ETV Bharat / state

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ: ಮೂವರು ಪ್ರಮುಖ ಆರೋಪಿಗಳಿಗಾಗಿ ಸಿಸಿಬಿ ಶೋಧ - ಮೂವರು ಪ್ರಮುಖ ಆರೋಪಿಗಳಿಗೆ ಸಿಸಿಬಿ ಶೋಧ

ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾದ ಮೂವರು ಪ್ರಮುಖ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಇವರ ಬಂಧನವಾದರೆ ದೊಡ್ಡ ದೊಡ್ಡವರ ಹೆಸರುಗಳು ಬಯಲಾಗುತ್ತವೆ ಎನ್ನಲಾಗಿದೆ.

Sandalwood Drugs case
ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ
author img

By

Published : Sep 17, 2020, 2:12 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾದ ಮೂವರು ಪ್ರಮುಖ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಎಲ್ಲೆಡೆ ತಲಾಷ್ ನಡೆಸಿದ್ದಾರೆ. ಈ ಡ್ರಗ್ಸ್​​ ಮಾಫಿಯಾದ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಮೂವರು ಆರೋಪಿಗಳನ್ನ ಪೊಲೀಸರು ಖೆಡ್ಡಾಕ್ಕೆ ಕೆಡವಿದರೆ ಬಹಳಷ್ಟು ಮಾಹಿತಿ ಹೊರಬರಲಿದೆ.

ಮೂವರು ಆರೋಪಿಗಳ ಬಂಧನದಿಂದ ಬಹುತೇಕ ಸ್ಟಾರ್ ನಟ, ನಟಿಯರ ಹೆಸರುಗಳು ಹೊರ ಬೀಳಲಿದೆ. ಸದ್ಯ ಈ ಆರೋಪಿಗಳು ತಲೆಮರೆಸಿಕೊಂಡಿರುವ ಕಾರಣ ಸಿಸಿಬಿ ಪೊಲೀಸರ ತಂಡ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಶೊಧ ಮುಂದುವರೆಸಿದೆ. ಅಷ್ಟು ಮಾತ್ರವಲ್ಲದೆ ಏರ್​​ಪೋರ್ಟ್​ಗಳಲ್ಲಿ ಕೂಡ ಲುಕ್​ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

‌ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆಗೆ ಇಳಿದು ಕಾಟನ್​ಪೇಟೆ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಎ1 ಶಿವಪ್ರಕಾಶ್ ಚಪ್ಪಿ, ಎ6 ಆದಿತ್ಯಾ ಆಳ್ವಾ ಹಾಗೆಯೇ ಫಾಜೀಲ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಡ್ರಗ್ಸ್​ ಸಪ್ಲೆ ಮಾಡಿ ಸಿನಿಮಾ ತಾರೆಯರನ್ನ ಸೇರಿಸುತ್ತಿದ್ದರು ಎನ್ನಲಾಗಿದೆ.

ಸದ್ಯ ಈ ಆರೋಪಿಗಳು ತಲೆ‌ಮರೆಸಿಕೊಂಡಿರುವುದು ಸಿಸಿಬಿ ಪೊಲೀಸರಿಗೆ ತಲೆನೋವಾಗಿದೆ. ಈ ಮೂವರು ಕೂಡ ನಟಿ ಸಂಜನಾ ಹಾಗೂ ನಟಿ ರಾಗಿಣಿ ಜೊತೆ ಹಲವಾರು ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಪ್ರತಿಷ್ಠಿತ ರಾಜಾಕಾರಣಿ, ಉದ್ಯಮಿಗಳು, ಶ್ರೀಮಂತರ ಮಕ್ಕಳು, ಸ್ಟಾರ್ ನಟ, ನಟಿಯರು, ಸೀರಿಯಲ್ ಆರ್ಟಿಸ್ಟ್​ಗಳಿಗೆ ಡ್ರಗ್ಸ್ ಸಪ್ಲೆ ಮಾಡಿದ ಆರೋಪ ಇದೆ. ಇವರ ಬಂಧನಕ್ಕೆ ತನಿಖಾಧಿಕಾರಿಗಳು ಕಸರತ್ತು ಮಾಡುತ್ತಿದ್ದಾರೆ. ಇವರ ಬಂಧನವಾದ್ರೆ ಬಹುತೇಕ ಮಂದಿಗೆ ನಡುಕ ಉಂಟಾಗುವುದು ಪಕ್ಕಾ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.