ಬೆಂಗಳೂರು: ಮಹಿಳಾ ಮತದಾರರು ಹೆಚ್ಚಿರುವ ಕಡೆ ಚುನಾವಣಾ ಆಯೋಗ ವಿಶೇಷವಾಗಿ 'ಸಖಿ ಬೂತ್' ವ್ಯವಸ್ಥೆ ಮಾಡಿದೆ.

ಈ ಬೂತ್ಗಳನ್ನು ಪಿಂಕ್ ಬಣ್ಣದಿಂದ ವಿಶೇಷವಾಗಿ ಅಲಂಕರಿಸಿ, ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಯೇ ಕೆಲಸ ಮಾಡಲಿದ್ದಾರೆ. ನಗರದ ಆರ್ ಆರ್ ನಗರದ, ಬಿಎಸ್ಎನ್ಎಲ್ ಕಚೇರಿ ಬಳಿಯ ರಾಜರಾಜೇಶ್ವರಿ ಶಾಲೆ 336 ನೇ ಬೂತ್ ಹಾಗೂ, ನಾಗರಬಾವಿ 3 ನೇ ಹಂತದ ಕೆ.ಎಲ್.ಇ ವಿದ್ಯಾಮಂದಿರದ 283 ನೇ ಮತಗಟ್ಟೆಯನ್ನು ಪಿಂಕ್ ಬೂತ್ ಆಗಿ ಮಾಡಲಾಗಿದೆ.

ಬೆಳಗ್ಗೆಯಿಂದ ಮಹಿಳೆಯರು ಹಾಗೂ ಪುರುಷರು, ಎಲ್ಲ ಮತದಾರರು ಬಂದು ಮತದಾನ ಮಾಡುವಲ್ಲಿ ನಿರತರಾಗಿದ್ದಾರೆ.