ETV Bharat / state

ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ್ದ ಸಂಜನಾ: ವಿಡಿಯೋ ಜಾಡು ಹಿಡಿದ ಸಿಸಿಬಿ ಸಿಕ್ಕ ಮಾಹಿತಿ ಏನ್​ ಗೊತ್ತಾ? - sanjana Arrest

ನಟಿ ಸಂಜನಾ ಈ ಹಿಂದೆ ಟ್ರಾಫಿಕ್ ರೂಲ್ಸ್​ನ್ನು ಬ್ರೇಕ್​ ಮಾಡಿ ಸೆಲ್ಫಿ ವಿಡಿಯೋ ಮಾಡುತ್ತಾ ಕಾರು ಚಲಾಯಿಸುವ ವಿಡಿಯೋ ಲಭ್ಯವಾಗಿದೆ. ಸದ್ಯ ಈ ದೃಶ್ಯಗಳ ಆಧಾರದ ಮೇಲೆ ವಿಚಾರಣೆ ನಡೆಸಲಾಗಿದೆ.

ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ ಸಂಜನಾ
ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ ಸಂಜನಾ
author img

By

Published : Sep 10, 2020, 10:29 AM IST

ಬೆಂಗಳೂರು: ಡ್ರಗ್ಸ್​ ನಂಟು ಆರೋಪದಲ್ಲಿ ಸಿಕ್ಕಿ‌ಬಿದ್ದಿರುವ ನಟಿ ಸಂಜನಾರ ವಿಚಾರಣೆಯನ್ನು ಸಿಸಿಬಿ ಚುರುಕುಗೊಳಿಸಿದೆ. ನಟಿ ಸಂಜನಾ ಈ ಹಿಂದೆ ಟ್ರಾಫಿಕ್ ರೂಲ್ಸ್​ನ್ನು ಬ್ರೇಕ್​ ಮಾಡಿ ಸೆಲ್ಫಿ ವಿಡಿಯೋ ಮಾಡುತ್ತಾ ಕಾರು ಚಲಾಯಿಸಿದ್ದರು ಎನ್ನಲಾದ ವಿಡಿಯೋ ಈಗ ನಟಿಗೆ ಮುಳುವಾಗಿದೆ.

ಸಂಜನಾ ಒಂದು ಕೈಯಲ್ಲಿ ಡ್ರೈವ್​ ಮಾಡುತ್ತಾ, ಇನ್ನೊಂದು ಕೈಯಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅಷ್ಟೇ ಅಲ್ಲದೆ, ಆಕೆಯ ಕಾರಿನಲ್ಲಿ ಸದ್ಯ ಪ್ರಕರಣದ ಎ13 ಆರೋಪಿಯಾಗಿರುವ ನಿಯಾಸ್ ಅಹಮ್ಮದ್ ಸಹ ಇದ್ದ ಎಂದು ತಿಳಿದುಬಂದಿದೆ.

ಇದನ್ನು ಓದಿ: ವಿಸ್ಕಿ ಗಲಾಟೆ ನಂತರ ಮತ್ತೆ ವಿವಾದದಲ್ಲಿ ಸಂಜನಾ... ಕಾರು ಚಲಾಯಿಸುತ್ತಲೇ ಸೆಲ್ಫಿ ವಿಡಿಯೋ‌

ಈತ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ಇವನ ಜೊತೆ ನಟಿ ಸಂಜನಾ ತಿರುಗಾಡುವ ದೃಶ್ಯ ಕೂಡ ಸದ್ಯ ಸಿಸಿಬಿಗೆ ಲಭ್ಯವಾಗಿದೆ. ನಟಿ ಸಂಜನಾ ಐಷಾರಾಮಿ​ ಜೀವನ​ ನಡೆಸುತ್ತಿದ್ದು, ಡ್ರಗ್ಸ್​​ ಪೆಡ್ಲರ್​ಗಳ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸಿಸಿಬಿ ಪೊಲೀಸರು ರಾಹುಲ್ ಹಾಗೂ A13 ನಿಯಾಸ್ ಪರಿಚಯದ ಬಗ್ಗೆ ಪ್ರಶ್ನಿಸಿದ್ದಾರೆ. ಕೇವಲ ಪರಿಚಯ ಅಷ್ಟೇ, ಅವರ ವ್ಯವಹಾರ ಗೊತ್ತಿಲ್ಲವೆಂಬ ಉತ್ತರವನ್ನು ಸಂಜನಾ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಂಜನಾ ಡ್ರಗ್ಸ್​ ಪೆಡ್ಲರ್​ಗಳ ಜೊತೆಗಿನ ಸಂಪರ್ಕದ ಬಗ್ಗೆ ಸಿಸಿಬಿ ಈಗಾಗಲೇ ಮಾಹಿತಿ ಕಲೆಹಾಕಿದೆ.

A13 ನಿಯಾಸ್ ಅಹಮ್ಮದ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್​ ಆಗಿದ್ದನು. ಈತ ಪಾರ್ಟಿಗಳಲ್ಲಿ ಡ್ರಗ್ಸ್​ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.