ETV Bharat / state

ಕಮಿಷನರ್​ ಕಚೇರಿ ತಲುಪಿದ ಸಂಜನಾ - ವಂದನಾ ಬಾಟಲ್ ಕಿರಿಕ್​

author img

By

Published : Dec 27, 2019, 8:23 PM IST

ಸ್ಯಾಂಡಲ್​ವುಡ್​ ನಟಿ ಸಂಜನಾ ಹಾಗೂ ಬಾಲಿವುಡ್​ ನಿರ್ಮಾಪಕಿ ವಂದನಾ ಅವರಿಬ್ಬರ ನಡುವೆ ನಡೆದ ಜಗಳ ಈಗ ನಗರ ಪೊಲೀಸ್​ ಆಯುಕ್ತರ ಕಚೇರಿ ತಲುಪಿದೆ.

actress-sanjana
ನಟಿ ಸಂಜನಾ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಸಂಜನಾ ಹಾಗೂ ಬಾಲಿವುಡ್​ ನಿರ್ಮಾಪಕಿ ವಂದನಾ ಅವರಿಬ್ಬರ ನಡುವೆ ನಡೆದ ಜಗಳ ನಗರ ಪೊಲೀಸ್​ ಆಯುಕ್ತರ ಕಚೇರಿ ತಲುಪಿದ್ದು, ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುತ್ತೋ, ಅಥವಾ ಎಫ್​ಐಆರ್​ ದಾಖಲಾಗುತ್ತೋ ಕಾದುನೋಡಬೇಕು.

ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ನಟಿ ಸಂಜನಾ

ಪೊಲೀಸ್ ಆಯುಕ್ತರಿಗೆ ದೂರು ನೀಡುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ನಟಿ ಸಂಜನಾ ಅವರು, ಡಿಸೆಂಬರ್ 24 ರಂದು ಕೋಝಿ ಬಾರ್ ಗೆ ನಾನು ಕುಟುಂಬದ ಜೊತೆ ಹೋಗಿದ್ದೆ. ಅಲ್ಲಿ ನಡೆದ ಜಗಳದ ನಂತರ ಮದ್ಯ ರಾತ್ರಿ 2 ಗಂಟೆಗೆ ಕಬ್ಬನ್​ ಪಾರ್ಕ್ ಪೊಲೀಸ್​​ ಸ್ಟೇಷನ್​ನಿಂದ ಪದೇ ಪದೆ ಕರೆಮಾಡಿ ಸ್ಟೇಷನ್​ಗೆ ಬನ್ನಿ ಅಂತ ಹೇಳಿದರು. ಆದರೆ, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಯಾವುದೇ ಮಹಿಳೆಯನ್ನ ಪೊಲೀಸ್​ ಸ್ಟೇಷನ್​ನಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಆದರೂ ಅವರು ನನ್ನನ್ನು ಹೇಗೆ ಕರೆದರು ಹಾಗೂ ತಮ್ಮ ಅಧಿಕಾರವನ್ನ ದೂರುಪಯೋಗ ಮಾಡಿಕೊಳ್ಳುತ್ತಿರುವ ವಿಷಯ ಕುರಿತು ನಾನು ಆಯುಕ್ತರಿಗೆ ಕೆಲವು ವಿಷಯಗಳನ್ನು ಹೇಳಬೇಕಿದೆ. ಹಾಗಾಗಿ ಕಮಿಷನರ್​ ಕಚೇರಿಗೆ ಬಂದು ದೂರು ನೀಡುತ್ತಿದ್ದೇನೆಂದು ತಿಳಿಸಿದರು.

ಘಟನೆಯ ವಿವರ:
ಡಿಸೆಂಬರ್ 24 ರಂದು ಕೋಝಿ ಬಾರ್ ಗೆ ನಾನು ಕುಟುಂಬದ ಜೊತೆ ಹೋಗಿದ್ದೆ. ಈ ವೇಳೆ ನಾನು ಹಾಗೂ ವಂದನಾ ಬೇರೆ ಟೇಬಲ್​​ನಲ್ಲಿ ಕುಳಿತಿದ್ದೆವು. ಆಕೆ ಬಲವಂತವಾಗಿ ನನ್ನ ಹತ್ತಿರ ಮಾತನಾಡಲು ಪ್ರಯತ್ನ ಪಟ್ಟಾಗ ನಾನು ಮಾತನಾಡಲಿಲ್ಲ. ಆಗ ಆಕೆ ನನ್ನ ತಾಯಿ, ತಂಗಿಯನ್ನು ಕೆಟ್ಟದಾಗಿ ಬೈದಳು. ಇದಾದ ನಂತರ ವಾಗ್ವಾದ ನಡೆಯಿತು ಎಂದು ಸಂಜನಾ ತಿಳಿಸಿದ್ದಾರೆ.

ವಂದನಾ ಅವರು ಪ್ರಕರಣ ಸಂಬಂಧ ಈಗಾಗಲೇ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಾಗಿ ನಾಳೆ ನ್ಯಾಯಲಯದ ಮೊರೆ ಹೊಗಿ ಎಫ್ಐ ಆರ್ ದಾಖಲಿಸಲು ಅನುಮತಿ ಕೋರುವ ಸಾಧ್ಯತೆ ಇದೆ.

Intro:ಸ್ಯಾಂಡಲ್ ವುಡ್ ಸ್ಟಾರ್ ನಟಿ ನಿರ್ಮಾಪಕಿ ಜಟಾಪಟಿ
ನಗರ ಆಯುಕ್ತರಿಗೆ ದೂರು ನೀಡಿದ ಸಂಜನಾ

ಸ್ಯಾಂಡಲ್ ವುಡ್ ಸ್ಟಾರ್ ನಟಿ ಹಾಗೂ ಬಾಲಿವುಡ್ ನ ನಿರ್ಮಾಪಕಿ
ನಡುವಿನ ಜಟಾಪಟಿ ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಚೇರಿ ತಲುಪಿದೆ.ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ವೊಂದರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟಿ ಸಂಜಾನ ಹಾಗೂ ಬಾಲಿವುಡ್ ನ ನಿರ್ಮಾಪಕಿ ವಂದನಾ ಜೈನ್ ಗಲಾಟೆ ಮಾಡಿದ್ದರು. ಹೀಗಾಗಿ ಸದ್ಯ ವಂದನಾ ಜೈನ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ‌ದೂರು ನೀಡಿದ್ರು. ಹೀಗಾಗಿ ಸದ್ಯ ನಗರ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಂಜಾನ ದೂರು ನೀಡಿದ್ದಾರೆ.‌

ಇನ್ನು ಬೆಂಗಳೂರು ಕಮೀಷನರ್ ಕಚೇರಿಯಲ್ಲಿ ಸಂಜನಾ ಮಾತಾಡಿ ವಂದನಾ ನನ್ನ ಜೊತೆ ಗಲಾಟೆ ಮಾಡಿದ್ರು.‌ನಿನ್ನ ಜೈಲಿಗೆ ಹಾಕ್ತಿನಿ ಅಂತಾ ಹೇಳಿ ಕೈ ಬೆರಳು ಟ್ವೀಸ್ಟ್ ಮಾಡಿ ‌ನನ್ನ ಉಗುರು ಕಟ್ಟು ಮಾಡಿದ್ದಾಳೆ.. ನನಗೆ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ, ವಂದನಾ ಮೊದಲು ಪರಿಚಯ ಇತ್ತು ನಂತ್ರ ನನ್ನಿಂದ ದೂರ ಆಗಿದ್ದಾಳೆ.

ಡಿಸೆಂಬರ್ 24 ರಂದು ಕೋಝಿ ಬಾರ್ ಗೆ ನಾನು ಫ್ಯಾಮಿಲಿ ಹೋಗಿದ್ವಿ .ಈ ವೇಳೆ ಅವರು ಬೇರೆ ಟೇಬಲ್ ಬಳಿ ನಾನು ಬೇರೆ ಟೇಬಲ್ ಬಳಿ‌ ಕುತಿದ್ವಿ ಆದ್ರೆ ನನಗೆ ಆಕೆ ಜೊತೆ ಮಾತಾನಾಡಲು ಇಷ್ಟ ಇರಲಿಲ್ಲ. ಆದರು ಆಕೆ ಬಲವಂತವಾಗಿ ಮಾತಾನಾಡಲು ಪ್ರಯತ್ನ ಪಟ್ಟಗ ಮಾತಾಡಿಲ್ಲ.ಈ ವೇಳೆ ನನ್ಮ ತಾಯಿ ತಂಗಿಗೆ ಬೈದಿದ್ದಾಳೆ.ನಂತ್ರ ವಾಗ್ವಾದ ನಡೆದಿದೆ. ಈ ವಿಚಾರದ ಕುರಿತು ನಗರ ಆಯುಕ್ತರ ಜೊತೆ ಕ್ಲಾರಿಫೈ ಮಾಡಬೇಕಾಗಿದೆ ಹೀಗಾಗಿ ಸದ್ಯ ಕಮಿಷನರ್ ಆಫಿಸ್ಗೆ ಬಂದು ದೂರು ನೀಡಿದ್ದೆನೆ ಎಂದಿದ್ದಾರೆ.
ಮತ್ತೊಂದೆಡೆ ನಿರ್ಮಾಪಕಿ ವಂದನಾ ಜೈನ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಿದ ಕಾರಣ
ನಾಳೆ ನ್ಯಾಯಲಯದ ಮೊರೆ ಹೊಗಿ ಎಫ್ಐ ಆರ್ ದಾಖಲಿಸಲು ಅನುಮತಿ ಕೋರುವ ಸಾಧ್ಯತೆ ಇದೆ.Body:KN_BNG_09_SANJAhANA_7204498Conclusion:KN_BNG_09_SANJAhANA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.