ಬೆಂಗಳೂರು: ಬಹುಭಾಷಾ ನಟಿ ಸಂಜನಾ ಅವರ ಆಪ್ತ ರಾಹುಲ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾಹುಲ್ನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಹೀಗಾಗಿ ಸದ್ಯ ವಿಚಾರಣೆಗೆ ಕರೆತಂದು 24 ಗಂಟೆಯಾದ ಕಾರಣ ಸದ್ಯ ವಶಕ್ಕೆ ಪಡೆದು ಮುಂದಿನ ಪ್ರಕ್ರಿಯೆ ನಡೆಸುತ್ತಿದ್ದಾರೆ.
ರಾಹುಲ್ ಬಳಿ ಬಹುತೇಕ ಡ್ರಗ್ ಸಂಬಂಧಿತ ಮಾಹಿತಿ ಸಿಕ್ಕ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ರಾಹುಲ್ ಶ್ರೀಲಂಕಾದಲ್ಲಿ ಕೆಸಿನೋ ನಡೆಸುತ್ತಿದ್ದ. ಹಾಗೆಯೇ ನಗರದ ಬಹುತೇಕ ಕಡೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ.
ಇದೇ ಮಾಹಿತಿಯ ಆಧಾರದ ಮೇಲೆ ರಾಹುಲ್ನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಸಂಜನಾಗೆ ಕೂಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ಸಂಜನಾ ಆಪ್ತನನ್ನು ವಶಕ್ಕೆ ಪಡೆದ ಕಾರಣ ಆಕೆಗೂ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ.