ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಪೈರು ರಕ್ಷಣೆಗಾಗಿ 2 ಟಿಎಂಸಿ ನೀರು ಹರಿಸುವಂತೆ ಜೂನ್ 20ರಂದು ಬರೆದಿದ್ದ ಪತ್ರವನ್ನು, ಇಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪರಿಗಣಿಸುವಂತೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತೊಂದು ಪತ್ರ ಬರೆದಿದ್ದಾರೆ.
-
ಬೆಳೆದಿರುವ ಫಸಲನ್ನು ಉಳಿಸಲಿಕ್ಕಾಗಿ ಕೆ.ಅರ.ಎಸ ನಿಂದ 2 TMC ನೀರನ್ನು ಮಂಡ್ಯ ಜಿಲ್ಲೆಗೆ ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು . ನಾಳೆ ಸೇರುವ ಮಂಡಳಿಯ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕ್ಕೊಳ್ಳುವುದಾಗಿ ತಿಳಿಸಿದ್ದಾರೆ . @sumalathaA pic.twitter.com/v4H2rCYVlM
— Sadananda Gowda (@DVSBJP) June 24, 2019 " class="align-text-top noRightClick twitterSection" data="
">ಬೆಳೆದಿರುವ ಫಸಲನ್ನು ಉಳಿಸಲಿಕ್ಕಾಗಿ ಕೆ.ಅರ.ಎಸ ನಿಂದ 2 TMC ನೀರನ್ನು ಮಂಡ್ಯ ಜಿಲ್ಲೆಗೆ ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು . ನಾಳೆ ಸೇರುವ ಮಂಡಳಿಯ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕ್ಕೊಳ್ಳುವುದಾಗಿ ತಿಳಿಸಿದ್ದಾರೆ . @sumalathaA pic.twitter.com/v4H2rCYVlM
— Sadananda Gowda (@DVSBJP) June 24, 2019ಬೆಳೆದಿರುವ ಫಸಲನ್ನು ಉಳಿಸಲಿಕ್ಕಾಗಿ ಕೆ.ಅರ.ಎಸ ನಿಂದ 2 TMC ನೀರನ್ನು ಮಂಡ್ಯ ಜಿಲ್ಲೆಗೆ ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು . ನಾಳೆ ಸೇರುವ ಮಂಡಳಿಯ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕ್ಕೊಳ್ಳುವುದಾಗಿ ತಿಳಿಸಿದ್ದಾರೆ . @sumalathaA pic.twitter.com/v4H2rCYVlM
— Sadananda Gowda (@DVSBJP) June 24, 2019
ಇಂದು ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಾಧಿಕಾರದ ತಾತ್ಕಾಲಿಕ ಸದಸ್ಯರಾಗಿದ್ದು, ನಾಳಿನ ಸಭೆಯಲ್ಲಿ ರಾಜ್ಯದ ನೀರಿನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ನೀರು ಹರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪತ್ರ ಬರೆದಿದ್ದಾರೆ.
ಬೆಳೆದಿರುವ ಫಸಲನ್ನು ಉಳಿಸಲಿಕ್ಕಾಗಿ ಈ ಹಿಂದೆ ಕೆ.ಆರ್.ಎಸ್ನಿಂದ 2 ಟಿಎಂಸಿ ನೀರನ್ನು ಮಂಡ್ಯ ಜಿಲ್ಲೆಗೆ ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಇದೀಗ ಮತ್ತೆ ಪತ್ರ ಬರೆದಿರುವ ಸದಾನಂದ ಗೌಡ ನೀರು ಬಿಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.