ETV Bharat / state

ಆಫ್ರಿಕನ್​ ಭಾಷೆಯಲ್ಲಿ ಪ್ರಶ್ನೆ ಕೇಳಿ ಅಂತಿರುವ ಆರೋಪಿ: ಸಿಸಿಬಿ ಅಧಿಕಾರಿಗಳಿಗೆ ಲೂಮ್​ 'ಪೆಪ್ಪರ್​' ತಲೆನೋವು - ಬೆಂಗಳೂರು

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟು ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಆಫ್ರಿಕನ್​ ಪ್ರಜೆ ಲೂಮ್​ ಪೆಪ್ಪರ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಕ್ರೈಂ ವಿಭಾಗದ ಕಾನ್ಸ್​ಟೇಬಲ್​ ಶಶಿ ಅವರ ಸಹಾಯದಿಂದ ವಿಚಾರಣೆ ನಡೆಯುತ್ತಿದೆ.

ಲೂಮ್​  ಪೆಪ್ಪರ್
ಲೂಮ್​ ಪೆಪ್ಪರ್
author img

By

Published : Sep 8, 2020, 10:29 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟು ಆರೋಪದ ತನಿಖೆ ಚುರುಕು ಪಡೆದಿದ್ದು, ಬಂಧಿತ ಆರೋಪಿ ಲೂಮ್ ಪೆಪ್ಪರ್ ಸಿಸಿಬಿ ‌ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ.

ಆಫ್ರಿಕನ್ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ ಎನ್ನುತ್ತಿರುವ ಲೂಮ್ ಪೆಪ್ಪರ್ ತನಿಖೆಯನ್ನು, ಸಿಸಿಬಿ ಕ್ರೈಂ ವಿಭಾಗದ ಕಾನ್ಸ್​ಟೇಬಲ್​ ಶಶಿ ಅವರ ಸಹಾಯದಿಂದ ನಡೆಯುತ್ತಿದೆ.

ಪ್ರಕರಣದ 7ನೇ ಆರೋಪಿಯಾಗಿರುವ ಲೂಮ್ ಪೆಪ್ಪರ್​ ಇತ್ತೀಚೆಗೆಯಷ್ಟೇ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆದರೆ ತನಗೆ ಆಫ್ರಿಕನ್ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳ ಬಳಿ ಲೂಮ್ ಪೆಪ್ಪರ್ ಹೈಡ್ರಾಮ ಮಾಡಿದ್ದ. ಇನ್ನು ಈತನಿಗೆ ರಾಗಿಣಿ ಆಪ್ತ ರವಿಶಂಕರ್ ಜೊತೆ ಒಡನಾಟ ಇದೆ ಎನ್ನಲಾಗ್ತಿದೆ. ಆನ್​ಲೈನ್ ಮೂಲಕ ಇಬ್ಬರು ಇಂಗ್ಲಿಷ್​ ಭಾಷೆಯಲ್ಲಿ ಸಂವಹನ ನಡೆಸಿದ್ದರು. ಈ ದಾಖಲೆ ಇಟ್ಟು ತನಿಖೆ ನಡೆಸುತ್ತಿದ್ದರೂ ಸಹ ತನಗೆ ಇಂಗ್ಲಿಷ್ ಬರಲ್ಲ ಎಂದು ಹೇಳುತ್ತಿದ್ದಾನೆ.

ಈ ಹಿನ್ನೆಲೆಯಲ್ಲಿ ಆಫ್ರಿಕನ್​ ಭಾಷೆ ತಿಳಿದಿರುವ ಸಿಸಿಬಿ ಕ್ರೈಂ ವಿಭಾಗದ ಕಾನ್ಸ್​​ಟೇಬಲ್​ ಶಶಿ ಅವರ ಸಹಾಯದಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತ ವಿದೇಶದಿಂದ ಕಳ್ಳಸಾಗಣೆ ಮೂಲಕ ಡ್ರಗ್ಸ್​ ತಂದು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ, ಪಾರ್ಟಿ, ಪಬ್​ಗಳಲ್ಲಿ ಮಾರಾಟ ಮಾಡುತ್ತಿದ್ದನು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನು ಈತನಿಂದ ನಟಿ ರಾಗಿಣಿ ಆಪ್ತ ರವಿಶಂಕರ್ ಕೂಡ ಡ್ರಗ್ ಖರೀದಿ ಮಾಡಿದ್ದ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.