ಬೆಂಗಳೂರು: ನಟಿ ಸಂಜನಾಗೆ ಸಿಸಿಬಿ ಅಧಿಕಾರಿಗಳು ಬಿಗ್ ಶಾಕ್ ಕೊಡಲು ಮುಂದಾಗಿದ್ದಾರೆ. ಹೌದು, ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ ನಿಯಾಜ್ ಅಹಮದ್ ಹಾಗು ರಾಹುಲ್ ರಾಕಿ ಬ್ರದರ್ ಜೊತೆ ಇರುವ ಫೋಟೋಗಳು ಸದ್ಯ ವೈರಲ್ ಆಗಿದ್ದು, ಇವು ಸಂಜನಾಗೆ ಮುಳುವಾಗುವ ಸಾಧ್ಯತೆಯಿದೆ.
ಡ್ರಗ್ ಡೀಲರ್ ಜೊತೆ ನಟಿ ಸಂಜನಾ ಗುಲ್ರಾನಿ ಲಿಂಕ್ ಹೊಂದಿದ್ದಾರೆ. ಹೀಗಾಗಿ ಸಂಜನಾರನ್ನು ಸಿಸಿಬಿಗೆ ಕರೆತಂದಾಗ ಡ್ರಗ್ ಪೆಡ್ಲರ್ ಜೊತೆ ನಿಮ್ಮ ನಂಟೇನು? ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದೂ ನಿಯಾಜ್ ಹಾಗೂ ರಾಹುಲ್ ಜೊತೆ ಒಡನಾಟವೇಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳುವ ಸಾಧ್ಯತೆಯಿದೆ.
ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಸದ್ಯ ನಿಯಾಜ್ ಅಹಮದ್ ಸಿಸಿಬಿ ವಶದಲ್ಲಿದ್ದಾರೆ. ಈತ ಮೂಲತಃ ಕೊಚ್ಚಿಯವನಾಗಿದ್ದು, ಬೆಂಗಳೂರಿಗೆ ಬಂದು ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರವಾಗಿ ನಿಯಾಜ್ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ನಟಿ ಸಂಜನಾ ಗುಲ್ರಾನಿ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ. ನಟಿ ಸಂಜನಾಗೆ ನಿಯಾಜ್, ರಾಹುಲ್ ಹಾಗು ಪೃಥ್ವಿ ಈ ಮೂರು ಜನರ ಸಾಕ್ಷಿಯೇ ಮುಳುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದುವರೆದ ಶೋಧ ಕಾರ್ಯ: ನಟಿ ಸಂಜನಾ ಗಲ್ರಾನಿಗೂ ಕಂಟಕವಾಗುತ್ತಾ ಡ್ರಗ್ಸ್ ಪ್ರಕರಣ?
ಸದ್ಯ ಸಿಸಿಬಿ ಕಚೇರಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಕೂಡ ಆಗಮಿಸಿದ್ದು, ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಂಜನಾ ಗುಲ್ರಾನಿಯನ್ನು ಯಾವ ರೀತಿ ತನಿಖೆ ನಡೆಸಬೇಕು ಅನ್ನೋ ಚರ್ಚೆ ಕೂಡ ಮಾಡಲಾಗಿದೆ.