ಬೆಂಗಳೂರು: ನನಗೆ ಯಾರೋ ಚೆಂಡು ಹೂವು ತೋರಿಸಿ ಇದೇ ಗಾಂಜಾ ಅಂದಿದ್ರು ಎಂಬ ಸಚಿವ ಸಿ ಟಿ ರವಿ ಹೇಳಿಕೆಗೆ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಸಚಿನ್ ಮೀಗಾ ತಿರುಗೇಟು ನೀಡಿದ್ದಾರೆ.
ಸಚಿವರೇ, ನಿಮ್ಮ ಚೆಂಡು ಹೂವಿನ ಕಥೆ ಕೇಳಲು ರಾಜ್ಯದ ಜನರು ಮೂರ್ಖರಲ್ಲ ಎಂದು ಸಚಿನ್ ಮೀಗಾ ಸಿಟಿ ರವಿಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಪ್ರವಾಸೋದ್ಯಮ ವಿಸ್ತರಿಸಲು ಕ್ಯಾಸಿನೋ ತೆರೆಯಲು ಹೊರಟಿದ್ದವರು ನೀವು. ಅಲ್ಲಿ ಏನ್ ನಡೆಯುತ್ತದೆ ಅನ್ನೋದು ಗೊತ್ತಿಲ್ವಾ ನಿಮಗೆ? ಮೊದಲು ಜಿಲ್ಲಾ ಉಸ್ತುವಾರಿ ಸಚಿವರಾಗಿ ಭದ್ರಾ ಹುಲಿ ಯೋಜನೆಯಲ್ಲಿ ಸಿಲುಕಿರುವ ರೈತರನ್ನು ರಕ್ಷಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಈ ಮೂಲಕ ಸಚಿವ ಸಿಟಿ ರವಿ ಕಾಲೆಳೆಯುವ ಯತ್ನ ಮಾಡಿರುವ ಕಾಂಗ್ರೆಸ್ ಮುಖಂಡ ಸಚಿನ್ ಮೀಗಾ, ಇನ್ನೊಂದೆಡೆ ವಾಸ್ತವದ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ.