ETV Bharat / state

ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಸಿಡಿಮಿಡಿ... ನಟಿ ಹೇಳಿದ್ದೇನು ಗೊತ್ತಾ!? - ಪ್ರಶಾಂತ್​ ಸಂಬರಗಿ

ಪ್ರಶಾಂತ್ ಸಂಬರಗಿ 200 ರೂಪಾಯಿ ತೆಗೆದುಕೊಂಡು ಚೀಪ್ ಪಬ್ಲಿಸಿಟಿಗೆ ಬಂದಿದ್ದಾರೆ. ಸದ್ಯದ ಸೂಕ್ಷ್ಮ ಸಂದರ್ಭದಲ್ಲಿ ಬರೀ ನಟಿಯರ ಹೆಸರು ತೆಗೆದುಕೊಂಡು ಫಿಲ್ಮ್​ ಚೇಂಬರ್ ಹೆಸರು ತೆಗೆದು ಸದ್ಯ ಪಬ್ಲಿಸಿಟಿ ಮಾಡ್ತಿದ್ದಾರೆ. ಪ್ರಶಾಂತ್ ಸಂಬರಗಿಗೆ ನನ್ನ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ನಟಿ ಸಂಜನಾ ಗಲ್ರಾನಿ ಸಿಡಿಮಿಡಿಗೊಂಡಿದ್ದಾರೆ.

Sanjana Garlani
ಸಂಜನಾ ಸಂಬರಗಿ
author img

By

Published : Sep 3, 2020, 12:16 PM IST

Updated : Sep 3, 2020, 1:15 PM IST

ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ ವಿಚಾರ ಸದ್ದು ಮಾಡ್ತಿರುವ ವೇಳೆ ಸಂಜನಾ ಗಲ್ರಾನಿ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ಸಂಜನಾ, ಮಾಧ್ಯಮದವರು ನಿರಂತರವಾಗಿ ಕರೆ ಮಾಡುತ್ತಿದ್ದಾರೆ. ಡ್ರಗ್ಸ್​ ಕೇಸ್ ಸಂಬಂಧ ಪ್ರತಿಕ್ರಿಯೆಗಾಗಿ ನಿರಂತರವಾಗಿ ಸಂಪರ್ಕಿಸುತ್ತಿದ್ದಾರೆ. ನಾನು ಈ ವಿಚಾರವಾಗಿ ಏನೂ ಮಾತನಾಡಲು ಸಾಧ್ಯವಿಲ್ಲ. ನಾನು ಏನೇ ಪ್ರತಿಕ್ರಿಯಿಸಿದರೂ ಅದು ಪಬ್ಲಿಸಿಟಿಯಾಗುತ್ತೆ. ಇದರ ವಿಚಾರವಾಗಿ ನಮಗೆ ಚೀಪ್ ಪಬ್ಲಿಸಿಟಿ ಬೇಡ. ನಾನು ಮಾಧ್ಯಮಕ್ಕೆ ಯಾವುದೇ ರೆಸ್ಪಾನ್ಸ್ ಕೊಡಲು ಇಷ್ಟವಿಲ್ಲ ಎಂದಿದ್ದಾರೆ.

ನಾನು ಪ್ರಶಾಂತ್ ಸಂಬರಗಿ ಬಗ್ಗೆ ಎಲ್ಲೂ ಕೂಡ ಕೆಟ್ಟದಾಗಿ ಮಾತಾಡಿಲ್ಲ. ಪ್ರಶಾಂತ್ ರಾಜಕಾರಣಿಗಳಿಗೆ ಬ್ರೋಕರ್ ಆಗಿ ವರ್ತಿಸಿದ್ದಾರೆ. ಜೊತೆಗೆ ಮಾಧ್ಯಮದಲ್ಲಿ ನನ್ನ ಬಗ್ಗೆ ಕೂಡ ಪ್ರಶ್ನಿಸಿದ್ದಾರೆ‌. ನಾನು ನಾಯಕಿಯಾಗಿ ಗಂಡ-ಹೆಂಡತಿ ಒಂದೇ ಸಿನಿಮಾ ಮಾಡಿದ್ದು, ಆದರೆ ಪ್ರಶಾಂತ್ ನನ್ನನ್ನು ತನಿಖೆ ಮಾಡಿ ನಿಜಾಂಶ ಬಯಲಿಗೆ ತನ್ನಿ ಎಂದಿದ್ದರು. ನಾನು ಈವರೆಗೆ 50 ಸಿನಿಮಾದಲ್ಲಿ‌ ನಟಿಸಿದ್ದೇನೆ. ನಟರಾದ ದರ್ಶ‌ನ್, ಶಿವಣ್ಣ, ಪವನ್ ಕಲ್ಯಾಣ್, ಮೋಹನ್ ಲಾಲ್, ಸುದೀಪ್ ಜೊತೆ ನಟಿಸಿದ್ದೇನೆ. ಅಲ್ಲದೇ ಬಾಲಿವುಡ್​ನಲ್ಲೂ ಸ್ಮಾಲ್ ಸ್ಕ್ರೀನ್ ಶೇರ್ ಮಾಡಿದ್ದೇನೆ. ಆದ್ರೆ ಪ್ರಶಾಂತ್ ಸಂಬರಗಿ 200 ರೂಪಾಯಿ ತೆಗೆದುಕೊಂಡು ಚೀಪ್ ಪಬ್ಲಿಸಿಟಿಗೆ ಬಂದಿದ್ದಾರೆ. ಸದ್ಯದ ಸೂಕ್ಷ್ಮ ಸಂದರ್ಭದಲ್ಲಿ ಬರೀ ನಟಿಯರ ಹೆಸರು ಮತ್ತು ಫಿಲ್ಮ್​​ ಚೇಂಬರ್ ಹೆಸರು ಹೇಳಿಕೊಂಡು ಸದ್ಯ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಪ್ರಶಾಂತ್ ಸಂಬರಗಿಗೆ ನನ್ನ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ಸಂಜನಾ ಕಿಡಿಕಾರಿದ್ದಾರೆ.

ನನಗೆ ತಂದೆ-ತಾಯಿ ಚಿಕ್ಕಂದಿನಲ್ಲೇ ಹೇಳಿಕೊಟ್ಟಿದ್ದಾರೆ, ನಾಯಿ ಬೊಗಳಿದ್ರೆ ನೀನು ತಿರುಗಿ ಬೊಗಳಬೇಡ. ಅದನ್ನ ಸೈಡ್ ಲೈನ್ ಮಾಡಿ ಮುಂದೆ ಸಾಗು ಎಂದು. ಹಾಗೆ ನಾನು ಕೂಡ ಎಲ್ಲದನ್ನೂ ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ನನಗೆ ಗೊತ್ತು, ನಾನು ಐಶ್ವರ್ಯ ರೈ ಅಲ್ಲ. ಆದರೆ ನನ್ನದೇ ಆದ ಫ್ಯಾನ್ಸನ್ನು ಬೆಳೆಸಿಕೊಂಡಿದ್ದೇನೆ. ಅಲ್ಲದೇ ನನ್ನ ಬಗ್ಗೆ ನನಗೆ ಗೊತ್ತು ಎಂದಿದ್ದಾರೆ ಸಂಜನಾ.

ನಾನು ನಟಿಸಿರುವ ಕನ್ನಡ, ತಮಿಳು ಚಿತ್ರ ರೀಲಿಸ್​ಗೆ ರೆಡಿ ಇದೆ. ನನ್ನ ಜೀವನದ ಪ್ರತಿಕ್ಷಣವು ಕೂಡ ಸಾಧನೆ ಕಡೆಗೆ ಅಲೋಚಿಸಿದ್ದೇನೆ. ನಾನು 16 ವರ್ಷಗಳಿಂದ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೇ ಈ 16 ವರ್ಷಗಳಲ್ಲಿ ಎಲ್ಲಿಂದ ಆದಾಯ ಬಂದಿದೆ‌. ಇವೆಲ್ಲವನ್ನು ನಾನು ಸಾಕ್ಷಿ ಸಮೇತ ಕೊಡಬಲ್ಲೆ ಎಂದು ಸಂಜನಾ ಗಲ್ರಾನಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Last Updated : Sep 3, 2020, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.