ಬೆಂಗಳೂರು: ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ ರಾಮದಾಸ್ ಅವರು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮಮಂದಿರಕ್ಕೆ ದೇಣಿಗೆ ಕೊಡದ ಮನೆಗಳಿಗೆ ಮಾರ್ಕ್ ಮಾಡ್ತಾರೆಂಬ ಎಚ್ಡಿಕೆ ಆರೋಪ ವಿಚಾರವಾಗಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ. ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ. ಇದು ಜನತೆಗೆ ಗೊತ್ತಿರುವ ವಿಷಯ. ಮಹಾತ್ಮ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ RSS ನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. RSS ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಬಿಡಿ ಎಂದು ಮನವಿ ಮಾಡಿದ್ದಾರೆ.
-
ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.
— S A Ramadass (@ramadassmysuru) February 17, 2021 " class="align-text-top noRightClick twitterSection" data="
1/3 pic.twitter.com/m4HtoLO3yC
">ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.
— S A Ramadass (@ramadassmysuru) February 17, 2021
1/3 pic.twitter.com/m4HtoLO3yCಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ.
— S A Ramadass (@ramadassmysuru) February 17, 2021
1/3 pic.twitter.com/m4HtoLO3yC
ಇದನ್ನೂ ಓದಿ.. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು: ಹೆಚ್ಡಿಕೆ ಕಿಡಿ
ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರೈಸ್ತರೂ ಸಹ ದೇಣಿಗೆಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ. ಇದನ್ನೊಂದು ಬಾರಿ ತಿಳಿಯುವ ಪ್ರಯತ್ನ ಮಾಡಿ ಎಂದು ರಾಮದಾಸ್ ಹೇಳಿದ್ದಾರೆ.