ETV Bharat / state

ಡ್ರಗ್ಸ್​​ ಜಾಲ: ಪಾರ್ಟಿ ಆಯೋಜಕನಿಂದ ರಾಜಕಾರಣಿ ಪುತ್ರರಿಗೆ ಸಂಕಷ್ಟ - ಪಾರ್ಟಿ ಆಯೋಜಕನಿಂದ ರಾಜಕಾರಣಿ ಪುತ್ರರಿಗೆ ಸಂಕಷ್ಟ

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿರೇನ್ ಖನ್ನಾನ ಮೊಬೈಲ್ ಮಾಹಿತಿಯಿಂದ ಬಹಳಷ್ಟು ಮಂದಿಗೆ ಕಂಟಕ ಶುರುವಾಗಿದೆ.

sandalowood drug case; ccb will give notice for some
ಡ್ರಗ್​ ಜಾಲ: ಪಾರ್ಟಿ ಆಯೋಜಕನಿಂದ ರಾಜಾಕಾರಣಿ ಪುತ್ರರಿಗೆ ಸಂಕಷ್ಟ
author img

By

Published : Sep 23, 2020, 11:12 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿರೇನ್ ಖನ್ನಾನನ್ನು ಮತ್ತೆ ಕಸ್ಟಡಿ ವಿಚಾರಣೆಗೆ ಪಡೆದು ಬಹಳಷ್ಟು ರೋಚಕ ಮಾಹಿತಿಗಳನ್ನು ಸಿಸಿಬಿ ಕಲೆಹಾಕಿದೆ.

ವಿರೇನ್ ಖನ್ನಾ ಮೊಬೈಲ್ ಜಪ್ತಿ ಮಾಡಿ ರಿಟ್ರೈವ್​ ಮಾಡಿದಾಗ ಹಲವು ಮಾಹಿತಿಗಳು ಬಯಲಾಗಿವೆ‌. ಹೀಗಾಗಿ ಈತನ ಮೊಬೈಲ್ ಮಾಹಿತಿಯಿಂದ ಬಹಳಷ್ಟು ಮಂದಿಗೆ ಕಂಟಕ ಶುರುವಾಗಿದೆ.

ಆರೋಪಿ ವಿರೇನ್ ಖನ್ನಾ ಕಾಂಟ್ಯಾಕ್ಟ್ ಲಿಸ್ಟ್​​ನಲ್ಲಿ ಸ್ಯಾಂಡಲ್​ವುಡ್​​ ಸ್ಟಾರ್ಸ್ ಮತ್ತು ರಾಜಕೀಯ ಮುಖಂಡರ ಮಕ್ಕಳ ನಂಬರ್​ಗಳು ಇವೆ ಎನ್ನಲಾಗ್ತಿದೆ. ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಹುಡುಕಿದಾಗ ಶಾಸಕರೊಬ್ಬರ ಪುತ್ರ ಸೇರಿ ಹಲವು ಮಂದಿಯ ನಂಬರ್ ಪತ್ತೆಯಾಗಿವೆ. ಪತ್ತೆಯಾದ ಫೋನ್ ನಂಬರ್​ಗಳ ಜೊತೆಗಿನ ಸಂಪರ್ಕದ ಮಾಹಿತಿ ಕೆದಕೋಕೆ ಸಿಸಿಬಿ ಮುಂದಾಗಿದೆ. ಮೊಬೈಲ್ ಮಾಹಿತಿಯಾಧಾರದ ಮೇರೆಗೆ ಕೆಲ ರಾಜಕೀಯ ವ್ಯಕ್ತಿಗಳ ಪುತ್ರರಿಗೆ ಶೀಘ್ರವೇ ನೋಟಿಸ್ ನೀಡುವ ಸಾಧ್ಯತೆಯಿದೆ.

ವಿರೇನ್ ಖನ್ನಾ ದೆಹಲಿ‌ ಮೂಲದವನಾಗಿದ್ದು, ಬೃಹತ್​​ ಮಟ್ಟದ ಪಾರ್ಟಿ ಆಯೋಜಕನಾಗಿದ್ದಾನೆ. ಪಾರ್ಟಿಗೆ ಡ್ರಗ್ಸ್​​​ ಪೂರೈಕೆ ಆಗುತ್ತಿತ್ತು. ಈ ಪಾರ್ಟಿಗಳಲ್ಲಿ ಪ್ರತಿಷ್ಠಿತ ನಟ-ನಟಿಯರು, ಉದ್ಯಮಿಗಳು, ಮಾಡೆಲ್, ರಾಜಕಾರಣಿಗಳ ಮಕ್ಕಳು ಭಾಗಿಯಾಗ್ತಿದ್ರು. ಸದ್ಯ ಇವರ ಜಾಲವನ್ನ ಪತ್ತೆ ಹಚ್ಚಲು ಸಿಸಿಬಿ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.