ಬೆಂಗಳೂರು: ಸಾವಿನ ಸಂಖ್ಯೆ ಮುಚ್ಚಿಟ್ಟು ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯಾದ್ಯಂತ 5,538 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಲ್ಲದೇ ಮತ್ತಿನ್ನೇನು? ಎಂದು ಹೇಳಿದ್ದಾರೆ.
-
ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯದ್ಯಂತ 5,538 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಲ್ಲದೇ ಮತ್ತಿನ್ನೇನು..? 1/6
— S R Patil (@srpatilbagalkot) May 16, 2021 " class="align-text-top noRightClick twitterSection" data="
">ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯದ್ಯಂತ 5,538 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಲ್ಲದೇ ಮತ್ತಿನ್ನೇನು..? 1/6
— S R Patil (@srpatilbagalkot) May 16, 2021ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯದ್ಯಂತ 5,538 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಲ್ಲದೇ ಮತ್ತಿನ್ನೇನು..? 1/6
— S R Patil (@srpatilbagalkot) May 16, 2021
ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು, ಸಚಿವರುಗಳು ಹೇಳುತ್ತಿದ್ದಾರೆ. ಹಾಗಾದರೆ 15 ದಿನದಲ್ಲಿ 5,538 ಜನ ಸತ್ತಿದ್ದು ಹೇಗೆ?. ಆಕ್ಸಿಜನ್ನ ತೀವ್ರ ಅಭಾವದಿಂದಲೇ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಈ ಸರ್ಕಾರ ಕೆಲಸ ಮಾಡುವ ಬದಲು ಇಮೇಜ್ ಬಿಲ್ಡಿಂಗ್ ಮಾಡಲು ಯತ್ನಿಸುತ್ತಿದೆ. ಇದು ಆರೋಗ್ಯ ಇಲಾಖೆ ಕೊಟ್ಟಿರುವ ಲೆಕ್ಕ. ಇನ್ನು ಸರ್ಕಾರ ಮುಚ್ಚಿಟ್ಟಿರೋ ಸಾವುಗಳು ಮತ್ತು ಬೆಡ್ ಇಲ್ಲದೇ ರಸ್ತೆಗಳಲ್ಲೇ ಪ್ರಾಣ ಬಿಟ್ಟವರು, ಮನೆಗಳಲ್ಲೇ ಜೀವ ಬಿಟ್ಟವರ ಸಂಖ್ಯೆ ಇನ್ನೂ ದೊಡ್ದದಿದೆ. ಆದರೂ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ದೂರಿದ್ದಾರೆ.
-
ಕೊರೊನಾ ನಿರ್ವಹಣೆಯ ವಿಚಾರದಲ್ಲಿ @BSYBJP ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ವೈಫಲ್ಯ ಮುಚ್ಚಿಕೊಳ್ಳಲು ಟೆಸ್ಟ್ ಗಳನ್ನು ಕಡಿಮೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲಾಗುತ್ತಿದೆ. 5/6
— S R Patil (@srpatilbagalkot) May 16, 2021 " class="align-text-top noRightClick twitterSection" data="
">ಕೊರೊನಾ ನಿರ್ವಹಣೆಯ ವಿಚಾರದಲ್ಲಿ @BSYBJP ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ವೈಫಲ್ಯ ಮುಚ್ಚಿಕೊಳ್ಳಲು ಟೆಸ್ಟ್ ಗಳನ್ನು ಕಡಿಮೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲಾಗುತ್ತಿದೆ. 5/6
— S R Patil (@srpatilbagalkot) May 16, 2021ಕೊರೊನಾ ನಿರ್ವಹಣೆಯ ವಿಚಾರದಲ್ಲಿ @BSYBJP ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ವೈಫಲ್ಯ ಮುಚ್ಚಿಕೊಳ್ಳಲು ಟೆಸ್ಟ್ ಗಳನ್ನು ಕಡಿಮೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲಾಗುತ್ತಿದೆ. 5/6
— S R Patil (@srpatilbagalkot) May 16, 2021
ತಪಾಸಣೆ ಕಡಿಮೆ:
ರಾಜ್ಯ ಸರ್ಕಾರ ಈ ಮೊದಲು ದಿನಕ್ಕೆ ಸರಾಸರಿ 1.80 ಲಕ್ಷ ಟೆಸ್ಟ್ಗಳನ್ನು ಪ್ರತಿದಿನ ಮಾಡುತ್ತಿತ್ತು. ಆದ್ರೆ ಈಗ ಈ ಸಂಖ್ಯೆ 1.20 ಲಕ್ಷಕ್ಕೆ ಬಂದು ನಿಂತಿದೆ. 60 ಸಾವಿರದಷ್ಟು ಟೆಸ್ಟ್ಗಳನ್ನು ಕಡಿಮೆ ಮಾಡಿರುವುದಕ್ಕೆ ಕಾರಣ ಏನು? ಕಡಿಮೆ ಪ್ರಕರಣಗಳನ್ನು ತೋರಿಸಲು ಈ ಸರ್ಕಾರ ಟೆಸ್ಟ್ ಕಡಿಮೆ ಮಾಡುವ ಅಡ್ಡ ದಾರಿಗಿಳಿದಿದೆ. ಕೊರೊನಾ ನಿರ್ವಹಣೆಯ ವಿಚಾರದಲ್ಲಿ @BSYBJP ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ವೈಫಲ್ಯ ಮುಚ್ಚಿಕೊಳ್ಳಲು ಟೆಸ್ಟ್ಗಳನ್ನು ಕಡಿಮೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಕೋವಿಡ್ ಮರಣ ನಿಖರವಾಗಿ ದಾಖಲಿಸಿ, ಪರೀಕ್ಷಾ ಪ್ರಮಾಣ ಹೆಚ್ಚಿಸಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ
ಸೋಂಕು ಪತ್ತೆಗೆ ಟೆಸ್ಟ್ಗಳ ಪ್ರಮಾಣವನ್ನು ಹೆಚ್ಚಿಸದಿದ್ದರೆ ಕೊರೊನಾದಿಂದ ಮನೆಗಳಲ್ಲೇ ಹೆಚ್ಚು ಜನ ಸಾಯುವಂತಾಗುತ್ತದೆ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ಕೇಸ್ ಹೆಚ್ಚಿದರೂ ಚಿಂತೆಯಿಲ್ಲ, ಟೆಸ್ಟ್ ಮಾಡಿ ಪಾಸಿಟಿವ್ ಬಂದವರಿಗೆ ಔಷಧ ಕೊಡುವ ಕೆಲಸ ಮಾಡಿ. ಕೇಸ್ಗಳನ್ನು ಮುಚ್ಚಿಟ್ಟರೆ ಅದರ ಪರಿಣಾಮ ಭೀಕರವಾಗುತ್ತದೆ ಎಂದು ಎಚ್ಚರಿಸಿದ್ದಾರೆ.