ETV Bharat / state

ಸದ್ದಿಲ್ಲದೆ ಯೋಗಿ ವಿಚಾರಣೆ ನಡೆಸಿದ ಐಎಸ್​​ಡಿ : ಬ್ರಹ್ಮಗಂಟು ಸೀರಿಯಲ್ ನಟಿಗೂ ನಾಳೆ ಬುಲಾವ್! ​

author img

By

Published : Sep 21, 2020, 8:31 PM IST

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಇದೀಗ ವಿಚಾರಣೆ ಚುರುಕುಗೊಳಿಸಿದ್ದು, ಸದ್ಯ ಮತ್ತಿಬ್ಬರಿಗೆ ಬುಲಾವ್​ ನೀಡಿ ನೋಟಿಸ್​ ಜಾರಿಗೊಳಿಸಿದೆ.

sandlwood drugs case
sandlwood drugs case

ಬೆಂಗಳೂರು: ಸ್ಯಾಂಡಲ್​​ವುಡ್​​ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಶಂಕೆ ಮೇರೆಗೆ ಇದೀಗ ಬ್ರಹ್ಮಗಂಟು ಧಾರಾವಾಹಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಮುಖ ನಟಿಗೆ ಬುಲಾವ್​ ನೀಡಲಾಗಿದೆ.

ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದು, ಹೀಗಾಗಿ ನಟಿ ಗೀತಾ ಭಾರತಿ ಭಟ್ ಸೇರಿದಂತೆ ಇಬ್ಬರು ನಾಳೆ ವಿಚಾರಣೆಗೊಳಪಡಲಿದ್ದಾರೆ.

ಡ್ರಗ್ಸ್​ ಪ್ರಕರಣ: ನಟ ಯೋಗಿ, ಮಾಜಿ ಕ್ರಿಕೆಟಿಗ ಅಯ್ಯಪ್ಪ ವಿಚಾರಣೆಗೊಳಪಡಿಸಿದ 'ಐಎಸ್​​ಡಿ' ತಂಡ

ಡ್ರಗ್ಸ್ ಕೇಸ್ ಸಂಬಂಧ ತನಿಖೆ ನಡೆಸಿ ಇತ್ತೀಚೆಗೆ ಬಂಧನಕ್ಕೊಳಗಾದ‌ ಆರೋಪಿ ಮೊಬೈಲ್​ನಲ್ಲಿ ಒಳ ಹಾಗೂ ಹೊರ ಹೋಗುವ ಕರೆ (ಸಿಡಿಆರ್) ತನಿಖೆ ನಡೆಸಿದಾಗ ನಟಿ ಗೀತಾ ಭಾರತಿ ಭಟ್ ಹಾಗೂ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಆ್ಯಂಕರ್ ಅಭಿಷೇಕ್ ಎಂಬುವರಿಗೆ ಡ್ರಗ್ಸ್ ಫೆಡ್ಲರ್ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

sandlwood drugs case
ಬ್ರಹ್ಮಗಂಟು ಸೀರಿಯಲ್ ನಟಿಗೂ ನಾಳೆ ಬುಲಾವ್! ​

ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಿದೆ‌. ಈಗಾಗಲೇ ಮಾಜಿ‌ ಕ್ರಿಕೆಟಿಗ ಅಯ್ಯಪ್ಪ, ನಟಿ‌ ರಶ್ಮಿ ಚೆಂಗಪ್ಪ,‌ ನಟ ಯೋಗೇಶ್​, ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.