ಆನೇಕಲ್: ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಇಂದು ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು.
ಸತ್ಯನಾರಾಯಣ ಪೂಜೆಯಲ್ಲಿ ವೀರೇಂದ್ರ ಹೆಗ್ಗಡೆ ದಂಪತಿ ಹೆಸರಲ್ಲಿ ಪೂಜಾ ಕೈಂಕರ್ಯಗಳನ್ನು ಜರುಗಿಸಲಾಯಿತು. ಸಂಘದ ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಈ ಕಾರ್ಯಕ್ರಮವು ನೆರೆದಿದ್ದ ಮಹಿಳಾಮಣಿಗಳ ಭಕ್ತಿ ಮತ್ತು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.