ETV Bharat / state

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್ ನಂಟು ಆರೋಪ​ ಪ್ರಕರಣ... ನೈಜೀರಿಯಾ ಪೆಡ್ಲರ್ ಬಂಧನ - ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020 ಅಪ್​ಡೇಟ್​,

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್ ನಂಟು ಆರೋಪ​ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾ ಪೆಡ್ಲರ್​ಅನ್ನು ಪೊಲೀಸರು ಬಂಧಿಸಿದ್ದಾರೆ.

Nigerian peddler arrest, Nigerian peddler arrest in Bangalore, Sandalwood drugs case, Sandalwood drugs case 2020, Sandalwood drugs case 2020 news, Sandalwood drugs case latest news, Sandalwood drugs case 2020 update, ನೈಜೀರಿಯಾ ಪೆಡ್ಲರ್ ಬಂಧನ, ಬೆಂಗಳೂರಿನಲ್ಲಿ ನೈಜೀರಿಯಾ ಪೆಡ್ಲರ್ ಬಂಧನ, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020 ಸುದ್ದಿ, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020 ಅಪ್​ಡೇಟ್​,
ನೈಜೀರಿಯಾ ಪೆಡ್ಲರ್ ಬಂಧನ
author img

By

Published : Sep 25, 2020, 11:25 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ​ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕಾಟನ್ ಪೇಟೆ ಕೇಸ್ ಅಡಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಡ್ರಗ್ ಪೆಡ್ಲಿಂಗ್ ಆಧಾರದ ಮೇಲೆ ಸಿಸಿಬಿ ಪೊಲೀಸರು ನೈಜೀರಿಯಾ ಪ್ರಜೆ ಓಸ್ಸಿಯನ್ನು ಬಂಧಿಸಿದ್ದಾರೆ. ಈಗ ಬಂಧನವಾಗಿರುವ ಆರೋಪಿ ಈ ಹಿಂದೆ‌ ಸೈಮನ್ ಎಂಬ ವ್ಯಕ್ತಿಯ ಸಹಚರನಾಗಿದ್ದ. ಈ ಹಿಂದೆ ಸೈಮನ್ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಮಂದಿ ಪೆಡ್ಲರ್​ಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ಎನ್ನಲಾಗ್ತಿದೆ.

ಓಸ್ಸಿ ಎಂಬ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಈತ ಡ್ರಗ್ಸ್​ ಕೇಸ್​ನಲ್ಲಿ ಬಂಧಿತರಾದ ನಟಿಯರಿಗೆ ಹಾಗೆ ನಟಿಯರ ಆಪ್ತರಿಗೆ ಡ್ರಗ್ಸ್​ ಪೂರೈಸುತ್ತಿದ್ದ. ಸದ್ಯ ಬಂಧಿತ ಓಸ್ಸಿ ಇಂದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಸಿಸಿಬಿ ಕಚೇರಿಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಓಸ್ಸಿನ ವಿಚಾರಣೆಗೆ ಒಳಪಡಿಸಿದ್ದು, ಬಹುತೇಕ ಮಂದಿಗೆ ಡ್ರಗ್ಸ್​ ಸಂಕಷ್ಟ ಎದುರಾಗಿದೆ. ಯಾಕಂದ್ರೆ ಈ ನೈಜೀರಿಯಾ ಪ್ರಜೆಗಳು ವಿದೇಶದಿಂದ ಮಾದಕ ಮಾತ್ರೆಗಳನ್ನ ನಗರಕ್ಕೆ ತಂದು ನಗರದ ಪೆಡ್ಲರ್​ಗೆ ನೀಡಿ ತಮ್ಮ ಜಾಲವನ್ನು ಸೃಷ್ಟಿ ಮಾಡುತ್ತಿದ್ದರು. ಹೀಗಾಗಿ ಸದ್ಯ ಸಿಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈತನ ಹೇಳಿಕೆ ಆಧಾರದಿಂದ ಬಹುತೇಕ ಈತನ ಜೊತೆ ನಂಟಿರುವ ಆರೋಪಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.