ಬೆಂಗಳೂರು : ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗಿ ಪದೋನ್ನತಿ ಪಡೆದಿರುವ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿಸಲಾಗಿದೆ.
ಸಂವಿಧಾನದ ವಿಧಿ 223ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ರಾಷ್ಟ್ರಪತಿಗಳು ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಆಗಿರುವ ಸತೀಶ್ ಚಂದ್ರ ಶರ್ಮಾ ಅವರನ್ನು ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ. ಈ ಕುರಿತು ಇಂದು ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
![satish-chandra-sharma-appointed-as-acting-chief-justice-of-high-court](https://etvbharatimages.akamaized.net/etvbharat/prod-images/kn-bng-03-hc-actingcj-7208962_27082021173341_2708f_1630065821_21.jpg)
ಮಧ್ಯ ಪ್ರದೇಶದ ಭೋಪಾಲ್ನ ಕೃಷಿ ಕುಟುಂಬದಿಂದ ಬಂದಿರುವ ನ್ಯಾ. ಸತೀಶ ಚಂದ್ರ ಶರ್ಮಾ ಅವರು 2008ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇವರನ್ನು 2021ರ ಜನವರಿ 4ರಂದು ರಾಜ್ಯ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಮೊದಲ ಮಹಿಳಾ ಸಿಜೆಐ ಆಗ್ತಾರೆ ಕನ್ನಡತಿ ನ್ಯಾ. ನಾಗರತ್ನರ ಹಿನ್ನೆಲೆ, ಸಾಧನೆ.. ಅಪ್ಪನ ಹಾದಿಯಲ್ಲಿ ಮಗಳು..