ETV Bharat / state

ಡ್ರಗ್ಸ್​ ಕೇಸ್ ಸಂಬಂಧ ಇನ್ನಷ್ಟು ಸಾಕ್ಷ್ಯ ಕಲೆಹಾಕಿದ ಸಿಸಿಬಿ: ನಟಿಮಣಿಯರಿಗೆ ಸಂಕಷ್ಟ - actress arrest news

ಸ್ಯಾಂಡಲ್​ವುಡ್ ನಟ-ನಟಿಯರಿಗೆ ಡ್ರಗ್ಸ್​​ ಲಿಂಕ್​ ಆರೋಪ ಕೇಸ್​ ಸಂಬಂಧ ಸಿಸಿಬಿ ಪೊಲೀಸರು ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ. ಇದು ಈಗಾಗಲೇ ಬಂಧಿತರಾಗಿರುವ ನಟಿಯರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

sandalwood actress drug case updates
ಡ್ರಗ್ ಕೇಸ್
author img

By

Published : Oct 2, 2020, 12:23 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣ ಸಂಬಂಧ ಸದ್ಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ನಿರತರಾಗಿರುವ ಸಿಸಿಬಿ ಪೊಲೀಸರು ಸದ್ಯ ಹಲವು ಮಹತ್ತರ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗ್ತಿದೆ.

ವಿದೇಶದಿಂದ ಡ್ರಗ್ಸ್‌ ಅನ್ನು ನೇರವಾಗಿ ನಟಿಯರು ಈಗಾಗಲೇ ಬಂಧಿತನಾದ ಲೂಮ್ ಪೆಪ್ಪರ್ ಹಾಗೂ ಈತನ ಆಪ್ತರಿಂದ ತರಿಸಿದ್ದರ ಬಗ್ಗೆ ಸಿಸಿಬಿ ಪಕ್ಕಾ ಸಾಕ್ಷ್ಯ ಕಲೆ ಹಾಕಿದೆ. ಇದಕ್ಕೆ ಬೇಕಾದ ಬಹುತೇಕ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವ ಸಿಸಿಬಿ ಪೊಲೀಸರು ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಜೊತೆಗೆ ರಾಗಿಣಿ ಮತ್ತು ಸಂಜನಾಗೆ ನಂಟಿದೆ ಎ‌ಂಬುದನ್ನ ಪತ್ತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಸದ್ಯ ಇಬ್ಬರು ನಟಿಮಣಿಯರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜಾಮೀನು ಪಡೆಯಲು ಹರಸಾಹಸ ಪಡ್ತಿದ್ದಾರೆ‌. ಆದರೆ ಇದಕ್ಕೆ ಟಕ್ಕರ್ ಕೊಡಲು ಸಿಸಿಬಿ‌ ಮುಂದಾಗಿ ಬಹಳ ಮಹತ್ತರ ಮಾಹಿತಿಗಳನ್ನ ಕಲೆ ಹಾಕಿದ್ದಾರೆ. ಇಬ್ಬರಿಗು ಡ್ರಗ್ಸ್ ಪೆಡ್ಲರ್ಸ್ ಜೊತೆ ನಂಟಿರುವ ಬಗ್ಗೆ ಸಾಕ್ಷಿ ಸಮೇತ ಡ್ರಗ್ಸ್ ಪೆಡ್ಲರ್ಸ್ ಜೊತೆ ಚಾಟ್ ಮಾಡಿದ್ದಕ್ಕೆ ಮತ್ತು ಮಾತನಾಡಿದ್ದಕ್ಕೆ ಕಾಲ್ ಡೀಟೆಲ್ಸ್ ಕಲೆ ಹಾಕಿದ್ದಾರೆ. ಲೂಪ್ ಪೆಪ್ಪರ್, ಫಿಲಿಪ್ಸ್ ಇಂಟರ್​​ನ್ಯಾಷನಲ್​ ಡ್ರಗ್ಸ್ ಪೆಡ್ಲರ್ಸ್ ಆಗಿದ್ದು, ಇವರಿಂದ ಹೈ- ಫೈ ಡ್ರಗ್ಸ್​ ವಿದೇಶದಿಂದ ಕೈಯಾರೆ ತರಿಸಿ ರಾಗಿಣಿ, ಸಂಜನಾ ಮತ್ತು ಟೀಮ್ ಪಾರ್ಟಿಗಳನ್ನ ಸ್ವತಃ ನಗರದ ಸ್ಟಾರ್ ಹೋಟೆಲ್, ಪಬ್ , ಐಶಾರಾಮಿ ಫಾರ್ಮ್ ಹೌಸ್​ಗಳಲ್ಲಿ ಪಾರ್ಟಿ ಆಯೋಜನೆ ಮಾಡ್ತಿದ್ರು ಎನ್ನಲಾಗ್ತಿದೆ.

ಈಗ ಪಾರ್ಟಿ ಆಯೋಜನೆ ಮಾಡಿದ್ದರ ಬಗ್ಗೆ ಕೂಡ ಸಾಕ್ಷಿ ಸಿಕ್ಕಿದೆ. ನಗರದ ಯಾವ್ಯಾವ ಸ್ಟಾರ್ ಹೋಟೆಲ್​​ಗಳಲ್ಲಿ ಪಾರ್ಟಿ ಮಾಡಿದ್ದರು ಎಂಬುದರ ಲಿಸ್ಟ್ ಮಾಡಿದ್ದು, ಈ ಪಾರ್ಟಿಗಳಿಂದ ನಟಿಯರಿಗೆ ಹೇಗೆ ಲಾಭ? ಹೋಟೆಲ್ ಮಾಲೀಕರಿಗೆ ಹೇಗೆ ಲಾಭ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಸದ್ಯ ಸಿಸಿಬಿ ಪೊಲೀಸರಿಗೆ ಬೇಕಾದ ಬಹುತೇಕ ಸಾಕ್ಷ್ಯಾಧಾರಗಳು ದೊರೆತಿರುವ ಕಾರಣ ನಟಿಮಣಿಯರಿಗೆ ಮತ್ತಷ್ಟು ಕಂಟಕ ಎದುರಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.