ಬೆಂಗಳೂರು: ಕನ್ನಡದ ಮೂರು ಪುಸ್ತಕಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಬಸು ಬೇವಿನಗಿಡದ ಅವರ 'ಓಡಿ ಹೋದ ಹುಡುಗ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ 2021 ಘೋಷಣೆಯಾಗಿದೆ.
ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ 2021 ಪ್ರಶಸ್ತಿ ಪ್ರಕಟವಾಗಿದೆ. 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿಯಾದ ಹೆಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ಮಹಾಕಾವ್ಯವಾದ 'ತೊಗಲ ಚೀಲದ ಕರ್ಣ' ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಪುರಸ್ಕಾರವನ್ನು 2021 ಪ್ರಕಟಿಸಲಾಗಿದೆ.