ETV Bharat / state

ಡ್ರಗ್ಸ್​​ ಜಾಲ... ನಟಿಮಣಿಯರಿಗೆ ಮುಳುವಾಗುತ್ತಾ 'ವೈಭವ'ದ ಹೇಳಿಕೆ..! - Ragini

ಡ್ರಗ್ಸ್ ಮಾಫಿಯಾ ಲಿಂಕ್​ ಆರೋಪ ಪ್ರಕರಣದಲ್ಲಿ ವೈಭವ್ ಜೈನ್ ಸಿಸಿಬಿ ಪೊಲೀಸರ ವಶದಲ್ಲಿದ್ದು, ಈತ ರಾಗಿಣಿ ಹಾಗೂ ಸಂಜನಾ ಆಪ್ತ ಎಂಬ ವಿಚಾರ ಬೆಳಕಿಗೆ ಬಂದಿದೆ. ಈತನ ಹೇಳಿಕೆ ಮೇಲೆ ನಟಿಯರ ಭವಿಷ್ಯ ನಿಂತಿದೆ.

ವೈಭವ್ ಜೈನ್ ಸಿಸಿಬಿ ಪೊಲೀಸರ ವಶ
ವೈಭವ್ ಜೈನ್ ಸಿಸಿಬಿ ಪೊಲೀಸರ ವಶ
author img

By

Published : Sep 13, 2020, 12:49 PM IST

ಬೆಂಗಳೂರು: ಡ್ರಗ್ಸ್ ಮಾಫಿಯಾ ಲಿಂಕ್​ ಆರೋಪ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಯ ಪುತ್ರ ವೈಭವ್ ಜೈನ್ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ. ಈತನ ವಿಚಾರಣೆ ನಡೆಸಿದಾಗ ಈತ ರಾಗಿಣಿ ಹಾಗೂ ಸಂಜನಾ ಆಪ್ತ ಎಂಬ ವಿಚಾರ ಬೆಳಕಿಗೆ ಬಂದಿದೆ.

ಇನ್ನು ತನಿಖೆಯ ವೇಳೆ ಈತನ ಜಾಲ ಇಷ್ಟೆನಾ ಅಥವಾ ಬೇರೆ ಕಡೆಗಳಲ್ಲೂ ಹರಡಿದೆಯೇ ಎಂಬ ಅನುಮಾನ ಎದ್ದಿದೆ. ಏಕೆಂದರೆ, ಶ್ರೀಲಂಕಾದ ಕ್ಯಾಸಿನೋ ಹಾಗೂ ಬೆಂಗಳೂರಿನ ಕೆಲ ಪಬ್​ಗಳಲ್ಲಿ ಭಾಗಿಯಾಗಿದ್ದ ಸಂಜನಾ ಜೊತೆ ವೈಭವ್ ಜೈನ್ ಕೂಡ ಕಾಣಿಸಿಕೊಂಡಿದ್ದ ಎನ್ನಲಾಗ್ತಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ವೈಭವ್ ಜೈನ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ. ನಟಿಮಣಿಯರ ರಂಗಿನ ಆಟದ ಬಗ್ಗೆ ಇಂಚಿಂಚೂ ಮಾಹಿತಿಯನ್ನ ನಟಿಯರ ಆಪ್ತರಿಂದಲೇ ಪಡೆದು ಇದನ್ನೇ ಸಾಕ್ಷ್ಯವನ್ನಾಗಿಸಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ವೈಭವ್ ಜೈನ್ ವೈಯಾಲಿಕಾವಲ್ ನಿವಾಸಿಯಾಗಿದ್ದು, ಈತನ ತಂದೆ ಚಿನ್ನದ ವ್ಯಾಪಾರಿಯಾಗಿದ್ದಾರೆ. ಆದರೆ ಈತ ರಾಗಿಣಿ ಆಪ್ತ ರವಿಶಂಕರ್ ಜೊತೆ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪವಿದೆ. ಡ್ರಗ್ಸ್​ ಪೂರೈಸಿದ ಆರೋಪದ ಮೇರೆಗೆ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಈತನನ್ನು ಐದನೇ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ‌.

ಈತ ಕ್ಯಾಸಿನೋ, ಪಬ್, ಪಾರ್ಟಿಗಳಲ್ಲಿ ಡ್ರಗ್ಸ್​ ಪೂರೈಕೆಯಿಂದ ಹಣ ಗಳಿಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ವೈಭವ್ ಜೈನ್ ಕೆಲವು ಹೇಳಿಕೆಗಳನ್ನು ನೀಡಿದ್ದು, ಇವು ಸಂಜನಾಗೆ ಮುಳುವಾಗುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.