ETV Bharat / state

ತೆವಳುತ್ತಾ ಸಾಗ್ತಿರುವ  'ಸಮೃದ್ಧಿ ಯೋಜನೆ' ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು! - about samruddhi project

ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಆರಂಭಗೊಂಡ ಮಹಾತ್ವಾಕಾಂಕ್ಷೆಯ 'ಸಮೃದ್ಧಿ ಯೋಜನೆ' ಆಮೆ ವೇಗದಲ್ಲಿ ಸಾಗುತ್ತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದು ಎರಡು ವರ್ಷ ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

samruddhi project progess delay
ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ
author img

By

Published : Oct 20, 2020, 12:54 PM IST

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಲ್ಲಿ ಉದ್ಯಮಶೀಲತೆ ಹಾಗೂ ಸ್ವ ಉದ್ಯೋಗ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ 'ಸಮೃದ್ಧಿ ಯೋಜನೆ' ನಿರೀಕ್ಷಿತ ಫಲ‌ ನೀಡುವಲ್ಲಿ ವಿಫಲವಾಗಿದೆ.

ಎರಡು ವರ್ಷಗಳ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಿಎಂ‌ ಕುಮಾರಸ್ವಾಮಿ ಚಾಲನೆ ನೀಡಿದ್ದ ಈ ಯೋಜನೆ ಎರಡು ವರ್ಷಗಳ ಬಳಿಕ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಈ ಯೋಜನೆ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಉದ್ಯಮಶೀಲತೆ ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಫಲಾನುಭವಿಗಳಿಗೆ ಸಣ್ಣ ಪಟ್ಟಣ, ನಗರಗಳಲ್ಲಿ ಮಳಿಗೆ ಅಥವಾ ಫ್ರಾಂಚೈಸ್ ಸ್ಥಾಪಿಸಲು 10 ಲಕ್ಷ ರೂ. ಹಣಕಾಸು ನೆರವನ್ನು ಈ ಯೋಜನೆ ಮೂಲಕ ನೀಡುತ್ತದೆ. ಈ ಯೋಜನೆಗಾಗಿ 2018ರಲ್ಲಿ 275 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕನಿಷ್ಠ 25,000 ಫಲಾನುಭವಿಗಳಿಗೆ ಯೋಜನೆಯ ಫಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬಂದು ಎರಡು ವರ್ಷ ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

ಯೋಜನೆಯ ಪ್ರಗತಿ ಹೇಗಿದೆ?:

ಯೋಜನೆ ಕಾರ್ಯರೂಪಕ್ಕೆ ಬಂದ‌ ಬಳಿಕ ಈವರೆಗೆ ಸುಮಾರು 34,182 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ವಿವಿಧ ಷರತ್ತುಗಳನುಸಾರ ಕೇವಲ 2,500 ಫಲಾನುಭವಿಗಳನ್ನು ಯೋಜನೆಗಾಗಿ ಅಂತಿಮಗೊಳಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ, ಈವರೆಗೆ ಕೇವಲ 177 ಫಲಾನುಭವಿಗಳು ಮಾತ್ರ ತಮ್ಮ ಮಳಿಗೆಯನ್ನು ಪ್ರಾರಂಭಿಸಿದ್ದಾರೆ.‌ ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 22 ಮಂದಿ ಮಳಿಗೆ ಪ್ರಾರಂಭಿಸಿದ್ದರೆ, ಬಳ್ಳಾರಿ 17, ಚಿಕ್ಕಬಳ್ಳಾಪುರ 16 ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 30 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಕೇವಲ ಏಕ ಅಂಕಿಯಲ್ಲಿದ್ದರೆ, ಚಾಮರಾಜನಗರ, ಕೊಡಗು, ರಾಮನಗರ ಜಿಲ್ಲೆಯಲ್ಲಿ ಈವರೆಗೆ ಅಧಿಕಾರಿಗಳು ಯೋಜನೆಯ ಫಲಾನುಭವಿಗಳಾಗಿ ಕೇವಲ ಒಬ್ಬರನ್ನು ಮಾತ್ರ ಗುರುತಿಸಿದ್ದಾರೆ.

ಸಮೃದ್ಧಿ ಯೋಜನೆಯಡಿ ಕೇವಲ 150 ಫ್ರಾಂಚೈಸ್ ಮಳಿಗೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅರ್ಜಿ ಹಾಕಿದ ಹಲವರನ್ನು ಸಮರ್ಪಕ ದಾಖಲಾತಿ ಇಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2000 ಮಳಿಗೆ ಪ್ರಾರಂಭಿಸುವ ಗುರಿ:

ಇದೀಗ ಅಧಿಕಾರಿಗಳು ಈ ಯೋಜನೆಗೆ ಇನ್ನಷ್ಟು ಉತ್ತೇಜನ‌ ನೀಡಲು ಮುಂದಾಗಿದ್ದು, 2,000 ಔಟ್​ಲೆಟ್​ ಫ್ರಾಂಚೈಸ್​​ಗಳಿಗೆ ಹಣಕಾಸು ನೆರವು ನೀಡುವ ಗುರಿ ಹೊಂದಿದೆ.

ಈಗಾಗಲೇ ಚಾಯ್ ಪಾಯಿಂಟ್, ಪಂಪ್ ಕಾರ್ಟ್, ಜಿಕೆ ವೇಲ್ ಸೇರಿದಂತೆ 41 ಕಂಪನಿಗಳು ಮುಂದೆ ಬಂದಿದ್ದು, ಈ ಯೋಜನೆಯಡಿ ಫಲಾನುಭವಿಗಳಿಗೆ ತಮ್ಮ ರಿಟೇಲ್ ಅಥವಾ ಫ್ರಾಂಚೈಸ್ ಮಳಿಗೆ ಪ್ರಾರಂಭಿಸಿ ಕೊಡಲಿದೆ.

ಸದ್ಯ ಯೋಜನೆಯಡಿ 154 ಕೋಟಿ ರೂ. ಲಭ್ಯವಿದೆ. ಬಂಡವಾಳ ರೂಪದಲ್ಲಿ ಗರಿಷ್ಠ 10 ಲಕ್ಷ ಮೊತ್ತವನ್ನು ಎಸ್ಕ್ರೋ ಖಾತೆಯಲ್ಲಿ ಜಮೆ‌ ಮಾಡಲಾಗುತ್ತದೆ. ಈ‌ ಯೋಜನೆಯಡಿ ಫಲಾನುಭವಿಗಳಿಗೆ ಮಳಿಗೆ ಸ್ಥಾಪಿಸಲು ಬೇಕಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಹಣವನ್ನು ಕಂಪನಿಗಳಿಗೆ ನೀಡಲಾಗುತ್ತದೆ.

ಸದ್ಯ ಸಮಾಜ ಕಲ್ಯಾಣ ಇಲಾಖೆ 2021 ವೇಳೆಗೆ ವಿವಿಧ ಕಂಪನಿಗಳ 2,000 ಮಳಿಗೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಫ್ರಾಂಚೈಸಿ ಮತ್ತು ಫಲಾನುಭವಿಗಳ ಜೊತೆ ತ್ರಿಪಕ್ಷೀಯ ಒಪ್ಪಂದ ಮಾಡಿದೆ. ಇದಕ್ಕಾಗಿ 2000 ಫಲಾನುಭವಿಗಳನ್ನು ವಯಸ್ಸು, ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ‌ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.