ಬೆಂಗಳೂರು: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿನ ಹೆಚ್ಚಳದಿಂದ ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದು, ಕಳೆದೆರಡು ವಾರಗಳಲ್ಲಿ ಕರ್ನಾಟಕಕ್ಕೆ ರೈಲು ಮೂಲಕ ಒಟ್ಟು 1420 ಟನ್ ಆಮ್ಲಜನಕ ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುವೈತ್ ಮತ್ತು ಯುಎಇ'ಯಿಂದ 270 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಹಾಗೂ 1200 ಆಮ್ಲಜನಕ ಸಿಲಿಂಡರ್'ಗಳನ್ನು ಹೊತ್ತ ನೌಕಾಪಡೆಯ 'ಐಎನ್ಎಸ್-ಶಾರ್ದುಲ್' ಹಡಗು ಇಂದು ನವ-ಮಂಗಳೂರು ಬಂದರು ತಲುಪಿದೆ ಎಂದು ಸದಾನಂದಗೌಡರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಒಡಿಶಾ ಮತ್ತು ಗುಜರಾತಿನಿಂದ ಕಳುಹಿಸಿಕೊಟ್ಟಿರುವ 11 ಮತ್ತು 12ನೇ ಆಕ್ಸಿಜನ್ ಎಕ್ಸ್'ಪ್ರೆಸ್'ಗಳು 234 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕದೊಂದಿಗೆ ಇಂದು ಬೆಂಗಳೂರು ತಲುಪಿವೆ. ಕಳೆದೆರಡು ವಾರಗಳಲ್ಲಿ ಕರ್ನಾಟಕಕ್ಕೆ ರೈಲು ಮೂಲಕ ಒಟ್ಟು 1420 ಟನ್ ಆಮ್ಲಜನಕ ಪೂರೈಸಲಾಗಿದೆ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಓದಿ: 7 ತಿಂಗಳ ಗರ್ಭಿಣಿಯಾದ್ರೂ ಫೀಲ್ಡಿಗಿಳಿಯುವ ಹಿರೇಕೆರೂರು ಪಿಎಸ್ಐ.. ಸೋಂಕಿಗೆ ಹೆದರದೇ ಕರ್ತವ್ಯ ನಿರ್ವಹಣೆ!