನಿಂತ ನೀರಲ್ಲ. ಅಧಿಕಾರದ ಆಧಾರದಲ್ಲಿ ಬದಲಾಗುತ್ತಿರುತ್ತದೆ. ಜತೆಗೆ, ನಮ್ಮದೇ ಸ್ವಾತಂತ್ರ್ಯವು ರೂಪಾಂತರಗೊಂಡು ಬದಲಾಗುತ್ತಿರುತ್ತದೆ. ಸಮಾಜದ ಆಧಾರವಾಗಿರುವ ವ್ಯವಸ್ಥಿತ ತಾರತಮ್ಯ ತೊಡೆದುಹಾಕಲು ವಿಭಿನ್ನ ಗುರುತುಗಳಿರುತ್ತವೆ. ಅಂಗವಿಕಲರು ಅರ್ಹತೆಗಳನ್ನು ಗುರುತಿಸಲು ಪ್ರಮಾಣಪತ್ರ ಪಡೆಯಲು ಸೂಚಿಸಲಾಗುತ್ತಿದ್ದು, ಈ ರೀತಿಯಲ್ಲಿ ಸೂಚನೆ ಮಾನದಂಡಗಳನ್ನು ರೂಪಿಸಲು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಭೌತಿಕವಾಗಿ ಮೂಲಸೌಕರ್ಯ ಸರಿಪಡಿಸುವ ಬದಲು ಅನೇಕರು ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ವಿಚಾರಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೂ ಮುನ್ನ ಅಂಗವಿಕಲರಿಗೆ ರಕ್ಷಣೆ ನೀಡುವುದು ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು.

"ಕನ್ನಡಕವನ್ನು ಧರಿಸುವ ನನ್ನಂತಹ ಜನರನ್ನು ಅಂಗವಿಕಲರು ಎಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಂತಹ ಜನರು ಜೀವನದ ಯಾವುದೇ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ. ವ್ಯವಸ್ಥಿತ ಅಡೆತಡೆಗಳು ಮತ್ತು ಅಸಮಾನತೆಗಳನ್ನು ತೆಗೆದುಹಾಕುವುದು ಸ್ವಾತಂತ್ರ್ಯವನ್ನು ನೆನಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ" ಎಂದು ಹೇಳಿದರು.

ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮಾತನಾಡಿ, "ಪ್ರಸ್ತುತ ಡಿಜಿಟಲ್​ ಕಾಲಮಾನವಾಗಿದ್ದು, ಇದು ವಯಸ್ಸನ್ನು ಪುನರ್​ ವ್ಯಾಖ್ಯಾನಿಸುತ್ತಿದೆ. ಸಮಯ ಮತ್ತು ಸ್ಥಳದ ಕಲ್ಪನೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಇದು ನಮ್ಮನ್ನು ಸದಾ ಕಲಿಕೆಯಲ್ಲಿ ಮುಂದುವರೆಯುವಂತೆ ಮಾಡುತ್ತಿದೆ. ಆದ್ದರಿಂದ ಕಾನೂನು ನಿಯಮಗಳನ್ನೂ ಡಿಜಿಟಲ್​ ವ್ಯವಸ್ಥೆಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಹೆಚ್ಎಎಲ್​ನ ಕಾರ್ಯಕ್ರಮದಲ್ಲಿ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.