ETV Bharat / state

ಎಸ್​​​ಡಿಪಿಐ ಸಂಘಟನೆಗೆ ಬೀಳುತ್ತಾ ಬೀಗ..?: ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವೇನು..? - SDPI organization is being banned..?

ಬೆಂಗಳೂರು ಗಲಭೆ ಹಿನ್ನೆಲೆ ಮತ್ತೆ ಎಸ್​​​ಡಿಪಿಐ ಸಂಘಟನೆ ನಿಷೇಧದ ಬೇಡಿಕೆ ಮುನ್ನಲೆಗೆ ಬಂದಿದೆ. ಸಂಘಟನೆ ನಿಷೇಧಿಸುವ ಕೂಗು ರಾಜ್ಯದಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ, ಅದರ ಕಾರ್ಯರೂಪ ಮಾತ್ರ ಸಾಧ್ಯವಾಗಿಲ್ಲ. ಈ ನಿಷೇಧದ ಹಿಂದೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರವೂ ಬಲವಾಗಿ ಕೇಳಿ ಬರುತ್ತಿದೆ. ಅದರ ಒಂದು ಚಿತ್ರಣ ಇಲ್ಲಿದೆ.

ಎಸ್​​​ಡಿಪಿಐ ಸಂಘಟನೆಗೆ ಬೀಳುತ್ತಾ ಬೀಗ..?
SDPI organization
author img

By

Published : Aug 16, 2020, 4:42 PM IST

ಬೆಂಗಳೂರು: ಎಸ್​​​ಡಿಪಿಐ ಸದ್ಯಕ್ಕೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಚರ್ಚೆಗೆ ಕಾರಣವಾಗಿರುವ ಸಂಘಟನೆ. ಬೆಂಗಳೂರು ಗಲಭೆಯ ಬಳಿಕ ಇದೀಗ ಎಸ್​​​ಡಿಪಿಐ ಸಂಘಟನೆ ನಿಷೇಧದ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಒಂದೆಡೆ ಬಿಜೆಪಿ ಎಸ್​​ಡಿಪಿಐ ಸಂಘಟನೆ ಡಿ.ಜೆ.ಹಳ್ಳಿ ಗಲಭೆಗೆ ಮೂಲ ಕಾರಣವಾಗಿದ್ದು, ಈ ಬಾರಿ ನಿಷೇಧ ಖಚಿತ ಎಂದು ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷ, ರಾಜಕೀಯ ಉದ್ದೇಶಕ್ಕಾಗಿ ಎಸ್​​ಡಿಪಿಐ ಸಂಘಟನೆಗೆ ಬಿಜೆಪಿ ನಿಷೇಧ ಹೇರುವುದಿಲ್ಲ ಎಂದು ಆರೋಪಿಸುತ್ತಿದೆ. ದಿನೇ ದಿನೆ ರಾಜ್ಯದ ಚುನಾವಣಾ ಕಣದಲ್ಲಿ ಬಲವರ್ಧಿಸುತ್ತಿರುವ ಎಸ್​​ಡಿಪಿಐ ಸಂಘಟನೆ ಪರೋಕ್ಷವಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣಾ ಲಾಭ ನಷ್ಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್​​ಗೆ ಮಗ್ಗುಲ ಮುಳ್ಳು ಹೇಗೆ..?

ಎಸ್​​​ಡಿಪಿಐ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳೇ ಸರಿ. ಸುಮಾರು 13% ಮುಸ್ಲಿಂ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ, ಕಾಂಗ್ರೆಸ್​​​ಗೆ ಎಸ್​​ಡಿಪಿಐ ಸಂಘಟನೆ ಚುನಾವಣಾ ರಣಕಣದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಮುಸ್ಲಿಂ ಮತಗಳನ್ನೇ ಗುರಿಯಾಗಿಸಿರುವ ಎಸ್​​ಡಿಪಿಐ, ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್​​ಗೇ ಕತ್ತರಿ ಹಾಕುತ್ತಿದೆ. ಎಸ್​​ಡಿಪಿಐ 2009ರಿಂದ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಕಣದಲ್ಲಿ ತನ್ನ ಬಲವರ್ಧನೆ ಮಾಡುತ್ತಿದ್ದು, ಕೈ ನಾಯಕರ ನಿದ್ದೆ ಗೆಡಿಸಿರುವುದು ಸಾಬೀತಾಗಿದೆ. ರಾಜ್ಯದಲ್ಲಿ 30% ಕ್ಕೂ ಅಧಿಕ ಮುಸ್ಲಿಂ ಮತಗಳಿರುವ ಒಟ್ಟು 19 ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್​​​ಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಎಸ್​​​ಡಿಪಿಐ ಮತ ಹಂಚಿಕೆ ಹೇಗಿದೆ..?

2013 ವಿಧಾನಸಭೆ ಚುನಾವಣೆಯಲ್ಲಿ ಎಸ್​​ಡಿಪಿಐ ಒಟ್ಟು 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪ್ರಮುಖವಾಗಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಯಾವ ಅಭ್ಯರ್ಥಿಗಳು ಗೆಲವು ಸಾಧಿಸದಿದ್ದರೂ ಮುಸ್ಲಿಮರ ಮತ ಒಡೆಯುವಲ್ಲಿ ಸಫಲವಾಗಿದೆ. 2013ರ ಚುನಾವಣೆಯಲ್ಲಿ ಒಟ್ಟು ಮತ ಚಲಾವಣೆಯಲ್ಲಿ ಎಸ್​​ಡಿಪಿಐ ಸುಮಾರು 3.27% ಮತ ಗಳಿಸಲು ಯಶ ಕಂಡಿದೆ. ಆ ವೇಳೆ ಕಾಂಗ್ರೆಸ್ 36.76%, ಬಿಜೆಪಿ 20.07%, ಜೆಡಿಎಸ್ 20.45% ಮತಗಳಿಸಿತ್ತು.

ಅದೇ 2018ರ ಚುನಾವಣೆ ವೇಳೆ ತನ್ನ ಬಲವನ್ನು ಇನ್ನಷ್ಟು ವರ್ಧಿಸಿದೆ. ಒಟ್ಟು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಸ್​​ಡಿಪಿಐ, ಕೊನೆಗೆ ಕೇವಲ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಸಿತು. ಈ ಚುನಾವಣೆಯಲ್ಲೂ ಸೋಲು ಕಂಡ ಎಸ್​​ಡಿಪಿಐ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿತ್ತು. ಸುಮಾರು 10.50% ಮತವನ್ನು ಎಸ್​​ಡಿಪಿಐ ತನ್ನತ್ತ ಸೆಳೆದಿತ್ತು. ಈ ವೇಳೆ ಬಿಜೆಪಿ 36.43%, ಕಾಂಗ್ರೆಸ್ 38.61% ಮತ್ತು ಜೆಡಿಎಸ್ 20.61% ಮತಗಳಿಸಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಎಸ್​​ಡಿಪಿಐ ಸ್ಪರ್ಧಿಸಿದ್ದ ಏಕೈಕ ಸ್ಥಾನವಾದ ದಕ್ಷಿಣ ಕನ್ನಡದಲ್ಲಿ ತನ್ನ ಮತ ಪ್ರಮಾಣವನ್ನು ಹೆಚ್ಚಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ದ.ಕನ್ನಡ ಕ್ಷೇತ್ರದಲ್ಲಿ 2.26% ಮತಗಳಿಸಿದ್ದ ಎಸ್​​ಡಿಪಿಐ, 2019ರ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು 3.48%ಗೆ ಹೆಚ್ಚಿಸಿಕೊಂಡಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್​​ಡಿಪಿಐ ಉತ್ತಮ ಪ್ರದರ್ಶನ ತೋರುತ್ತಿದೆ.

ಇನ್ನು ಬೆಂಗಳೂರಲ್ಲಿ ಎಸ್​​ಡಿಪಿಐ ತನ್ನ ಬಲವರ್ಧಿಸುತ್ತಿದ್ದು, ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರ ಕ್ಷೇತ್ರಗಳಲ್ಲಿ ತನ್ನ ಬಲವರ್ಧನೆ ಮಾಡುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ.

ಲಾಭ ನಷ್ಟದ ಲೆಕ್ಕಾಚಾರ ಏನು..?

ಎಸ್​​ಡಿಪಿಐ ಪ್ರಮುಖವಾಗಿ ಕಾಂಗ್ರೆಸ್​​ಗೆ ಮಗ್ಗುಲ ಮುಳ್ಳಾಗಿದ್ದರೆ, ಬಿಜೆಪಿಗೆ ರಾಜಕೀಯವಾಗಿ ಲಾಭವನ್ನೇ ತರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಕಾಂಗ್ರೆಸ್ ಮತ ಬ್ಯಾಂಕ್​​ನ್ನು ಗಣನೀಯವಾಗಿ ಒಡೆಯುತ್ತಿರುವ ಎಸ್​​ಡಿಪಿಐ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್​​​​ಗೆ ಎಸ್​​ಡಿಪಿಐ ನಿಷೇಧಿಸಿದರೆ ರಾಜಕೀಯ ಲಾಭವಾಗಲಿ ಬಿಜೆಪಿಗೆ ರಾಜಕೀಯವಾಗಿ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇದೇ ಹಿನ್ನೆಲೆ ಎಸ್​​ಡಿಪಿಐ ನಿಷೇಧಕ್ಕೆ ಬಿಜೆಪಿ ಮೀನಾಮೇಷ ನೋಡುತ್ತಿದ್ದು, ಕಾಂಗ್ರೆಸ್ ನಾಯಕರು ಎಸ್​​ಡಿಪಿಐ ಸಂಘಟನೆಯ ನಿಷೇಧಕ್ಕೆ ಪರೋಕ್ಷ ಒತ್ತಡ ಹೇರುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.