ETV Bharat / state

ಸಿದ್ದರಾಮಯ್ಯ ಅಮೃತ ಮಹೋತ್ಸವ ಪಕ್ಷಕ್ಕೆ ಶಕ್ತಿ ಕೊಟ್ಟಿದೆ: ಸತೀಶ್ ಜಾರಕಿಹೊಳಿ - Satish Jarkiholi on bjp

ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿ ಜನರು ಹಾಜರಾಗಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶವಾಗಿದ್ದು, ಪಕ್ಷಕ್ಕೆ ಶಕ್ತಿ ಬಂದಿರುವುದರಲ್ಲಿ ಎರಡು ಮಾತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

Satish Jarkiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
author img

By

Published : Aug 6, 2022, 9:20 PM IST

ಬೆಳಗಾವಿ: ಸಿದ್ದರಾಮಯ್ಯ ಅಮೃತ ಮಹೋತ್ಸವ ದೀಪಾವಳಿ ಆಫರ್ ಹಾಗೇ ಪಕ್ಷಕ್ಕೆ ಒಂದು ಶಕ್ತಿ ಕೊಟ್ಟಿದೆ. ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿ ಜನರು ಹಾಜರಾಗಿದ್ದಾರೆ. ಇದನ್ನು ಆಡಳಿತ ಪಕ್ಷದವರು ಒಪ್ಪುತ್ತಾರೆ. ನಾವು ಒಪ್ಪುತ್ತೇವೆ. ಮಾಧ್ಯಮದವರು ಒಪ್ಪುತ್ತಾರೆ. ಇದೊಂದು ಐತಿಹಾಸಿಕ ಸಮಾವೇಶವಾಗಿದ್ದು ಪಕ್ಷಕ್ಕೆ ಶಕ್ತಿ ಬಂದಿರುವುದರಲ್ಲಿ ಎರಡು ಮಾತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ನಾಯಕರು ಸಮಾರಂಭಗಳ ವೇಳೆಯಲ್ಲಿ ಗಡಿಬಿಡಿಯಲ್ಲಿರುತ್ತಾರೆ. ಆ ವೇಳೆ ಹಿರಿಯರು, ಉಳಿದವರು ಸೂಚನೆ ಕೊಡೋದರಲ್ಲಿ ತಪ್ಪೇನೂ ಇಲ್ಲ. ಡಿಕೆಶಿ-ಸಿದ್ದರಾಮಯ್ಯ ಮನಸಾರೆ ಅಪ್ಪಿಕೊಂಡಿಲ್ಲ ಅಂತಾ ಚರ್ಚೆ ಆಗ್ತಿದೆ. ಮನಸಾರೆ ಅಪ್ಪಿಕೊಂಡಿಲ್ಲ ಅಂತಾ ಹೇಳಲು ಡಾಕ್ಟರ್ ಬಳಿ ಚೆಕಿಂಗ್ ಮಾಡಿಸಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ನನ್ನನ್ನು ಕರೆದು ಪಕ್ಷದ ಸಂಘಟನೆ, ಚುನಾವಣೆ ಹೇಗೆ ಮಾಡ್ತೀರಾ ಅಂತಾ ಕೆಲ ಚರ್ಚೆ ನಡೆಸಿದ್ರು ಎಂದು ತಿಳಿಸಿದರು. ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಬಂದವರೆಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂಬ ಕೆಲವರ ಹೇಳಿಕೆಗೆ ಪ್ರತಿಕ್ರಿಯಿಸಿ 10% ಅನ್ನು ಬಿಜೆಪಿಯವರು ತೆಗೆದುಕೊಳ್ಳಲಿ. ಅವರು ಹೇಳೋದು ಸರಿಯಿದೆ. ಬಿಜೆಪಿ ಶಾಸಕರು ಸಹ ಗಾಡಿ ಕೊಟ್ಟು ಕಳುಸಿದ್ದಾರೆ. ಅದರಲ್ಲಿ ಹತ್ತು ಪರ್ಸೆಂಟ್ ಮೈನಸ್ ಮಾಡೋಣ ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆಗಸ್ಟ್ 9ರಂದು ಬಿಜೆಪಿ ಶಾಸಕ ಅಭಯ್ ಪಾಟೀಲ್, ಅನಿಲ್ ಬೆನಕೆಗೆ ಮೇಯರ್, ಉಪಮೇಯರ್ ಗೌನ್ ನೀಡುತ್ತೇನೆಂದು ವ್ಯಂಗ್ಯವಾಡಿದರು. ಬಿಜೆಪಿ ಕಾರ್ಪೊರೇಟರ್‌ಗಳು ಕಾಂಗ್ರೆಸ್​ಗೆ ಬರುವ ಬಗ್ಗೆ ಚರ್ಚೆ ಅಗಿಲ್ಲ. ಬಿಜೆಪಿ ಪಾಲಿಕೆ ಸದಸ್ಯರ ಗುಂಪಿನಲ್ಲಿ ಚರ್ಚೆ ಆಗಿದೆ. ನನ್ನ ಪ್ರಕಾರ ಎಂಎಲ್‌ಎ ಎಲೆಕ್ಷನ್ ಆಗೋವರೆಗೂ ಮೇಯರ್, ಉಪಮೇಯರ್ ಚುನಾವಣೆ ಆಗಲ್ಲ ಎಂದು ಟೀಕಿಸಿದರು.

ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆ ಕಾಮಗಾರಿ ಆರಂಭ ಮಾಡುತ್ತೇವೆಂಬ ಸಚಿವ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡೂ ಕಡೆ ಅವರದ್ದೇ ಸರ್ಕಾರ ಇದೆ. ಮಹದಾಯಿ ಯೋಜನೆ ಶೀಘ್ರ ಜಾರಿ ಮಾಡಬೇಕು. ದೊಡ್ಡ ಮೊತ್ತ ಖರ್ಚು ಆಗುವ ಯೋಜನೆ ಏನೂ ಅಲ್ಲ. ಕೇವಲ ಮಹದಾಯಿ ನೀರು ಡೈವರ್ಶನ್ ಮಾಡಬೇಕಿದೆ. ಈಗಾಗಲೇ ಶೇಕಡ 50ರಷ್ಟು ಕೆಲಸ ಆಗಿದೆ. ಮಹದಾಯಿ ನೀರು ಹಂಚಿಕೆ ಕೂಡಾ ಆಗಿದೆ. ಆದ್ರೆ ಏಕೆ ವಿಳಂಬ ಮಾಡ್ತಿದ್ದಾರೆಂದು ಅಸಮಾಧಾನ ಹೊರಹಾಕಿದರು. ಸರ್ಕಾರದ ಗಮನ ಸೆಳೆಯಲು ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡಲಿದೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಕರ್ನಾಟಕ ಹೆಸರಿನ ಪೋಸ್ಟರ್ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅರ್ಹತೆ ಇಲ್ಲದವರು ಯಾರು ಸಿಎಂ ಆಗಿದ್ದಾರೆ?. ಯಾವುದೇ ಪಕ್ಷದವರೇ ಇರಲಿ, ಅರ್ಹತೆ ಇಲ್ಲ ಅಂತಾ ಹೇಳಕ್ಕಾಗಲ್ಲ. ಸಿಎಂ ಅದ ಮೇಲೆ ಅದರದ್ದೇ ಆದಂತಹ ಗೌರವ, ಘನತೆ ಇದ್ದೇ ಇರುತ್ತದೆ. ಎಲ್ಲರೂ ಸಿಎಂ ಆಗಲಿಕ್ಕೆ ಆಗಲ್ಲ. ಅದಕ್ಕೆ ಅವಕಾಶ ಬರಬೇಕು. ಪಕ್ಷದಲ್ಲಿ ಅದಕ್ಕೆ ತನ್ನದೇ ಆದಂತಹ ವರ್ಚಸ್ಸು ಇರಬೇಕು. ಜನಪ್ರಿಯ ವ್ಯಕ್ತಿತ್ವ ಇರಬೇಕು. ಸುಮ್ಮನೇ ಓಡಾಡಿದರೆ ಅದಕ್ಕೆ ಅವಕಾಶ ಇಲ್ಲ ಎಂದರು.

ಇದನ್ನೂ ಓದಿ: ಬೆಳಗ್ಗೆ- ರಾತ್ರಿ ವೇಳೆ 15 ನಿಮಿಷಕ್ಕೊಮ್ಮೆ ನಮ್ಮ ಮೆಟ್ರೋ ರೈಲು ಸಂಚಾರ

ಬೆಳಗಾವಿ ನಗರ ಕಾಂಗ್ರೆಸ್ ಘಟಕದಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ವ್ಯತ್ಯಾಸ ಇದ್ದೇ ಇರುತ್ತವೆ. ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು. ಫಿರೋಜ್ ಸೇಠ್ ನಾನೇ ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿ ಅಂತಾ ಘೋಷಣೆ ವಿಚಾರಕ್ಕೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅಂತಿಮವಾಗಿ ಹೈಕಮಾಂಡ್‌ನವರು ಹೇಳ್ತಾರೆ ಎಂದು ಪ್ರತಿಕ್ರಿಯಿಸಿರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.