ಬೆಂಗಳೂರು: ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರದ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಮಾಡಿರುವ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನ ಕೂಡಲೇ ರದ್ದು ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಆಗ್ರಹಿಸಿದ್ದಾರೆ.
ಕೇವಲ ವೋಟ್ ಬ್ಯಾಂಕ್ಗಾಗಿ ಪ್ರಾಧಿಕಾರ ರಚಿಸದರೆ ಕನ್ನಡಿಗರ ಪಾಡೇನು, ಭಾಷೆಗೊಂದು ಪ್ರಾಧಿಕಾರ ರಚನೆ ಮಾಡೋದು ಸರಿಯಲ್ಲ. ಸರ್ಕಾರಕ್ಕೆ ಅಷ್ಟೊಂದು ಪ್ರೀತಿ ಕಾಳಜಿ ಇದ್ದರೆ ಕನ್ನಡಿಗರನ್ನು ರಕ್ಷಣೆ ಮಾಡಿ. ಮೊದಲು ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಬನ್ಯ ನಿಲ್ಲಿಸಿ ಎಂದು ಒತ್ತಾಯಿಸಿದರು.
ಜೊತೆಗೆ ಕನ್ನಡ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಅಭಿವೃದ್ಧಿಪಡಿಸಿ, ಅದನ್ನು ಬಿಟ್ಟು ಮರಾಠಿಗಳ ಓಲೈಕೆಗೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಮಾಡಿರೋದು ಸರಿಯಲ್ಲ. ಕೂಡಲೇ ಪ್ರಾಧಿಕಾರ ರದ್ದು ಮಾಡಬೇಕೆಂದು ಕನ್ನಡ ಪರಿಷತ್ ಅಧ್ಯಕ್ಷ ಮಾಯಣ್ಣ ಆಗ್ರಹಿಸಿದ್ದಾರೆ.