ಬೆಂಗಳೂರು: ನಟಿ ಸಂಜನಾ ಗಲ್ರಾನಿ ಪ್ರಶಾಂತ್ ಸಂಬರಗಿ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ. ಮೂರು ದಿನಗಳ ಬಳಿಕ ಮನೆಯಿಂದ ಹೊರ ಬಂದ ಸಂಜನಾ ತಾಯಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಲಂಕಾ ಬ್ಯಾಲೀಸ್ ಕೆಸಿನೋದಲ್ಲಿ ಪಾರ್ಟಿಗೆ ನಾನು ಚೀಫ್ ಗೆಸ್ಟ್ ಆಗಿ ಹೋಗಿದ್ದೆ. ಯಶ್, ಉಪೇಂದ್ರ ಸೇರಿ ತುಂಬಾ ಜನ ಸೆಲೆಬ್ರಿಟಿಗಳು ಹೋಗಿದ್ದಾರೆ. ವಿವೇಕ್ ಓಬೆರಾಯ್ ಮುಖ್ಯ ಅತಿಥಿ ಆಗಿ ಬಂದಿದ್ದರು. ಅಲ್ಲದೆ ಆ ಪಾರ್ಟಿಗೆ ನನ್ನ ಅಪ್ಪ, ಅಮ್ಮ ಕೂಡ ಜೊತೆಗೆ ಬಂದಿದ್ದರು. ಊಹಾಪೋಹಗಳು ಮಾಡಬೇಡಿ. ನನ್ನ ಅಮ್ಮನಿಗೆ ಎದೆನೋವು ಬಂದಿದೆ. ಅವರಿಗೆ ಏನಾದರೂ ತೊಂದರೆ ಆದರೆ ನಾನು ಮಾತ್ರ ಸುಮ್ಮನೆ ಇರಲ್ಲ. ಸದ್ಯ ಸಿಸಿಬಿ ಅವರು ತನಿಖೆ ಮಾಡುತ್ತಿದ್ದಾರೆ. ನಾನು ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದ್ದಾರೆ.
ನಾನು ಶ್ರಮಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ಶಾಸಕ ಜಮೀರ್ ಅಹ್ಮದ್ ಅವರಲ್ಲಿ ಮನವಿ ಮಾಡುತ್ತಿದ್ದು, ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ. ಚಿಯರ್ ಗರ್ಲ್ ಅಂದಿದ್ದಾನೆ. ಅವನಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಅಗ್ಗದ ಪ್ರಚಾರಕ್ಕೆ ಹೀಗೆಲ್ಲಾ ಮಾಡ್ತಿದಾನೆ. ಸೆಲೆಬ್ರಿಟಿ ಆಗಿರೋ ಕಾರಣ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಸುದ್ದಿಯಲ್ಲಿರೋರನ್ನ ಬಳಸಿಕೊಂಡು ಗಿಮಿಕ್ ಮಾಡ್ತಿದ್ದಾನೆ. ನಾನೇನೂ ತಪ್ಪುಮಾಡಿಲ್ಲ. ಪೊಲೀಸರನ್ನು ಗೌರವಿಸ್ತೀನಿ. ನನಗೆ ಸಂಬಂಧವೇ ಇಲ್ಲ. ನನ್ನ ಹೆಸರೂ ಎಫ್ಐಆರ್ನಲ್ಲಿ ಇಲ್ಲ. ಇದನ್ನ ಇಲ್ಲಿಗೇ ನಿಲ್ಲಿಸಿ. ರಾಹುಲ್ ಆಚೆ ಬಂದರೆ ಸಾಕು, ಪೊಲೀಸ್ರು ಕರೆದರೆ ಹೋಗ್ತೀನಿ. ಲಾಯರ್ ಕಳಿಸಲ್ಲ. ನಾನೇ ಖುದ್ದಾಗಿ ಹೋಗ್ತೀನಿ ಎಂದು ಸಂಜನಾ ತಿಳಿಸಿದ್ದಾರೆ.