ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ವಿಷಯ ಕೇಳಿ ಬಂದ ಬೆನ್ನಲ್ಲೇ ಸದ್ಯ ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಿಗೂ ಡ್ರಗ್ಸ್ ಪ್ರಕರಣಕ್ಕೂ ನಂಟು ಇರುವ ಮಾಹಿತಿ ಲಭ್ಯವಾಗಿದೆ.
ಸಿಸಿಬಿ ವಶದಲ್ಲಿರುವ ಕಾರ್ತಿಕ್ ರಾಜ್ಗೆ ರಾಷ್ಟ್ರೀಯ ಪಕ್ಷವೊಂದರ ನಂಟು ಇದೆ ಎನ್ನಲಾಗಿದೆ. ಈತ ಪಕ್ಷದ ಕಾರ್ಯಕರ್ತ ಎನ್ನುವುದಕ್ಕೆ ಆಧಾರವೂ ಇದೆ. ಈತ ಬಾಯ್ಬಿಟ್ಟಿರುವ ಮತ್ತೊಂದು ಸತ್ಯ ಬಟಾಬಯಾಲಾಗಿದೆ.
ಬೆಳ್ಳಿತೆರೆ ಜೊತೆಗೆ ಕಿರುತೆರೆಯಲ್ಲೂ ಡ್ರಗ್ಸ್ ಪೆಡ್ಲರ್ಗಳ ಹಾವಳಿ ಇದ್ದು, ಸಿಸಿಬಿ ವಶದಲ್ಲಿರುವ ಕಾರ್ತಿಕ್ ಸೀರಿಯಲ್ ನಟಿಯರ ಪುರಾಣವನ್ನು ಬಾಯ್ಬಿಟ್ಟಿದ್ದಾನಂತೆ.
ಸದ್ಯ ಕಾರ್ತಿಕ್ ರಾಜ್ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರಲ್ಲಿ ಬಹುತೇಕ ಧಾರಾವಾಹಿ ನಟಿಯರು ಪಾರ್ಟಿಗಳಲ್ಲಿ ಭಾಗಿಯಾಗಿರುವ ಫೋಟೋಗಳು ಇವೆ. ಕಾರ್ತಿಕ್, 15 ಜನ ಕಿರುತೆರೆ ನಟ-ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವಿಚಾರ ವಿಚಾರಣೆ ವೇಳೆ ಬಯಲಿಗೆ ಬಂದಿದೆ. ಸಿನಿಮಾ ಹಾಗೂ ಸೀರಿಯಲ್ ನಟಿಯರು ಹಾಗೂ ಧಾರಾವಾಹಿ ನಾಯಕರಿಗೆ ಡ್ರಗ್ಸ್ ನೀಡಿದ ಕಾರಣ, ಅವರಿಗೆಲ್ಲಾ ನೋಟಿಸ್ ಜಾರಿ ಮಾಡಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಬಿ ವಶದಲ್ಲಿರುವ ಡ್ರಗ್ ಪೆಡ್ಲರ್ ಕಾರ್ತಿಕ್, ರಾಷ್ಟ್ರೀಯ ಪಕ್ಷದ ಕಾರ್ಯಕರ್ತ. ಪಕ್ಷದ ಅಧಿಕೃತ ಲೆಟರ್ ಹೆಡ್ನಲ್ಲಿ ಕಾರ್ತಿಕ್ ರಾಜ್ಗೆ ಪತ್ರ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ಈತ ಚುನಾವಣೆ ಕೆಲಸ ಮಾಡಿದ್ದ. ಈ ಕೆಲಸಕ್ಕೆ ಪಕ್ಷದ ಯುವ ಮೋರ್ಚಾದಿಂದ ಪತ್ರ ಕೊಡಲಾಗಿತ್ತು.