ETV Bharat / state

ಅನಾಥ ಮಕ್ಕಳೊಂದಿಗೆ ಸ್ನೇಹಿತರ ದಿನ ಆಚರಿಸಿದ ಆರ್​ವೈಎಂಇಸಿ ಕಾಲೇಜು ವಿದ್ಯಾರ್ಥಿಗಳು - ಬಳ್ಳಾರಿ ಇಂಜಿನಿಯರಿಂಗ್​ ಕಾಲೇಜ್​

ನಗರದ ಅಲ್ಲೀಪುರ ಬಳಿಯಿರುವ ರಾಮೇಶ್ವರಿ ನಗರದ ದಯಾಶಂಕರ ಗುರುಕುಲ ಆಶ್ರಮದಲ್ಲಿಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಲೀಡ್​ನ ವಿದ್ಯಾರ್ಥಿಗಳು ವಿಶ್ವ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿಆಚರಿಸಿದರು.

ಅನಾಥ ಮಕ್ಕಳೊಂದಿಗೆ ಸ್ನೇಹಿತರ ದಿನ ಆಚರಿಸಿದ ಆರ್​ವೈಎಂಇಸಿ ಕಾಲೇಜು ವಿದ್ಯಾರ್ಥಿಗಳು
author img

By

Published : Aug 4, 2019, 11:04 PM IST

ಬಳ್ಳಾರಿ: ನಗರದ ಅಲ್ಲೀಪುರ ಬಳಿಯಿರುವ ರಾಮೇಶ್ವರಿ ನಗರದ ದಯಾಶಂಕರ ಗುರುಕುಲ ಆಶ್ರಮದಲ್ಲಿಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಲೀಡ್​ ವಿದ್ಯಾರ್ಥಿಗಳು ವಿಶ್ವ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿಆಚರಿಸಿದರು.

ಅನಾಥ ಮಕ್ಕಳೊಂದಿಗೆ ಸ್ನೇಹಿತರ ದಿನ ಆಚರಿಸಿದ ಆರ್​ವೈಎಂಇಸಿ ಕಾಲೇಜು ವಿದ್ಯಾರ್ಥಿಗಳು

ಆರ್​ವೈಎಂಇಸಿ ಕಾಲೇಜಿನ ಯುವಕ, ಯುವತಿಯರು ದಯಾಶಂಕರ ಗುರುಕುಲ ಆಶ್ರಮದ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮಿಸಿದರು. ಈ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷವೂ ಕೂಡ ಈ ಆಶ್ರಮಕ್ಕೆ ಬಂದು ಸ್ನೇಹಿತರ ದಿನ ಆಚರಿಸುತ್ತಾರೆ. ಆಶ್ರಮದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ,ಆಶ್ರಮದ ಮಕ್ಕಳ ಪ್ರತಿಭೆಯನ್ನು ಹೊರತರುತ್ತಾರೆ.

ಈ ವರ್ಷವೂ ಕೂಡ ಮಕ್ಕಳಿಗೆ ಚಿತ್ರಕಲೆ, ಆಶುಭಾಷಣ, ಏಕಪಾತ್ರ ಅಭಿನಯ, ಚಲನಚಿತ್ರ ಹಾಡುಗಳಿಗೆ ಸಾಮೂಹಿಕವಾಗಿ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮ ಆಯೋಜಿಸಿದ್ದರು.

Intro:ಗಣಿನಾಡಿನಲ್ಲಿ ಸಂಭ್ರಮದ ಸ್ನೇಹಿತರ ದಿನಾಚರಣೆ
ದಯಾಶಂಕರ ಗುರುಕುಲ ಆಶ್ರಮದ ಮಕ್ಕಳೊಂದಿಗೆ
ಆರ್ ವೈಎಂಇಸಿ ಲೀಡ್ ನ ಯುವಕ- ಯುವತಿಯರ ಸಂಭ್ರಮ!
ಬಳ್ಳಾರಿ: ನಗರದ ಅಲ್ಲೀಪುರ ಬಳಿಯಿರುವ ರಾಮೇಶ್ವರಿ ನಗರದ ದಯಾಶಂಕರ ಗುರುಕುಲ ಆಶ್ರಮದಲ್ಲಿಂದು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಲೀಡ್ ನ ಯುವಕ, ಯುವತಿಯರು ವಿಶ್ವ ಸ್ವೇಹಿತರ ದಿನಾಚರಣೆಯನ್ನು ವಿಶಿಷ್ಠ ರೀತಿಯಾಗಿ ಆಚರಿಸಲಾಯಿತು.
ಆರ್ ವೈಎಂಇಸಿ ಕಾಲೇಜಿನ ಯುವಕ, ಯುವತಿಯರು ಈ ದಯಾಶಂಕರ ಗುರುಕುಲ ಆಶ್ರಮದ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮುಖೇನ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮಿಸಿರುವುದು ವಿಶೇಷವೇನಿಸಿತು.
ಸ್ನೇಹಕ್ಕೆ ವಯಸ್ಸಿನ ಹಂಗಿಲ್ಲ. ಅದು ಜಾತಿ, ಮತ ಹಾಗೂ ಪಂಥದ ಎಲ್ಲೆಯನ್ನೇ ಮೀರಿ ಉದ್ಭವಿಸುತ್ತದೆ.
ಬಾಲ್ಯದಲ್ಲಿ ಸ್ನೇಹಿತರಾದ ಎಷ್ಟೋ ಮಂದಿ ದಾಯಾದಿ
ಆಗುವ ಉದಾಹರಣೆಗಳು ನಮ್ಮ ಕಣ್ಣೆದುರೇ ಇರುವಾಗಲೇ
ಈ ಸ್ನೇಹಕ್ಕೆ ತನ್ನದೇ ಆದ ವಿಶಿಷ್ಠ ರೀತಿಯ ಸ್ಥಾನಮಾನ ಇದ್ದೇ ಇರುತ್ತದೆ.
ಅಂಥಹ ಸ್ನೇಹಕ್ಕೆ ಬೆಲೆಯೇ ಕಟ್ಟಲಾಗದು. ಜೀವನದಲ್ಲಿ ಯಾವುದಾದ್ರೂ ಸಂಕಷ್ಟ ಎದುರಾದಾಗ ಮೊದಲು
ಸ್ನೇಹಿತರೇ ನೆರವಿಗೆ ಬರುತ್ತಾರೆ ಹೊರತು ಸಂಬಂಧಿಕರಲ್ಲ
ಎಂಬ ಕಟುಸತ್ಯ ಜಗಜ್ಜಾಹೀರಾಗಿರುವ ಈ ಕಾಲದಲ್ಲಿ ಸ್ವಚ್ಚ, ಸುಂದರಮಯ ಸ್ನೇಹಕ್ಕೆ ಉನ್ನತ ಸ್ಥಾನಮಾನ ದೊರಕಲಿದೆ.
ಹೌದು, ಸ್ನೇಹ ಅಂದರೆ ಹಂಗೆಯಾ. ಯಾವುದಕ್ಕೂ ಮಣೆ ಹಾಕದೇ ತತ್ ಕ್ಷಣಕ್ಕೆ ನೆರವಿಗೆ ಬರೋದು ಈ ಸ್ನೇಹ ಮಾತ್ರ. ಇಂಥಹ ಅಮೂಲ್ಯದ ಸ್ನೇಹಕ್ಕೆ ಮರುಜೀವ ತುಂಬುವ ಕಾಯಕದಲಿ ಆರ್ ವೈಎಂಇಸಿ ಕಾಲೇಜಿನ ಯುವಕ, ಯುವತಿಯರು ಮಿಂದೆದ್ದರು.

Body:ನಾನಾ ಸಾಂಸ್ಕೃತಿಕ ಕಾರ್ಯಕ್ರಮ: ವಿಶ್ವ ಸ್ನೇಹಿತರ ದಿನಾಚರಣೆ ನಿಮಿತ್ತ ಪ್ರತಿವರ್ಷವೂ ಆರ್ ವೈಎಂಇಸಿ ಲೀಡ್ ನ ಯುವಕ, ಯುವತಿಯರು ಈ ದಯಾಶಂಕರ ಗುರುಕುಲ ಆಶ್ರಮದಲ್ಲೇ ಇಡೀ ದಿನ ಬೀಡುಬಿಟ್ಟು ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾರೆ.
ಗುರುಕುಲ ಆಶ್ರಮದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆಡವಲು ಈ ಸಾಂಸ್ಕೃತಿಕ ಕಾರ್ಯಕ್ರಮ ನೆರವಾಗಲಿದೆ. ಚಿತ್ರಕಲೆ, ಆಶುಭಾಷಣ, ಏಕಪಾತ್ರಭಿನಯ, ಚಲನಚಿತ್ರ ಹಾಡು ಗಳಿಗೆ ಸಾಮೂಹಿಕವಾಗಿ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರೆ ಕಾರ್ಯಕ್ರಮ ಆಯೋಜಿಸಿ ಗುರುಕುಲ ಆಶ್ರಮದ ಮಕ್ಕಳಿಗೆ ಮನೋರಂಜನಾತ್ಮಕವಾಗಿ ಚುರುಕುಗೊಳಿಸುವ ಕಾರ್ಯವು ಆರ್ ವೈಎಂಇಸಿ ಕಾಲೇಜಿನ ಯುವಕ, ಯುವತಿಯರಿಂದ ನಡೆ ಯಲಿದೆ.
ಇಂದೊಂದು ವಿಭಿನ್ನ ರೀತಿಯ ಆಚರಣೆ: ಪ್ರತಿವರ್ಷ ನನ್ನ ಇಷ್ಟದ ಗೆಳತಿಯೊಂದಿಗೆ ಈ ದಿನವನ್ನು ಆಚರಿಸುತ್ತಿದ್ದೆ. ಈ ವರ್ಷ ಲೀಡ್ ನ ಸಹಯೋಗದಲ್ಲಿ ಗುರುಕುಲ ಆಶ್ರಮದ ಮಕ್ಕಳೊಂದಿಗೆ ಆಚರಿಸಲಾಗುತ್ತದೆ.‌ ಇದೊಂದು ವಿಭಿನ್ನ ರೀತಿಯ ಆಚರಣೆಯಾಗಿದ್ದು. ನನಗೆ ಹೊಸತು ಎನಿಸಿದೆ
ಎಂದು ಆರ್ ವೈಎಂಇಸಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೃಜನಾ ತಿಳಿಸಿದ್ದಾರೆ.ಅದು
ಗುರುಕುಲ ಆಶ್ರಮದಲ್ಲಿ ಸ್ನೇಹಿತರ ದಿನವನ್ನ ಆಚರಿಸೋದು ಮನಸ್ಸಿಗೆ ನಾಟಿತು: ಪ್ರತಿವರ್ಷ ಸ್ನೇಹಿತರೊಂದಿಗೆ ಈ ದಿನವನ್ನ ಸಂಭ್ರಮಿಸೋದು ಒಂದು ರೀತಿಯ ಖುಷಿ ತಂದರೆ. ಈ‌ ಗುರುಕುಲ ಆಶ್ರಮದ ಮಕ್ಕಳೊಂದಿಗೆ ಸ್ನೇಹಿತರ ದಿನವನ್ನ ಆಚರಿಸೋದು ನನ್ನ ಮನಸ್ಸಿಗೆ ನಾಟಿತು ಎಂದು ಆರ್ ವೈಎಂಇಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಎನ್.ಕಿರಣ ತಿಳಿಸಿದ್ದಾರೆ.
ಪ್ರತಿವರ್ಷ ಈ ದಿನದಂದು ಆರ್ ವೈಎಂಇಸಿ ಲೀಡ್ ನ ಯುವಕ, ಯುವತಿಯರು ನಮ್ಮೊಂದಿಗೆ ಬಂದು ಸ್ನೇಹಿತರ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸೋದು ನಮಗೆ ಖುಷಿ ತಂದಿದೆ. ಈ ದಿನ ಬರೋದನ್ನೇ ನಾವೆಲ್ಲ ಕಾಯುತ್ತಾ ಕುಳಿತಿರುತ್ತೇವೆ ಎಂದು ದಯಾಶಂಕರ ಗುರುಕುಲ ಆಶ್ರಮದ ವಿದ್ಯಾರ್ಥಿ ಪ್ರವೀಣ ಪೂಜಾರಿ ತಿಳಿಸಿದ್ದಾರೆ.
ಭಾಗಿ: ಆರ್ ವೈಎಂಇಸಿ ಲೀಡ್ ನ ಮಹಾಂತೇಶ, ರಂಗ
ನಾಥ, ಸಂಜಯ್, ರಶ್ಮಿ, ಸೋಮಶೇಖರ, ಸುಜಯ್, ರಶ್ಮಿ ಪಿ.ಜಾಧವ್, ಸೃಜನಾ, ಕಿರಣ, ವಿಷ್ಣು ಪ್ರಸಾದ, ಸಹನಾ, ಇಮ್ರಾನ್, ಸಚಿನ್ ಜಗ್ಗಲ್, ರಾಕೇಶ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_2_FRIENDSHIP_DAY_SPECIAL_VISUALS_7203310

ಬೈಟ್ 1: ಸೃಜನಾ, ಆರ್ ವೈಎಂಇಸಿ ವಿದ್ಯಾರ್ಥಿನಿ.

ಬೈಟ್ 2: ಕಿರಣ, ಆರ್ ವೈಎಂಇಸಿ ವಿದ್ಯಾರ್ಥಿ.

ಬೈಟ್ 3: ಪ್ರವೀಣ ಪೂಜಾರಿ, ದಯಾಶಂಕರ ಗುರುಕುಲ ಆಶ್ರಮದ ವಿದ್ಯಾರ್ಥಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.