ETV Bharat / state

ಬೆಂಗಳೂರು ಗಲಭೆ ಪ್ರಕರಣ: ಇಂದು ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ

author img

By

Published : Nov 27, 2020, 11:44 AM IST

ಸಂಪತ್​ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಎನ್​ಐಎ ಗಲಭೆ ಸಂಬಂಧ ಜೈಲಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಹಾಗೆ ಗಲಭೆಗೆ ಕುಮ್ಮಕ್ಕು ನೀಡಿರುವ ಸಂಪತ್ ಪಿಎ ಅರುಣ್ ಕುಮಾರ್ ಬಳಿಯಿಂದ ಕೂಡ ಮಾಹಿತಿ ಪಡೆದಿದ್ದು, ಇದೇ ವೇಳೆ ಆರೋಪಿಗಳು ಸಂಪತ್ ರಾಜ್ ಅಣತಿಯಂತೆ ಗಲಭೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

Sampath Raj bail application hearing today
ಇಂದು ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೀಗಾಗಿ ಇಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ರೆಡಿಯಾಗಿದ್ದಾರೆ.

ನಿನ್ನೆ ಸಂಪತ್ ಪರ ವಕೀಲ ಬಾಲನ್ ವಾದ ಮಾಡಿ ಸಂಪತ್​ಗೂ, ಈ ಗಲಭೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದರು. ಆದರೆ ಸದ್ಯ ಎನ್‌ಎಐ ತನಿಖೆ ನಡೆಸುತ್ತಿದ್ದು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ ಕಾರಣ, ಇಂದು ಸಂಪತ್ ಗೆ ಜಾಮೀನು ಕೊಡಬಾರದು ಎಂದು ಆಕ್ಷೇಪಣೆ ಫೈಲ್ ಮಾಡಲಿದ್ದಾರೆ.

ಓದಿ :ವೀರಶೈವ ಲಿಂಗಾಯತ ಮೀಸಲಾತಿ ತೀರ್ಮಾನ ದಿಢೀರ್​ ಕೈಬಿಟ್ಟ ಬಿಎಸ್​ವೈ

ಸದ್ಯ ಸಂಪತ್​ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಎನ್ ಐಎ ಗಲಭೆ ಸಂಬಂಧ ಜೈಲಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಹಾಗೆ ಗಲಭೆಗೆ ಕುಮ್ಮಕ್ಕು ನೀಡಿರುವ ಸಂಪತ್ ಪಿಎ ಅರುಣ್ ಕುಮಾರ್ ಬಳಿಯಿಂದ ಕೂಡ ಮಾಹಿತಿ ಪಡೆದಿದ್ದು, ಇದೇ ವೇಳೆ ಆರೋಪಿಗಳು ಸಂಪತ್ ರಾಜ್ ಅಣತಿಯಂತೆ ಗಲಭೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ನ.16 ರಂದು ಸಂಪತ್ ರಾಜ್ ನ ಬಂಧಿಸಿದ್ದ ಸಿಸಿಬಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಂಪತ್ ಎನ್.ಐ ಎ ವಿಚಾರಣೆ ಎದುರಿಸುವುದು ಅನಿವಾರ್ಯಗಿದೆ.

ಸಿಸಿಬಿ ವಿಚಾರಣೆ ವೇಳೆ ಸಂಪತ್ ಪಾತ್ರದ ಬಗ್ಗೆ ಸ್ಪಷ್ಟವಾಗಿ ಸಾಕ್ಷಿಗಳು ಸಿಕ್ಕಿದರು ಕೂಡ, ಇತ್ತ ಎನ್ಐ ಎ ತನ್ನದೇ ಆದ ಆ್ಯಂಗಲ್​​ಲ್ಲಿ ತನಿಖೆ ಮುಂದುವರೆಸಿದ್ದು, ಇದು ಸಂಪತ್ ದೊಡ್ಡ ಕಂಟಕದಂತಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.